ನಿರ್ಲಕ್ಷ್ಯಕ್ಕೊಳಗಾದ ಬಾಲಕಿಯರಿಗೆ ನೆರವು: ದೆಹಲಿಯ 15 ವರ್ಷದ ಬಾಲಕನಿಗೆ ಡಯಾನ ಪ್ರಶಸ್ತಿ
ತನ್ನ ವಯಸ್ಸಿನಲ್ಲಿ ಶ್ರೇಷ್ಠ ಸಹಾಯ ಮಾಡಿರುವ ದೆಹಲಿಯ ಬಾಲಕನಿಗೆ ಪ್ರತಿಷ್ಠಿತ ಡಯಾನ ಪ್ರಶಸ್ತಿ ಮುಡಿಗೇರಿದೆ.

ನವದೆಹಲಿ: ತನ್ನ ವಯಸ್ಸಿನಲ್ಲಿ ಗರಿಷ್ಠ ಸಹಾಯ ಮಾಡಿರುವ ದೆಹಲಿಯ ಬಾಲಕನಿಗೆ ಪ್ರತಿಷ್ಠಿತ ಡಯಾನ ಪ್ರಶಸ್ತಿ ಮುಡಿಗೇರಿದೆ.
ತನ್ನ ದೈನಂದಿನ ಜೀವನದ ಹೊರತಾಗಿಯೂ ಮತ್ತೋರ್ವರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತರುವುದಕ್ಕೆ ಯತ್ನಿಸಿರುವ ಇಶಾನ್ ಕಪೂರ್ ಗೆ ಡಯಾನ ಪ್ರಶಸ್ತಿ ಲಭಿಸಿದೆ. ವೆಲ್ಲಿಂಗ್ ಟನ್ ಕಾಲೇಜ್ (ಬ್ರಿಟನ್) ನ ವಿದ್ಯಾರ್ಥಿಯಾಗಿರುವ ಇಶಾನ್ ಕಪೂರ್, ಯುವಕನೋರ್ವ ಕೈಗೊಳ್ಳಬಹುದಾದ ಶ್ರೇಷ್ಠ ಸಾಮಾಜಿಕ ಕ್ರಮ ಹಾಗೂ ಮಾನವೀಯ ಶ್ರಮಗಳನ್ನು ಗುರುತಿಸಿ ಡಯಾನ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಇಶಾನ್ ನವದೆಹಲಿಯ ಶ್ರೀ ರಾಮಕೃಷ್ಣ ಆಶ್ರಮದೊಂದಿಗೆ ನಿಕಟವಾಗಿ ಸಂಪರ್ಕದಲ್ಲಿದ್ದು, ನಿರ್ಲಕ್ಷ್ಯಕ್ಕೊಳಗಾದ ಯುವತಿಯರಿಗೆ ಸಮವಸ್ತ್ರ ಲಭ್ಯವಾಗುವುದಕ್ಕೆ ಸಹಾಯ ಮಾಡಲು ಶ್ರಮಿಸಿದ್ದಾರೆ.
ದೀರ್ಘಾವಧಿ ರಾಷ್ಟ್ರವ್ಯಾಪಿ ಲಾಕ್ ಡೌನ್ ನ ಅವಧಿಯಲ್ಲಿ ಪ್ರತಿಯೊಬ್ಬ ಶಿಕ್ಷಕ-ವಿದ್ಯಾರ್ಥಿಗಳೂ ಆನ್ ಲೈನ್ ಸಂಪರ್ಕದಲ್ಲಿರುವುದನ್ನು ಖಾತ್ರಿಪಡಿಸಿಕೊಳ್ಳುವುದಕ್ಕೆ ಇಶಾನ್ 5000£ ಗಳಷ್ಟು ಹಣ ಸಂಗ್ರಹಿಸುವ ಹಾಗೂ 100 ಲ್ಯಾಪ್ ಟಾಪ್, ಟ್ಯಾಬ್ಲೆಟ್ ಸಂಗ್ರಹಿಸುವ ಯೋಜನೆಯನ್ನು ರೂಪಿಸಿ, ಕಾರ್ಯರೂಪಕ್ಕೆ ತಂದಿದ್ದಾರೆ.
ಡಯಾನಾ ಪ್ರಶಸ್ತಿಯನ್ನು ವ್ಹೇಲ್ಸ್ ನ ರಾಜಕುಮಾರಿಯ ಸ್ಮರಣಾರ್ಥ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಇದೇ ಹೆಸರಿನಲ್ಲಿ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಆಕೆಯ ಇಬ್ಬರೂ ಮಕ್ಕಳಾದ ಡ್ಯೂಕ್ ಆಫ್ ಕೇಂಬ್ರಿಡ್ಜ್, ಡ್ಯೂಕ್ ಆಫ್ ಸಸೆಕ್ಸ್ ನೆರವು ಇದೆ.
ಇಶಾನ್ ಅವರ ಸಹಾನುಭೂತಿ ಹಾಗೂ ಸಮರ್ಪಣಾ ಭಾವದಿಂದ ಹಲವು ಯುವ ಜನತೆಗೆ ಅಡಚಣೆಗಳ ಹೊರತಾಗಿಯೂ ವಿದ್ಯಾಭ್ಯಾಸ ಮುಂದುವರೆಸುವುದಕ್ಕೆ ಉತ್ತೇಜನ ದೊರೆತಂತಾಗಿದೆ. ಇಶಾನ್ ಅವರಿಗೆ ಹಾಗೂ ಬ್ರಿಟನ್, ವಿಶ್ವಾದ್ಯಂತ ಪ್ರಶಸ್ತಿ ಸ್ವೀಕರಿಸಿರುವವರಿಗೆ ಅಭಿನಂದನೆ ಸಲ್ಲಿಸುತ್ತೇವೆ" ಎಂದು ಡಯಾನಾ ಅವಾರ್ಡ್ ನ ಸಿಇಒ ಟೆಸ್ಸಿ ಓಜೊ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


