ಗಣರಾಜ್ಯೋತ್ಸವ: ಮೊದಲ ಭಾರಿಗೆ ಮಹಿಳಾ ತಂಡದಿಂದ ಬೈಕ್ ಸಾಹಸ
ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ಸಂಪೂರ್ಣ ಮಹಿಳಾ ಯೋಧರ ತಂಡ ಇದೇ 26 ಗಣರಾಜ್ಯ ದಿನದ ಪರೇಡ್ ನಲ್ಲಿ ಮೊಟ್ಟ ಮೊದಲ ಬಾರಿಗೆ ಬೈಕ್ ಸಾಹಸ ಪ್ರದರ್ಶಿಸಲಿದೆ.

ನವದೆಹಲಿ: ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ಸಂಪೂರ್ಣ ಮಹಿಳಾ ಯೋಧರ ತಂಡ ಇದೇ 26 ಗಣರಾಜ್ಯ ದಿನದ ಪರೇಡ್ ನಲ್ಲಿ ಮೊಟ್ಟ ಮೊದಲ ಬಾರಿಗೆ ಬೈಕ್ ಸಾಹಸ ಪ್ರದರ್ಶಿಸಲಿದೆ.
ತಂಡದಲ್ಲಿ ಒಟ್ಟು 65 ಮಂದಿ ಸದಸ್ಯರಿದ್ದು, 350 ಸಿಸಿಯ ರಾಯಲ್ ಎನ್ಫೀಲ್ಡ್ ಬೈಕ್ನಲ್ಲಿ 90 ನಿಮಿಷಗಳ ಕಾಲ ಪ್ರದರ್ಶನ ನೀಡಲಿದ್ದಾರೆ. ಕ್ಷಿಪ್ರ ಕಾರ್ಯಾಚರಣೆ ಪಡೆಯಲ್ಲಿ ನಿಯೋಜಿತರಾಗಿರುವ ಇನ್ಸ್ಪೆಕ್ಟರ್ ಸೀಮಾ ಅವರು ತಂಡ ಮುನ್ನಡೆಸಲಿದ್ದಾರೆ.
2014ರಲ್ಲಿ ಸಂಪೂರ್ಣ ಮಹಿಳೆಯರನ್ನು ಒಳಗೊಂಡ ತಂಡ ರಚಿಸಲು ಚಿಂತನೆ ನಡೆಸಿ, ಅದನ್ನು ಸಜ್ಜುಗೊಳಿಸಲಾಗಿದೆ ಎಂದು ಸಿಆರ್ಪಿಎಫ್ ವಕ್ತಾರ ಡೆಪ್ಯುಟಿ ಇನ್ಸ್ಪೆಕ್ಟರ್ ಜನರಲ್ ಮೋಸೆಸ್ ದಿನಕರನ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


