ಕಣ್ಣುಮುಚ್ಚಿ ಸ್ಕೇಟಿಂಗ್ ಮಾಡಿ ಕನ್ನಡ ಬಾಲಕಿಯಿಂದ ವಿಶ್ವದಾಖಲೆ!
ಕನ್ನಡನಾಡಿನ ಹೆಮ್ಮೆಯ ಕುವರಿ 14 ವರ್ಷದ ಬಾಲಕಿ ಗುರುವಾರ ಬೆಳಿಗ್ಗೆ ಹೊಸ ವಿಶ್ವ ದಾಖಲೆಯನ್ನು ರಚಿಸುವ ಮೂಲಕ ಅಪರೂಪದ ಸಾಧನೆ ಮೆರೆದಿದ್ದಾಳೆ

ಹುಬ್ಬಳ್ಳಿ: ಕನ್ನಡನಾಡಿನ ಹೆಮ್ಮೆಯ ಕುವರಿ 14 ವರ್ಷದ ಬಾಲಕಿ ಗುರುವಾರ ಬೆಳಿಗ್ಗೆ ಹೊಸ ವಿಶ್ವ ದಾಖಲೆಯನ್ನು ರಚಿಸುವ ಮೂಲಕ ಅಪರೂಪದ ಸಾಧನೆ ಮೆರೆದಿದ್ದಾಳೆ
ಹುಬ್ಬಳ್ಳಿಯ 7 ನೇ ತರಗತಿ ಬಾಲಕಿ ಓಜಲ್ ನಲವಾಡೆ ಈ ಸಾಧನೆ ಮಾಡಿದ ಬಾಲಕಿಯಾಗಿದ್ದು ಈಕೆ ಕಣ್ಣುಮುಚ್ಚಿಕೊಂಡು 51 ಸೆಕೆಂಡುಗಳಲ್ಲಿ 400 ಮೀಟರ್ ದೂರವನ್ನು ಸ್ಕೇಟಿಂಗ್ ಮೂಲಕ ಕ್ರಮಿಸಿವುದರೊಡನೆ ನೂತನ ದಾಖಲೆ ಬರೆದಿದ್ದಾಳೆ.
ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಅಧಿಕಾರಿಗಳು ಓಜಲ್ 400 ಮೀಟರ್ ನಲ್ಲಿ ವಿಶ್ವದ ಅತ್ಯಂತ ವೇಗದ ಬ್ಲೈಂಡ್ ಫೋಲ್ಡ್ ಸ್ಕೇಟರ್ (blindfold skater) ಎಂದು ಘೋಷಿಸಿದರು.ಈ ವೇಳೆ ಆಕೆಯ ಕುಟುಂಬ, ಹಿತೈಷಿಗಳು ಹಾಗೂ ಸ್ಕೇಟಿಂಗ್ ಅಭಿಮಾನಿಗಳು ಹಾಜರಿದ್ದು ಅವರೆಲ್ಲರ ಹರ್ಷೋದ್ಗಾರಗಳ ನಡುವೆ ಬಾಲಕಿಗೆ ಪ್ರಮಾಣಪತ್ರವನ್ನು ವಿತರಿಸಲಾಗಿದೆ.
ಚೇತನಾ ಕಾಲೇಜಿನ ಬಳಿ ನಡೆದ ಈ ಕಾರ್ಯಕ್ರಮವು ಮುಂಜಾನೆ 5.30 ರ ಸುಮಾರಿಗೆ ನಡೆದಿದ್ದು ಒಟ್ಟು ಮೂರು ಪ್ರಯತ್ನಗಳಲ್ಲಿ ಕಡೇ ಪ್ರಯತ್ನದಲ್ಲಿ ದಾಖಲೆ ನಿರ್ಮಾಣವಾಗಿದೆ. ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್ ಅಧಿಕಾರಿಗಳು ಬಾಲಕಿಗೆ ಈ ಸಾಹಸವನ್ನು ಪೂರ್ಣಗೊಳಿಸಲು 60 ಸೆಕೆಂಡುಗಳ ಸಮಯವನ್ನು ನೀಡಿದ್ದರು.
ವಿಶ್ವದಾಖಲೆ ಪ್ರಮಾಣಪತ್ರ ಪಡೆದ ಓಜಲ್ ಮಾಧ್ಯಮಗಳೊಂದಿಗೆ ಮಾತನಾಡಿ "ನನಗೆ ಈ ಸಾಹಸ ಮಾಡಲು ಬೆಂಬಲಿಸಿದ ಎಲ್ಲರಿಗೆ ಧನ್ಯವಾದ. "ನನ್ನ ಪೋಷಕರು, ತರಬೇತುದಾರ ಮತ್ತು ಕುಟುಂಬವು ಒಂದು ದೊಡ್ಡ ಬೆಂಬಲ ನಿಡಿದೆ. ಭವಿಷ್ಯದಲ್ಲಿ ಅವರ ಬೆಂಬಲದೊಂದಿಗೆ ನಾನು ಹೆಚ್ಚಿನದನ್ನು ಸಾಧಿಸುತ್ತೇನೆ" ಎಂದು ಅವರು ಹೇಳಿದರು.
ಓಜಲ್‌ನ ಸ್ಕೇಟಿಂಗ್ ತರಬೇತುದಾರ ಅಕ್ಷಯ್ ಸೂರ್ಯವಂಶಿ ಹೇಳಿದಂತೆ "ಹಲವು ದಿನಗಳವರೆಗೆ ಮುಂಜಾನೆ ಅಭ್ಯಾಸ ಮಾಡುತ್ತಿದ್ದ ಓಜಲ್ ಕಣ್ಣುಮುಚ್ಚಿ ವೇಗವಾಗಿ ಸ್ಕೇಟಿಂಗ್ ಮಾಡುವುದು ಅಪರೂಪದ ಸಾಧನೆ, ದೃಢ ನಿಶ್ಚಯ ಮತ್ತು ಕಠಿಣ ಪರಿಶ್ರಮದಿಂದ ಅವಳು ಅದನ್ನು ಸಾಧಿಸಿದ್ದಾಳೆ" ಎಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


