50ರ ದಶಕದಲ್ಲಿ ಪುಸ್ತಕ ಕೊಂಡು ಓದಲಾಗದ ಬಾಲಕ, ಇಂದು 2 ಲಕ್ಷ ಪುಸ್ತಕಗಳಿರುವ ಗ್ರಂಥಾಲಯ ಸ್ಥಾಪಕ
ವಿಟ್ಠಲಾಚಾರ್ಯ ಅವರಿಗೀಗ 84 ವರ್ಷ ವಯಸ್ಸು. ಉಪನ್ಯಾಸಕರಾಗಿ ಕೆಲಸಕ್ಕೆ ಸೇರಿದ್ದ ಅವರು ಕಾಲೇಜು ಪ್ರಿನ್ಸಿಪಾಲರಾಗಿ ನಿವೃತ್ತರಾಗಿದ್ದಾರೆ. ಭುವನಗಿರಿ ಜಿಲ್ಲೆಯ ರಾಮಣ್ಣ ಪೇಟ್ ಎಂಬಲ್ಲಿ ಅವರು ನೆಲೆಸಿದ್ದಾರೆ.

ಹೈದರಾಬಾದ್: ಬಹಳ ಹಿಂದೆ ಭಾರತ ಸರ್ಕಾರದೊಡನೆ ಹೈದರಾಬಾದ್ ರಾಜ್ಯ ವಿಲೀನವಾಗುವುದನ್ನು ವಿರೋಧಿಸಿದ್ದ ರಜಾಕರು, ರಾಜ್ಯದಲ್ಲಿ ದೊಂಬಿ ನಡೆಸಿದ್ದರು. ಆ ಸಮಯದಲ್ಲಿ ಬಾಲಕನೋರ್ವ ತನ್ನ ಹಳ್ಳಿಯಲ್ಲಿ ಒಂದು ಗ್ರಂಥಾಲಯವನ್ನು ತೆರೆದಿದ್ದ.
ಹಳ್ಳಿಗರು ವಿದ್ಯಾವಂತರಾದರೆ ತನಗೇ ಕಂಟಕ ಎಂದು ತಿಳಿದ ಜಮೀನ್ದಾರರು ಆ ಗ್ರಂಥಾಲಯವನ್ನು ಮುಚ್ಚಿಹಾಕಿದ್ದರು. ಮುಂದೆ ಅದೇ ಬಾಲಕ ಓದಿ ವಿದ್ಯಾವಂತನಾಗಿ ಉಪನ್ಯಾಸಕನಾಗಿ ಕೆಲಸಕ್ಕೆ ಸೇರುತ್ತಾರೆ. ತೆಲುಗು ಸಾಹಿತ್ಯ ವಲಯದಲ್ಲಿ ಉತ್ತಮ ಬರಹಗಾರ ಎಂದು ಹೆಸರು ಪಡೆಯುತ್ತಾರೆ. ಅನೇಕ ಪ್ರತಿಷ್ಟಿತ ಪ್ರಶಸ್ತಿಗಳು, ಬಿರುದುಗಳು ಅವರನ್ನರಸಿ ಬರುತ್ತವೆ.
ಇಂದು ಆ ಮಹನೀಯರು ಸ್ಥಾಪಿಸಿರುವ ಗ್ರಂಥಾಲಯದಲ್ಲಿ 2 ಲಕ್ಷ ಪುಸ್ತಕಗಳಿವೆ. ಆ ಮಹನೀಯರ ಹೆಸರು ಕುರೆಲ್ಲ ವಿಟ್ಠಲಾಚಾರ್ಯ. ಅವರಿಗೀಗ 84 ವರ್ಷ ವಯಸ್ಸು. ಉಪನ್ಯಾಸಕರಾಗಿ ಕೆಲಸಕ್ಕೆ ಸೇರಿದ್ದ ಅವರು ಕಾಲೇಜು ಪ್ರಿನ್ಸಿಪಾಲರಾಗಿ ನಿವೃತ್ತರಾಗಿದ್ದಾರೆ. ಭುವನಗಿರಿ ಜಿಲ್ಲೆಯ ರಾಮಣ್ಣ ಪೇಟ್ ಎಂಬಲ್ಲಿ ಅವರು ನೆಲೆಸಿದ್ದಾರೆ.
ಇದುವರೆಗೂ ಅವರು ಒಟ್ಟು 22 ಪುಸ್ತಕಗಳನ್ನು ರಚಿಸಿದ್ದಾರೆ. ತಾವು ಚಿಕ್ಕವರಾಗಿದ್ದಾಗ ಪುಸ್ತಕ ಕೊಂಡು ಓದಲು ಶಕ್ತರಾಗಿರಲಿಲ್ಲ. ಹೀಗಾಗಿ ನೆರೆಹೊರೆಯವರು, ಸ್ನೇಹಿತರಿಂದ ಪುಸ್ತಕ ಪಡೆದು ಒಂದೇ ದಿನದಲ್ಲಿ ಓದಿ ಹಿಂದಿರುಗಿಸುತ್ತಿದ್ದರು. ಈ ಕಷ್ಟ ಇನ್ನೊಬ್ಬರಿಗೆ ಬರಬಾರದು ಎನ್ನುವ ಉದ್ದೇಶವೇ ಗ್ರಂಥಾಲಯ ಸ್ಥಾಪನೆಗೆ ಕಾರಣವಾಯಿತು. ಈ ಗ್ರಂಥಾಲಯ ಸ್ಥಾಪನೆಗೆ ವಿಟ್ಠಲಾಚಾರ್ಯ ಅವರ್ ವಿದ್ಯಾರ್ಥಿಗಳೂ ಕಾಣಿಕೆ ನೀಡಿದ್ದಾರೆ ಎನ್ನುವುದು ವಿಶೇಷ.
ಇದನ್ನೂ ಓದಿ: ಸಿಪಿಆರ್ ಮೂಲಕ 20 ವರ್ಷದ ಯುವಕನ ಜೀವ ಉಳಿಸಿದ ನರ್ಸ್!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


