ಬ್ಲ್ಯಾಕ್ ಫಂಗಸ್ ಗೆ ಔಷಧಿ ಸಂಶೋಧನೆ ಅಪಾಯಕಾರಿಯಾಗಿತ್ತು: ಶ್ರೀಕಾಂತ್ ಪೈ
ಕೋವಿಡ್ ಸೋಂಕಿತರಲ್ಲಿ ಮಾರಕವಾಗಿ ಪರಿಣಮಿಸುತ್ತಿರುವ ಬ್ಲ್ಯಾಕ್ ಫಂಗಸ್ ಸೋಂಕಿಗೆ ಔಷಧಿ ಸಂಶೋಧನೆ ಅಪಾಯಕಾರಿಯಾಗಿತ್ತು ಎಂದು ಉಡುಪಿ ಮೂಲದ ಶ್ರೀಕಾಂತ್ ಪೈ ಹೇಳಿದ್ದಾರೆ.

ಮಂಗಳೂರು: ಕೋವಿಡ್ ಸೋಂಕಿತರಲ್ಲಿ ಮಾರಕವಾಗಿ ಪರಿಣಮಿಸುತ್ತಿರುವ ಬ್ಲ್ಯಾಕ್ ಫಂಗಸ್ ಸೋಂಕಿಗೆ ಔಷಧಿ ಸಂಶೋಧನೆ ಅಪಾಯಕಾರಿಯಾಗಿತ್ತು ಎಂದು ಉಡುಪಿ ಮೂಲದ ಶ್ರೀಕಾಂತ್ ಪೈ ಹೇಳಿದ್ದಾರೆ.
ಪ್ರಸ್ತುತ ಮಾರಕ ಬ್ಲಾಕ್ ಫಂಗಸ್ ಸೋಂಕಿಗೆ ನೀಡಲಾಗುತ್ತಿರುವ ಲಿಪೊಸೋಮಲ್ ಆಂಫೊಟೆರಿಸಿನ್ ಬಿ ಔಷಧಿ ಸಂಶೋಧನೆಯಲ್ಲಿ ಶ್ರೀಕಾಂತ್ ಪೈ ಪ್ರಮುಖ ಪಾತ್ರವಹಿಸಿದ್ದರು. ಉಡುಪಿ ಜಿಲ್ಲೆಯ ಗಂಗೊಳ್ಳಿ ಮೂಲದ ಶ್ರೀಕಾಂತ್ ಅನ್ನಪ್ಪ ಪೈ ಅವರು ಈ ಔಷಧಿಗೆ ಅಮೆರಿಕ ಪೇಟೆಂಟ್ ಹೊಂದಿತ್ತು. ಆದರೆ 2008ರಲ್ಲಿ ಈ ಪೇಟೆಂಟ್ ಅವಧಿ ಮುಕ್ತಾಯಗೊಂಡಿದೆ. ಇದೇ ಬ್ಲಾಕ್ ಫಂಗಸ್ ಸೋಂಕಿಗೆ ಸೆರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಮತ್ತು ವ್ಯಾಕ್ಸಿನ್ ಲಿಮಿಟೆಡ್ ಔಷಧಿ ಸಂಶೋಧನೆಯಲ್ಲಿ ತೊಡಗಿತ್ತು. ಇದೇ ಸಂಸ್ಥೆಯಲ್ಲಿ ಶ್ರೀಕಾಂತ್ ಅನ್ನಪ್ಪ ಪೈ ರೀಸರ್ಚ್ ಅಂಡ್ ಡೆವಲೆಪ್ ಮೆಂಟ್ ವಿಭಾಗದ ಮುಖ್ಯಸ್ಥರಾಗಿ ಶ್ರೀಕಾಂತ್ ಅನ್ನಪ್ಪ ಪೈ ಕಾರ್ಯ ನಿರ್ವಹಿಸುತ್ತಿದ್ದರು.
ತಮ್ಮ ಔಷಧಿ ಸಂಶೋಧನೆ ದಿನಗಳನ್ನು ನೆನಪಿಸಿಕೊಂಡ ಶ್ರೀಕಾಂತ್ ಅನ್ನಪ್ಪ ಪೈ ಅವರು, 'ಕಳೆದ ನಾಲ್ಕು ವರ್ಷಗಳಿಂದ ಈ ಔಷಧಿ ಬಳಕೆಯಲ್ಲಿದೆ. ಜೆನೆರಿಕ್ ಲಿಪೊಸೋಮಲ್ ಉತ್ಪನ್ನಗಳಿಗೆ ಯಾವುದೇ ಮಾರ್ಗಸೂಚಿಗಳಿಲ್ಲದ ಕಾರಣ ಇದು ಅಪಾಯಕಾರಿ. ಇದು ಸ್ವೀಕಾರಾರ್ಹವೇ ಎಂದು ಯಾರಿಗೂ ಖಚಿತವಾಗಿರಲಿಲ್ಲ. ಪ್ರತಿಯೊಂದು ಹೆಜ್ಜೆಯೂ ಜಾಗರೂಕರಾಗಿರಬೇಕು ಎಂದು ಹೇಳಿದರು.
ಸಾಂಪ್ರದಾಯಿಕ 3 ಹಂತಗಳ ಔಷಧಿಗಳಿಗೆ ಹೋಲಿಕೆ ಮಾಡಿದರೆ, ಇದು ಒಂದು ಹಂತದ ಔಷಧಿಯಾಗಿದೆ. ಆದರೆ ಈ ಔಷಧಿ ಕುರಿತಂತೆ ತೆಗೆದುಕೊಳ್ಳಬೇಕಾದ ಯಾವ ರೀತಿಯ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂಬುದರ ಕುರಿತು ಯಾವುದೇ ಲಿಖಿತ ದತ್ತಾಂಶಗಳಿರಲಿಲ್ಲ. ಪ್ರಯೋಗದ ಮುಖಾಂತರವೇ ನಾವು ಮುಂದುವರೆಯಬೇಕಿತ್ತು. ಇದು ಕಠಿಣ ಹಾದಿಯಾಗಿತ್ತು. ಆದರೆ ಭಾರತ್ ಸೆರಮ್ ಸಂಸ್ಥೆ ಇದನ್ನು ಸವಾಲಾಗಿ ತೆಗೆದುಕೊಂಡಿತ್ತು. ಲಸಿಕೆ ಅಭಿವೃದ್ಧಿಗೆ ಬರೊಬ್ಬರಿ ಏಳು ವರ್ಷಗಳನ್ನು ತೆಗೆದುಕೊಂಡಿತ್ತು, ಏಕೆಂದರೆ ಯುರೋಪಿನಿಂದ ಲಸಿಕೆ ಅನುಮೋದನೆ ಪಡೆಯಬೇಕಿತ್ತು. ಯುರೋಪಿಯನ್ ಏಜೆನ್ಸಿಗಳು ಅನುಮೋದಿಸಿದ ಸ್ಥಳದಲ್ಲಿ ಔಷಧಿ ಪರೀಕ್ಷೆ ಮಾಡಬೇಕಾಗಿತ್ತು. ಇದು ಸಾಕಷ್ಟು ಸಮಯ ತೆಗೆದುಕೊಂಡಿತು. ಎಲ್ಲವೂ ಒಂದೇ ಸ್ಥಳದಲ್ಲಿದಿದ್ದರೆ, ಅದನ್ನು ಮೂರರಿಂದ ನಾಲ್ಕು ವರ್ಷಗಳಲ್ಲಿ ಮಾಡಬಹುದಿತ್ತು ಎಂದು ಪೈ ಅವರು ಹೇಳಿದ್ದಾರೆ.
ಆಂಫೊಟೆರಿಸಿನ್ ಎಮಲ್ಷನ್ ಉತ್ಪನ್ನ ಶಿಲೀಂಧ್ರಗಳ ಸೋಂಕಿನ ವಿರುದ್ಧ ಹೋರಾಡುತ್ತದೆ. ಇದರ ಉತ್ಪಾದನೆಯನ್ನು ಉತ್ತೇಜಿಸಿದರೆ ಬಹಳಷ್ಟು ಜನರಿಗೆ ಸಹಾಯ ಮಾಡಬಹುದು ಎಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


