"ಚ್ಯೂಯಿಂಗಮ್ ಜಗಿಯಿರಿ ಕೊರೋನಾ ತಡೆಯಿರಿ" ಎನ್ನುತ್ತಿದ್ದಾರೆ ಸಂಶೋಧಕರು!
ಕೋವಿಡ್-19 ಪ್ರಸರಣ ತಡೆಗೆ ಸಂಶೋಧಕರು ಹೊಸ ಮದ್ದು ಕಂಡುಹಿಡಿದಿದ್ದಾರೆ.

ನವದೆಹಲಿ: ಕೋವಿಡ್-19 ಪ್ರಸರಣ ತಡೆಗೆ ಸಂಶೋಧಕರು ಹೊಸ ಮದ್ದು ಕಂಡುಹಿಡಿದಿದ್ದಾರೆ. ಪೆನ್ಸ್ ಸ್ಕೂಲ್ ಆಫ್ ಡೆಂಟಲ್ ಮೆಡಿಸಿನ್ ನ ಹೆನ್ರಿ ಡೇನಿಯಲ್ ಹಾಗೂ ಇನ್ನಿತರ ಸಂಸ್ಥೆಗಳು ಜೊತೆಗೂಡಿ ಅಭಿವೃದ್ಧಿಪಡಿಸಲಾಗಿರುವ ಚ್ಯೂಯಿಂಗಮ್ ನಿಂದಾಗಿ ಕೊರೋನಾ ತಡೆಯಬಹುದಾಗಿದೆ.
ಚ್ಯೂಯಿಂಗ್ ಗಮ್ ಜೊತೆಗೆ ಸಸ್ಯದಿಂದ ಬೆಳೆದ ಪ್ರೋಟೀನ್ ನ್ನು ಸೇರಿಸಲಾಗಿದ್ದು, ಇದು SARS-CoV-2 ವೈರಾಣುವಿಗೆ ಟ್ರ್ಯಾಪ್ ರೀತಿಯಲ್ಲಿ ಕೆಲಸ ಮಾಡುತ್ತದೆಯಷ್ಟೇ ಅಲ್ಲದೇ ಅದರ ಪ್ರಸರಣ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಈ ಸಂಬಂಧ ನಡೆದಿರುವ ಅಧ್ಯಯನ ವರದಿಯನ್ನು ಮಾಲಿಕ್ಯುಲರ್ ಥೆರೆಪಿ ಜರ್ನಲ್ ನಲ್ಲಿ ಪ್ರಕಟಿಸಲಾಗಿದೆ.
ಲಾಲಾರಸ ಗ್ರಂಥಿಗಳಲ್ಲಿ SARS-CoV-2 ವೈರಾಣು ಪುನರಾವರ್ತನೆಯಾಗುತ್ತದೆ (ದ್ವಿಗುಣಗೊಳ್ಳುತ್ತದೆ) ಮತ್ತು ಈಗಾಗಲೇ ನಮಗೆ ತಿಳಿದಿರುವಂತೆ ಕೋವಿಡ್-19 ಸೋಂಕಿತ ವ್ಯಕ್ತಿ ಕೆಮ್ಮಿದರೆ ಅಥವಾ ಬೇರೊಬ್ಬ ವ್ಯಕ್ತಿಯೊಂದಿಗೆ ಮಾತನಾಡಿದರೆ ಅವರಿಗೂ ಕೋವಿಡ್-19 ಸೋಂಕು ಹರಡುತ್ತದೆ.
ಆದರೆ ಈ ಚ್ಯೂಯಿಂಗ್ ಗಮ್ ಜಗಿಯುವುದರಿಂದ ಲಾಲಾರಸದಲ್ಲಿನ ವೈರಾಣುಗಳು ಸಾವನ್ನಪ್ಪುತ್ತವೆ. ಈ ಮೂಲಕ ಸೋಂಕು ಪ್ರಮಾಣವನ್ನು ತಡೆಗಟ್ಟಬಹುದು ಎಂದು ಹೆನ್ರಿ ಡೇನಿಯಲ್ ಹೇಳಿದ್ದಾರೆ.
ಕೋವಿಡ್-19 ಲಸಿಕೆಗಳಿಂದ ಸಾಂಕ್ರಾಮಿಕದ ಹಾದಿಯನ್ನು ಬದಲಾವಣೆ ಮಾಡುವುದಕ್ಕೆ ಸಾಧ್ಯವಾಗಿದೆ. ಆದರೆ ಪ್ರಸರಣಕ್ಕೆ ಕಡಿವಾಣ ಹಾಕುವುದಕ್ಕೆ ಸಾಧ್ಯವಾಗಿಲ್ಲ. ಪೂರ್ಣಪ್ರಮಾಣದಲ್ಲಿ ಲಸಿಕೆ ಪಡೆದ ಹೊರತಾಗಿಯೂ ಕಡಿಮೆ ತೀವ್ರತೆಯಲ್ಲಿ ಕೋವಿಡ್-19 ಸೋಂಕು ಬಾಧಿಸಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


