ತಡ ರಾತ್ರಿ ಪೊಲೀಸರಿಂದಲೇ ಮಹಿಳೆಯರಿಗೆ ಮನೆ ತನಕ ಡ್ರಾಪ್: ಆಂಧ್ರ ಪೊಲೀಸರ ನೂತನ ಯೋಜನೆಗೆ ಶ್ಲಾಘನೆ
ಕಾಕಿನಾಡ ನಗರದ ನಿವಾಸಿ ಯಶ್ವಂತಿ ವಿಶಾಖಪಟ್ಟಣಂ ನಿಂದ ನಗರಕ್ಕೆ ಬರುವಾಗ ತಡವಾಗಿತ್ತು. ಸಂಜೆ ತಲುಪಬೇಕಿದ್ದ ಬಸ್ಸು, ದಾರಿ ಮಧ್ಯ ಕೆಟ್ಟಿದ್ದರಿಂದ ತಡವಾಗಿತ್ತು.

ಅಮರಾವತಿ: ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಪೊಲೀಸ್ ಇಲಾಖೆ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ತಡರಾತ್ರಿ ಮನೆಗೆ ಹಿಂದಿರುಗುವ ಮಹಿಳೆಯರನ್ನು ಸುರಕ್ಷಿತವಾಗಿ ಮನೆಗೆ ಡ್ರಾಪ್ ಮಾಡುವುದೇ ಆ ಯೋಜನೆ.
ಮಹಿಳೆಯರ ಸುರಕ್ಷತೆಯ ಕುರಿತು ಎದ್ದಿರುವ ಅಪಸ್ವರದ ಬೆನ್ನಲ್ಲೇ ಪೊಲೀಸರ ಈ ಕ್ರಮಕ್ಕೆ ಜನರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಕಾಕಿನಾಡ ನಗರದ ನಿವಾಸಿ ಯಶ್ವಂತಿ ವಿಶಾಖಪಟ್ಟಣಂ ನಿಂದ ನಗರಕ್ಕೆ ಬರುವಾಗ ತಡವಾಗಿತ್ತು. ಸಂಜೆ ತಲುಪಬೇಕಿದ್ದ ಬಸ್ಸು, ದಾರಿ ಮಧ್ಯ ಕೆಟ್ಟಿದ್ದರಿಂದ ತಡವಾಗಿತ್ತು.
ಆಗ ಸಮಯ ಮಧ್ಯರಾತ್ರಿ 1ರ ಅಸುಪಾಸು. ಆ ಸಮಯದಲ್ಲಿ ಒಬ್ಬರೇ ರಸ್ತೆಯಲ್ಲಿ ನಡೆದುಹೋಗಲೂ ಅವರಿಗೆ ಭಯವಾಯಿತು. ಇನ್ನು ರಿಕ್ಷಾ ಹಿಡಿಯಲು ಕೂಡಾ ಮನಸ್ಸು ತಡವರಿಸಿತು. ಆ ಸಮಯದಲ್ಲಿ ಅವರಿಗೆ ನೆನಪಾಗಿದ್ದು 'ಮಹಿಳೆಯರನ್ನು ಮನೆಗೆ ಸುರಕ್ಷಿತವಾಗಿ ಡ್ರಾಪ್' ಮಾಡುವ ಪೊಲೀಸರ ವಿನೂತನ ಸಹಾಯವಾಣಿ. ಬೇರೆ ದಾರಿ ಕಾಣದೆ ಯಶ್ವಂತಿ ಪೊಲೀಸ್ ಕಂಟ್ರೋಲ್ ರೂಮಿಗೆ ಫೋನ್ ಮಾಡಿದ್ದರು.
ಯಶ್ವಂತಿ ತಮ್ಮ ಪರಿಸ್ಥಿತಿಯನ್ನು ಪೊಲೀಸರಿಗೆ ಮನವರಿಕೆ ಮಾಡಿ, ತಾವು ಮನೆಗೆ ತಲುಪಲು ಸಹಾಯ ಮಾಡುವಂತೆ ಕೇಳಿಕೊಂಡರು. ತಕ್ಷಣವೇ ಮನವಿಗೆ ಪೊಲೀಸರು ಸ್ಪಂದಿಸಿದ್ದರು. ಯಶ್ವಂತಿ ಇದ್ದಲ್ಲಿಗೇ ಇನ್ಸ್ ಪೆಕ್ತರ್ ಮತ್ತು ಆಗ ರೌಂಡ್ಸ್ ನಲ್ಲಿದ್ದ ಪೇದೆಗಳು ಬಂದರು. ಯಶ್ವಂತಿಯನ್ನು ಪೊಲೀಸರು ಸುರಕ್ಷಿತವಾಗಿ ಅವರ ಮನೆಗೆ ಕರೆದೊಯ್ದರು. ಇದೊಂಡು ಉದಾಹರಣೆಯಷ್ಟೇ.
Women Drop at Home ಎಂಬ ಹೆಸರಿನ ಈ ಯೋಜನೆ, ಎಸ್ಪಿ ರವೀಂದ್ರನಾಥ್ ಬಾಬು ಅವರ ಪರಿಕಲ್ಪನೆ. ಈ ಯೋಜನೆ ಶುರುವಾದಾಗಿನಿಂದಲೂಆಸಂಖ್ಯ ಮಹಿಳೆಯರಿಗೆ ರಾತ್ರಿ ವೇಳೆ ಪೊಲೀಸರ ನೆರವು ಒದಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


