ವಿನೂತನ ಕಲ್ಪನೆ: ಬೀದಿ ನಾಯಿಗಳಿಗೆ ಆಶ್ರಯವಾದ ಟಿವಿ ಬಾಕ್ಸ್ ಗಳು!
ಟಿವಿಯನ್ನು ಹಲವು ಬಾರಿ, ಹಲವು ಮಂದಿ ಮೂರ್ಖರ ಪೆಟ್ಟಿಗೆ ಎಂದೇ ಹೇಳುವುದುಂಟು ಆದರೆ ಅದರಿಂದ ಆಗಿರುವ ಉಪಯೋಗಗಳು ಮಾತ್ರ ಹಲವಾರಿವೆ.

ಗುವಾಹಟಿ: ಟಿವಿಯನ್ನು ಹಲವು ಬಾರಿ, ಹಲವು ಮಂದಿ ಮೂರ್ಖರ ಪೆಟ್ಟಿಗೆ ಎಂದೇ ಹೇಳುವುದುಂಟು ಆದರೆ ಅದರಿಂದ ಆಗಿರುವ ಉಪಯೋಗಗಳು ಮಾತ್ರ ಹಲವಾರಿವೆ.
ಅಸ್ಸಾಂ ನ ಶಿವಸಾಗರ್ ಟೌನ್ ನಲ್ಲಿ ಓರ್ವ ಯುವಕ ಇದನ್ನು ಸಾಧಿಸಿ ತೋರಿಸಿದ್ದು, ನಾಯಿಗಳಿಗೆ ಚಳಿಯಾಗದಿರಲಿ ಎಂದು ತ್ಯಾಜ್ಯಕ್ಕೆ ಹಾಕಿದ್ದ ಟಿವಿ ಬಾಕ್ಸ್ ಗಳಿಂದ ನಾಯಿಗಳಿಗೆ ಗೂಡು ಮಾಡಿದ್ದಾರೆ.
"ಸಾಕು ಪ್ರಾಣಿಗಳಿಗೆ ಎಲ್ಲಾ ರೀತಿಯ ಸೌಲಭ್ಯವೂ ಸಿಗಲಿದೆ, ಆದರೆ ಬೀದಿ ನಾಯಿಗಳಿಗೆ ಮಾತ್ರ ಆಹಾರದಿಂದ ಹಿಡಿದು ಆಶ್ರಯದವರೆಗೂ ಸಮಸ್ಯೆಯೇ. ಈ ರೀತಿಯ ಬೀದಿ ನಾಯಿಗಳಿಗಾಗಿ ನಾನು ಏನಾದರೂ ಮಾಡಬೇಕು ಎನಿಸಿತು, ಆಗಲೇ ಈ ಟಿವಿ ಬಾಕ್ಸ್ ಗಳಿಂದ ಆಶ್ರಯವನ್ನು ಕಲ್ಪಿಸಿದೆ. ದಿ ಕೆನಲ್ ನ ತಯಾರಕ 32 ವರ್ಷದ ಅಭಿಜಿತ್ ಡೊವಾರಾಹ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಹೇಳಿದ್ದಾರೆ.
ಕೆಲವೇ ವರ್ಷಗಳ ಹಿಂದೆ ಅಭಿಜಿತ್ ಅವರ ಸಹೋದರ ಮನೆಗೆ ನಾಯಿ ಮರಿ ತಂದಿದ್ದರು. ಈ ಬಳಿಕ ನಾಯಿಗಳ ಬಗ್ಗೆ ಅಭಿಜಿತ್ ವಿಶೇಷ ಪ್ರೀತಿ ಬೆಳೆಸಿಕೊಂಡಿದ್ದಾರೆ.
ಅಭಿಜಿತ್ ನ ಈ ಪ್ರಾಣಿಪ್ರಿಯ ಕೆಲಸಗಳನ್ನು ಗುರುತಿಸಿರುವ ಅನೇಕ ಸಮಾನ ಮನಸ್ಕರು, ಪಶುವೈದ್ಯರೊಬ್ಬರು ಅಭಿಜಿತ್ ಜೊತೆ ಕೈ ಜೋಡಿಸಿದ್ದಾರೆ ಸ್ಥಳೀಯರು ಅಭಿಜಿತ್ ನ್ನು ಕಸದಿಂದ ಉಪಯೋಗವಾಗುವಂತಹ ವಸ್ತುಗಳನ್ನು ತಯಾರಿಸುವ ಹೊಸತನನ್ನು ಸೃಷ್ಟಿಸುವವನೆಂದೇ ಗುರುತಿಸುತ್ತಾರೆ.
ಈ ಹಿಂದೆ ಮಹಿಳೆಯರ ರಕ್ಷಣೆಗಾಗಿ ಟಾರ್ಚ್ ನ್ನು ತಯಾರಿಸಿದ್ದಷ್ಟೇ ಅಲ್ಲದೇ, ಪ್ಯಾಂಡಮಿಕ್ ಅವಧಿಯಲ್ಲಿ ಸ್ಯಾನಿಟೈಸೇಷನ್ ಗೂ ಗ್ಯಾಡ್ಜೆಟ್ ಗಳನ್ನು ಕಂಡು ಹಿಡಿದಿದ್ದರು.
ಕಳೆದ 5 ವರ್ಷಗಳ ಅವಧಿಯಲ್ಲಿ ನಾನು ಕಸದಿಂದ 50 ಕ್ಕೂ ಹೆಚ್ಚು ಬಳಕೆಯ ವಸ್ತುಗಳನ್ನು ತಯಾರಿಸಿದ್ದೇನೆ, ಆದ್ದರಿಂದ ಜನರು ವಸ್ತುಗಳನ್ನು ತ್ಯಾಜ್ಯಕ್ಕೆ ಹಾಕುವ ಬದಲು ನನ್ನ ಬಳಿ ನೀಡುತ್ತಾರೆ. ನನ್ನ 2 ರೂಮ್ ನಲ್ಲಿ 7 ಟಿವಿ ಸೆಟ್ ಗಳಿದ್ದವು. ಇದರಿಂದ ನಾಯಿಗಳಿಗೆ ಆಶ್ರಯ ನೀಡುವ ಆಲೋಚನೆ ಬಂದಿತ್ತು ಎಂದು ಅಭಿಜಿತ್ ಹೇಳುತ್ತಾರೆ. ಅಭಿಜಿತ್ ನ ಕೆಲಸಗಳನ್ನು ಶಿವಸಾಗರ್ ನ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಎಐ ಅಝರ್ ಅಲಿ ಕೂಡ ಗುರುತಿಸಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


