ವಿಶೇಷ

ವೀಲ್ ಚೇರ್ ಆಸರೆಯಲ್ಲಿದ್ದವರೂ ಬೀಚ್ ಸೌಂದರ್ಯ ಸವಿಯಬಹುದು: ಮರೀನಾ ಬೀಚಿನಲ್ಲಿ ವಿಕಲಾಂಗ ಸ್ನೇಹಿ ಮಾರ್ಗ ನಿರ್ಮಾಣ

ಈ ತಾತ್ಕಾಲಿಕ ಮಾರ್ಗವನ್ನು ಮರದ ಹಲಗೆ ಬಳಸಿ ನಿರ್ಮಾಣ ಮಾಡಲಾಗಿದೆ. ಅದರ ಮೇಲೆ ವೀಲ್ ಚೇರ್ ಸಲೀಸಾಗಿ ಚಾಲನೆ ಮಾಡಬಹುದಾಗಿದೆ.

ವೀಲ್ ಚೇರ್ ಆಸರೆಯಲ್ಲಿದ್ದವರೂ ಬೀಚ್ ಸೌಂದರ್ಯ ಸವಿಯಬಹುದು: ಮರೀನಾ ಬೀಚಿನಲ್ಲಿ ವಿಕಲಾಂಗ ಸ್ನೇಹಿ ಮಾರ್ಗ ನಿರ್ಮಾಣ
ಬೀಚಿನಲ್ಲಿ ನಿರ್ಮಾಣವಾಗಿರುವ ಮಾರ್ಗ
Published On :

ಚೆನ್ನೈ: ವೀಲ್ ಚೇರ್ ಆಸರೆಯಲ್ಲಿದ್ದವರು ಸಮುದ್ರ ತೀರದ ಸೊಬಗನ್ನು ಸವಿಯಲು ಅನುಕೂಲ ಮಾಡಿಕೊಡುವ ಸಲುವಾಗಿ ಚೆನ್ನೈ ನಗರದ ಮರೀನಾ ಬೀಚಿನಲ್ಲಿ ತಾತ್ಕಾಲಿಕ ಮಾರ್ಗವನ್ನು ನಿರ್ಮಿಸಲಾಗಿದೆ. 

ಈ ತಾತ್ಕಾಲಿಕ ಮಾರ್ಗವನ್ನು ಮರದ ಹಲಗೆ ಬಳಸಿ ನಿರ್ಮಾಣ ಮಾಡಲಾಗಿದೆ. ಅದರ ಮೇಲೆ ವೀಲ್ ಚೇರ್ ಸಲೀಸಾಗಿ ಚಾಲನೆ ಮಾಡಬಹುದಾಗಿದೆ. ಈ ಮಾರ್ಗ ಮಂಗಳವಾರ ಉದ್ಘಾಟನೆಯಾಗಲಿದೆ. 

ವಿಕಲಾಂಗ ಸ್ನೇಹಿ ಮಾರ್ಗ ನಿರ್ಮಾಣ ಕುರಿತಾಗಿ ನಗರದ ವಿಕಲಾಂಗ ಸಂಘಟನೆಗಳು ಹರ್ಷ ವ್ಯಕ್ತಪಡಿಸಿವೆ. ಅಲ್ಲದೆ ನಗರಪಾಲಿಕೆಯ ಕೆಲಸಕ್ಕೆ ನಾಗರಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.