'ಅನವರತ ಅಪ್ಪು' ಪುಸ್ತಕ ಬಿಡುಗಡೆ: ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ಬದುಕಿನ ಸಾರ್ಥಕ ಪುಟಗಳು
ಸಮಾಜಮುಖಿ ಕೆಲಸಗಳಿಂದ ಮನೆಮಾತಾಗಿರುವ ಅಪ್ಪು ಅಂಥವರ ವ್ಯಕ್ತಿತ್ವವನ್ನು ಮುಂದಿನ ಪೀಳಿಗೆಗೂ ಪರಿಚಯಿಸಬೇಕಾದ ಜರೂರತ್ತು ಬಹಳವೇ ಇದೆ. ಈ ಸದುದ್ದೇಶವೇ ಲೇಖಕ ರಾಘವೇಂದ್ರ ಅಡಿಗ 'ಅನವರತ ಅಪ್ಪು' ಪುಸ್ತಕ ಬರೆಯಲು ಪ್ರೇರಣೆ.

ಬೆಂಗಳೂರು: ಪುನೀತ್ ರಾಜಕುಮಾರ್ ಇಂದು ನಮ್ಮೊಡನಿಲ್ಲ ಎನ್ನುವುದನ್ನು ಅರಗಿಸಿಕೊಳ್ಳಲು ಕನ್ನಡಿಗರಿಗೆ ಸಾಧ್ಯವಾಗಿಲ್ಲ. ಬಾಲನಟರಾಗಿ ತೆರೆ ಮೇಲೆ ಕಾಣಿಸಿಕೊಂಡಾಗಿನಿಂದ, ಉಸಿರು ನಿಲ್ಲಿಸುವ ಕಡೆಯವರೆಗೂ ಉತ್ಸಾಹದ ಚಿಲುಮೆಯಂತಿದ್ದವರು ಪುನೀತ್.
ಇದನ್ನೂ ಓದಿ: ಉತ್ತರ ಕರ್ನಾಟಕದಲ್ಲಿ ಪುನೀತ್ ಫೋಟೋ ಫ್ರೇಮ್ಗಳಿಗೆ ಬೇಡಿಕೆ; ದೇವರ ಪಕ್ಕದಲ್ಲಿಟ್ಟು ಪೂಜಿಸುವ ಅಭಿಮಾನಿಗಳು!

ಪುನೀತ್ ರಾಜಕುಮಾರ್ ಅವರಿಗೆ ಅಕ್ಷರ ನಮನ ಸಲ್ಲಿಸುವ ವಿಶಿಷ್ಟ ಪುಸ್ತಕ 'ಅನವರತ ಅಪ್ಪು' ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಪತ್ರಕರ್ತ, ಲೇಖಕ ರಾಘವೇಂದ್ರ ಅಡಿಗ ಎಚ್ಚೆನ್ ಈ ಪುಸ್ತಕದ ಕರ್ತೃ.
ಸಮಾಜಮುಖಿ ಕೆಲಸಗಳಿಂದ ಮನೆಮಾತಾಗಿರುವ ಅಪ್ಪು ಅಂಥವರ ವ್ಯಕ್ತಿತ್ವವನ್ನು ಮುಂದಿನ ಪೀಳಿಗೆಗೂ ಪರಿಚಯಿಸಬೇಕಾದ ಜರೂರತ್ತು ಬಹಳವೇ ಇದೆ. ಈ ಸದುದ್ದೇಶವೇ ಲೇಖಕ ರಾಘವೇಂದ್ರ ಅಡಿಗ 'ಅನವರತ ಅಪ್ಪು' ಪುಸ್ತಕ ಬರೆಯಲು ಪ್ರೇರಣೆ.
ಪುನೀತ್ ಅವರ ಹುಟ್ಟಿನಿಂದ ಈವರೆಗೆ ಅವರ ಸಾಧನೆಯ ಹೆಜ್ಜೆಗಳು ಮತ್ತು ಅವರ ವ್ಯಕ್ತಿತ್ವ ಪರಿಚಯವನ್ನು ಸರಳವಾಗಿ ಪ್ರಸ್ತುತ ಪಡಿಸುವುದರ ಮೂಲಕ ಪುನೀತ್ ರನ್ನು ಜೀವಂತವಾಗಿಡುವ ಕಾರ್ಯದಲ್ಲಿ ಅವರು ಯಶ ಕಂಡಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ. ಶಿವಮೊಗ್ಗದ ಹೊಸನಗರ ತಾಲ್ಲೂಕಿನ ಬೆನಕ ಬುಕ್ಸ್ ಬ್ಯಾಂಕ್ ಪ್ರಕಾಶನ ಸಂಸ್ಥೆ (7338437666) ಈ ಪುಸ್ತಕವನ್ನು ಹೊರತಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


