ವೈದ್ಯಲೋಕದ ಅಚ್ಚರಿ! ಗಂಡು ಮಗುವನ್ನು ಹೆತ್ತ ಒಂದೇ ತಿಂಗಳಲ್ಲಿ ಅವಳಿ ಮಕ್ಕಳ ತಾಯಿಯಾದ ಮಹಿಳೆ
ಮಹಿಳೆಯೊಬ್ಬಳು ಒಂದು ಮಗುವಿಗೆ ಜನ್ಮ ನೀಡಿದ 26 ದಿನಗಳ ನಂತರ ಮತ್ತೆ ಅವಳಿ ಮಕ್ಕಳಿಗೆ ಜನ್ಮ ನೀಡಿರುವ ಅಪರೂಪದ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.

Published On :
ಢಾಕಾ: ಮಹಿಳೆಯೊಬ್ಬಳು ಒಂದು ಮಗುವಿಗೆ ಜನ್ಮ ನೀಡಿದ 26 ದಿನಗಳ ನಂತರ ಮತ್ತೆ ಅವಳಿ ಮಕ್ಕಳಿಗೆ ಜನ್ಮ ನೀಡಿರುವ ಅಪರೂಪದ ಘಟನೆ ಬಾಂಗ್ಲಾದೇಶದಲ್ಲಿ ನಡೆದಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಅರೀಫಾ ಸುಲ್ತಾನಾ ಇತಿ ಎಂಬ ಮಹಿಳೆ ಜೆಸ್ಸೋರ್ ನ ಅದ್-ದಿನ್ ಆಸ್ಪತ್ರೆಗೆ ಮಾರ್ಚ್ 22ರಂದು ದಾಖಲಾಗಿದ್ದು ಸಿಸೇರಿಯನ್ ಮೂಲಕ ಅವಳಿ ಮಕ್ಕಳಿಗೆ ಜನ್ಮ ನಿಡಿದ್ದಾರೆ. ಆದರೆ ಇದೇ ಮಹಿಳೆ ಫೆಬ್ರವರಿ 25ರಂದು ಸಾಮಾನ್ಯ ಹೆರಿಗೆ ಮುಖಾಂತರ ಗಂಡು ಮಗುವನ್ನು ಹೆತ್ತಿದ್ದರು ಎಂದು bdnews24.com ಜಾಲತಾಣ ವರದಿ ಮಾಡಿದೆ.
ಮಹಿಳೆ ದಾಖಲಾಗಿದ್ದ ಆಸ್ಪತ್ರೆಯ ಸ್ತ್ರೀರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶೈಲಾ ಪೊದ್ದಾರ್ ಮಾತನಾಡಿ ಅರೀಪಾ ಸುಲ್ತಾನಾಗೆ ಎರಡು ಗರ್ಭಕೋಶಗಳಿದ್ದವು. ಆಕೆಗೆ ಎರಡು ಗರ್ಭಕೋಶಗಳಿರುವುದು ಅಲ್ಟ್ರಾಸೋನೋಗ್ರಫಿ ಪರೀಕ್ಷೆಯಲ್ಲಿ ಪತ್ತೆಯಾಗಿತ್ತು ಎಂದಿದ್ದಾರೆ.
"ಮೊದಲ ಮಗುವನ್ನು ಒಂದು ಗರ್ಭಾಶಯದಿಂದ ಹೊರತೆಗೆದರೆ ಮತ್ತೆ ಅವಳಿ ಮಕ್ಕಳೂ ಇನ್ನೊಂದು ಗರ್ಭಾಶಯದಲ್ಲಿದ್ದವು. ತಾಯಿ ಹಾಗೂ ಮಕ್ಕಳು ಆರೋಗ್ಯವಾಗಿದ್ದಾರೆ.
"ಇದೊಂದು ಅಪೂರ್ವ ಪ್ರಕರಣ. ನಾನು ಮೊದಲ ಬಾರಿಗೆ ಅಂತಹ ಪ್ರಕರಣವನ್ನು ಕಾಣುತ್ತಿದ್ದೇನೆ.ಇಂತಹಾ ಘಟನೆ ಬಗ್ಗೆ ನಾನು ಮೊದಲು ಕೇಳಲಿಲ್ಲ" ಶೈಲಾ ಪೊದ್ದಾರ್ ಹೇಳಿದರು.
ಜೆಸ್ಸೋರ್ ನ ಶರ್ಶಾ ಶ್ಯಾಮಲಗಚ್ಚಿ ಹಳ್ಳಿಯವರಾದ ಮಹಿಳೆ ಖುಲ್ನಾ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ ತಮ್ಮ ಮೊದಲ ಮಗುವಿಗೆ ಜನ್ಮ ನೀಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


