ಹಿಮಾಚಲ ಪ್ರದೇಶ: 18,570 ಅಡಿ ಆಳದ ಕಂದಕದಿಂದ ಗಾಯಗೊಂಡ ಚಾರಣಿಗನನ್ನು ರಕ್ಷಿಸಿದ ಐಟಿಬಿಪಿ ತಂಡ!
ಜೀವ ರಕ್ಷಕ ಕಾರ್ಯಾಚರಣೆಯೊಂದರಲ್ಲಿ, 19 ನೇ ಬೆಟಾಲಿಯನ್ ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ (ಐಟಿಬಿಪಿ) ಪಡೆ 18 ಸಾವಿರದ 570 ಅಡಿ ಆಳದಲ್ಲಿ ಬಿದ್ದು ಗಾಯಗೊಂಡಿದ್ದ ಚಾರಣಿಗನನ್ನು ರಕ್ಷಣೆ ಮಾಡಿದ್ದಾರೆ.

ಕಲ್ಲು: ಜೀವ ರಕ್ಷಕ ಕಾರ್ಯಾಚರಣೆಯೊಂದರಲ್ಲಿ, 19 ನೇ ಬೆಟಾಲಿಯನ್ ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ (ಐಟಿಬಿಪಿ) ಪಡೆ 18 ಸಾವಿರದ 570 ಅಡಿ ಆಳದಲ್ಲಿ ಬಿದ್ದು ಗಾಯಗೊಂಡಿದ್ದ ಚಾರಣಿಗನನ್ನು ರಕ್ಷಣೆ ಮಾಡಿದ್ದಾರೆ.
ಹಿಮಾಚಲ ಪ್ರದೇಶದ ಶ್ರೀಖಂಡ್ ಮಹಾದೇವ್ ರಸ್ತೆಯಲ್ಲಿ ಈ ಘಟನೆ ನಡೆದಿದ್ದು ಅಪಾಯಕಾರಿ ಅತಿ ಎತ್ತರ ಸಾಂದ್ರತೆಯ ಕಾರ್ಯಾಚರಣೆಯಲ್ಲಿ ಐಟಿಬಿಪಿ ಸಿಬ್ಬಂದಿ ಗಾಯಗೊಂಡ ಚಾರಣಿಗನನ್ನು ಶ್ರೀಖಂಡ್ ಮಹದೇವ್ ಟ್ರೆಕ್ಕಿಂಗ್ ನ ಎತ್ತರ ಪ್ರದೇಶ ಸರ್ಕಂಡ್ ನಿಂದ 18 ಕಿಲೋ ಮೀಟರ್ ದೂರದವರೆಗೆ ಹೊತ್ತು ಸಾಗಿದ್ದಾರೆ.
ಇಡೀ ಮಾರ್ಗವು ಎತ್ತರದ ಅಪಾಯದ ಸವಾಲುಗಳಿಂದ ತುಂಬಿತ್ತು, ಇದರಲ್ಲಿ ಜವಾನರು ಸಿಕ್ಕಿಬಿದ್ದ ಚಾರಣಿಗರನ್ನು ಹೆಚ್ಚು ವೃತ್ತಿಪರ ರೀತಿಯಲ್ಲಿ ರಕ್ಷಿಸಿದರು. 19 ನೇ ಬೆಟಾಲಿಯನ್ ಐಟಿಬಿಪಿಯ ಪರ್ವತಾರೋಹಿಗಳು ಗಾಯಾಳುವನ್ನು 18 ಕಿಲೋ ಮೀಟರ್ ಗಿಂತಲೂ ಹೆಚ್ಚು ಸ್ಟ್ರೆಚರ್‌ನಲ್ಲಿ ಸಾಗಿಸಿ ಸುರಕ್ಷಿತವಾಗಿ ಕರೆತಂದಿದ್ದಾರೆ.
ಗಾಯಾಳು ಚಾರಣಿಗನನ್ನು ನಂತರ ನಾಗರಿಕ ಆಡಳಿತ ವಿಭಾಗಕ್ಕೆ ಹಸ್ತಾಂತರಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


