ಪಶ್ಚಿಮ ಬಂಗಾಳ: ಕಾಳಿ ದೇವಾಲಯ ನಿರ್ಮಾಣಕ್ಕೆ ಭೂಮಿ ದಾನ ಮಾಡಿದ ಬಡ ಮುಸ್ಲಿಂ ರೈತ
ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕೋಮು ಗಲಭೆ ಉಂಟಾಗಿದ್ದು ನೆನಪಿರಬಹುದು. ಇದಾಗಿ 6 ತಿಂಗಳುಗಳೇ ಕಳೆದುಹೋದುವು. ಈ ನಡುವೆಯೇ ಕೋಮು ಸೌಹಾರ್ದತೆ ಸಾರುವ ಹೃದಯಸ್ಪರ್ಶಿ ಘಟನೆಯೊಂದು ನಡೆದಿದೆ.

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕೋಮು ಗಲಭೆ ಉಂಟಾಗಿದ್ದು ನೆನಪಿರಬಹುದು. ಇದಾಗಿ 6 ತಿಂಗಳುಗಳೇ ಕಳೆದುಹೋದುವು. ಹಿಂದೂ ಮುಸ್ಲಿಂ ನಡುವೆ ಹತ್ತಿಕೊಂಡಿದ್ದ ದಳ್ಳುರಿ ಈಗ ಆರುತ್ತಿದೆ.
ಇದೇ ಸಂದರ್ಭದಲ್ಲಿ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿರುವಾಗಲೇ ಪ. ಬಂಗಾಳದ ಮುಸ್ಲಿಂ ರೈತ ಗ್ರಾಮದಲ್ಲಿ ಕಾಳಿ ದೇವಾಲಯ ನಿರ್ಮಾಣಕ್ಕೆ ತನ್ನ ಸ್ವಂತ ಭೂಮಿಯನ್ನು ದಾನ ಮಾಡಿರುವ ಹೃದಯಸ್ಪರ್ಶಿ ಘಟನೆ ನಡೆದಿದೆ.
ಪ.ಬಂಗಾಳದ ನಾಡಿಯಾ ಜಿಲ್ಲೆಯ ಭೀಮ್ ಪುರ್, 450 ಕುಟುಂಬಗಳು ವಾಸವಿರುವ ಗ್ರಾಮ. ಅವರಲ್ಲಿ 150 ಮುಸ್ಲಿಂ ಕುಟುಂಬಗಳೂ ಅನ್ಯೋನ್ಯತೆಯಿಂದ ಜೀವನ ನಡೆಸುತ್ತಿವೆ. ಇದೇ ಗ್ರಾಮದ ಹನನ್ ಮೊಂಡಲ್ ಎಂಬುವವರೇ ದೇವಾಲಯಕ್ಕೆ ಭೂಮಿ ದಾನ ಮಾಡಿದವರು.
ಇಂಡೊ- ಬಾಂಗ್ಲಾ ಗಡಿಯಲ್ಲೇ ಇರುವ ಈ ಗ್ರಾಮದಲ್ಲಿ ಇದುವರೆಗೂ ಬಿ ಎಸ್ ಎಫ್ ಗೆ ಸೇರಿದ ಜಾಗದಲ್ಲಿ ಕಾಳಿ ಮಾತೆಯ ಪೂಜೆ ನಡೆಸುತ್ತಿದ್ದರು. ಅಲ್ಲಿ ಪ್ರಾರ್ಥನೆ ನಡೆಸಲು ಪ್ರತೀ ಬಾರಿ ಭಾರತೀಯ ಸೇನೆಯ ಅನುಮತಿ ಪಡೆದುಕೊಳ್ಲಬೇಕಿತ್ತು. ಕೆಲ ಬಾರಿ ಭದ್ರತಾ ಕಾರಣಗಳಿಗೆ ಅನುಮತಿ ನಿರಾಕರಿಸಲಾಗುತ್ತಿತ್ತು.
ಕಾಳಿ ಪೂಜಾ ಮಂಡಳಿಯ ಅಧ್ಯಕ್ಷ ಬಿಮಲ್ ಸರ್ಕಾರ್ ಹನನ್ ಶ್ಲಾಸ್ಘಿಸಿದ್ದಾರೆ. ಪ.ಬಂಗಾಳ ರಾಜ್ಯದ ನಿಜವಾದ ಗುಣ ಇದುವೇಎಂದು ಅವರು ಬಣ್ಣಿಸಿದ್ದಾರೆ. ಪ್ರತೀ ಬಾರಿ ಸೇನೆಯ ಒಪ್ಪಿಗೆ ಪಡೆಯುವುದನ್ನು ತಪ್ಪಿಸಲು, ಈ ಸಮಸ್ಯೆಗೆ ಶಾಶ್ವತವಾಗಿ ಪರಿಹಾರ ಕಂಡುಕೊಳ್ಲಲು ಭೂಮಿ ನೀಡಿದ್ದಾಗಿ ಹನನ್ ಹೇಳಿದ್ದಾರೆ.
Related Article
ದೇಶಿ ಕಾಳುಮೆಣಸು ಬೆಳೆ ಸಂರಕ್ಷಣೆಗಾಗಿ ಕೊಡಗಿನ ರೈತನಿಗೆ ಪ್ರಶಸ್ತಿ
ಪ್ರಖ್ಯಾತ ಶಾಸ್ತ್ರೀಯ ಸಂಗೀತಗಾರ ಕುಟುಂಬದ ಮೂರನೇ ತಲೆಮಾರಿನ ಮಹತಿ ಸುಬ್ರಮಣಿಯಂ ಮ್ಯೂಸಿಕ್ ವಿಡಿಯೊ ಬಿಡುಗಡೆ
ಟೈಪ್ 1 ಮಧುಮೇಹವನ್ನು ಮೆಟ್ಟಿನಿಂತ ಯೋಧನ ಯಶೋಗಾಥೆ...
ಕನ್ನಡ ಭಾಷೆ-ಸಾಹಿತ್ಯ ಸೇವೆಯಲ್ಲಿ ಶಿವಮೊಗ್ಗದ ಕರ್ನಾಟಕ ಸಂಘ ಸಕ್ರಿಯ
ಅರಣ್ಯದೊಂದಿಗೆ ಬೆಳೆದ ಆಧುನಿಕ ನಾರಿ: ಕೃಷಿ ಮೇಳ ಉದ್ಘಾಟಿಸಿದ ರೈತ ಮಹಿಳೆ ಪ್ರೇಮ ದಾಸಪ್ಪ ಸತ್ಯ ಕಥೆ!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


