ವಿಶೇಷ

ಇದೋ ನೋಡಿ ಪಾನಿಪುರಿ ಗಣಪತಿ!

ಗಣೇಶ ಚತುರ್ಥಿಯ ಸಮಯದಲ್ಲಿ ಪರಿಸರ ಸ್ನೇಹಿ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸಬೇಕೆಂದು ನಮ್ಮ ಸರ್ಕಾರ, ಪರಿಸರವಾದಿಗಳು ಹೇಳುತ್ತಿರುವುದನ್ನು ನಾವೇಲ್ಲಾ ಕೇಳುತ್ತೇವೆ.

ಇದೋ ನೋಡಿ ಪಾನಿಪುರಿ ಗಣಪತಿ!
ಪಾನಿ ಪುರಿ ಗಣಪತಿ!
Published On :
ಪುಣೆ: ಗಣೇಶ ಚತುರ್ಥಿಯ ಸಮಯದಲ್ಲಿ ಪರಿಸರ ಸ್ನೇಹಿ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜಿಸಬೇಕೆಂದು ನಮ್ಮ ಸರ್ಕಾರ, ಪರಿಸರವಾದಿಗಳು ಹೇಳುತ್ತಿರುವುದನ್ನು ನಾವೇಲ್ಲಾ ಕೇಳುತ್ತೇವೆ. ಅದೇ ರೀತಿ ಮಣ್ಣು, ಇತರೆ ಪರಿಸರ ಹಾನಿಯಾಗದ ವಸ್ತು ಬಳಸಿ ಗಣೇಶನನ್ನು ತಯಾರಿಸುವುದನ್ನೂ ಣಾವು ಕಂಡಿದ್ದೇವೆ. ಆದರೆ, ಮಹಾರಾಷ್ಟ್ರದ ಪುಣೆಯಲ್ಲಿ ನಾವುಗಳು ಬಾಯಿ ಚಪ್ಪರಿಸಿ ತಿನ್ನುವ ಪಾನಿಪುರಿಯನ್ನೇ ಬಳಸಿ ಗಣೇಶನನ್ನು ಸೃಷ್ಟಿಸಲಾಗಿದೆ!
ಪುಣೆಯ "ಗಣೇಶ ಬೇಲ್ ಶಾಪ್" ನಲ್ಲಿ ಈ ವಿಶೇಷ ಪಾನಿಪುರಿ ಗಣೇಶ ಪ್ರತಿಷ್ಠೆಯಾಗಿದ್ದಾನೆ. ಇಲ್ಲಿ ಸುಮಾರು 10,000 ಪುರಿಗಳು ಹಾಗೂ ಬಿದಿರಿನ ಕೋಲುಗಳನ್ನು ಬಳಸಿ ಈ ಗಣೇಶನನ್ನು ತಯಾರಿಸಲಾಗಿದೆ.
ಬಿಸ್ಕೆಟ್ ಗಳಿಂದ ಗಣೇಶನನ್ನು ತಯಾರಿಸಿದ್ದನ್ನು ಕಂಡ ಬೇಲ್ ಶಾಪ್ ಮಾಲೀಕರು ತಾವು ಪಾನಿ ಪುರಿಗಳನ್ನೇ ಬಳಸಿ ಈ ಗಣೇಶನ ತಯಾರಿಗೆ ಮುಂದಾಗಿದ್ದಾರೆ.
"ನಾನು ಚಾಟ್ಸ್ ವ್ಯಾಪಾರ ಮಾಡುವ ಕಾರಣ ನನಗೆ ಈ ಆಲೋಚನೆ ಹೊಳೆದಿದೆ.2011 ರಲ್ಲಿ, ನಾವು ಎಲ್ಲಾ 'ಭೇಲ್' ವಸ್ತುಗಳಿಂದ ಮಾಡಿದ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಿದ್ದೆವು. ಈ ಬಾರಿ ನಾವು ಪಾನು ಪೂರಿ ಬಳಸಿ ಗಣಪತಿಯನ್ನು ತಯಾರಿಸಲು ನಿರ್ಧರಿಸಿದೆವು." ಗಣೇಶ್ ಬೇಲ್ ಶಾಪ್" ಮಾಲೀಕ ರಮೇಶ್ ಗುಡ್ಮೇವಾರ್ ಹೇಳಿದರು.
ಪ್ರಶಾಂತ್ ಸಲುಂಕೆ ಈ ವಿಶೇಷ ಗಣಪತಿಯ ಸೃಷ್ಟಿಸಿದ ಕಲಾವಿದರಾಗಿದ್ದು "ನಾನು ಅದನ್ನು 10,000 ಪುರಿಗಳಿಂದ ತಯಾರಿಸಿದೆ. ಇದರ ತಯಾರಿಗೆ ಸುಮಾರು 100 ಗಂಟೆಗಳು ಹಿಡಿಯಿತು. ಇದರಲ್ಲಿ ಬಳಸಲಾಗುವ ಎಲ್ಲ ವಸ್ತುಗಳು ಪರಿಸರ ಸ್ನೇಹಿಯಾಗಿದೆ ಎನ್ನುವುದು ವಿಶೇಷ" ಎಂದಿದ್ದಾರೆ.
"ಈ ವಿಗ್ರಹದ ಪರಿಕಲ್ಪನೆಯು ಮೂಲಭೂತವಾಗಿ ಗಣೇಶನ ವಿಗ್ರಹವಾಗಿದ್ದರೂ ಇದರಿಂದ ಅನರು ಬೇಲ್ ನತ್ತ ಆಕರ್ಷಿತರಾಗುತಾರೆ. ಗಣೇಶನ ಹಿಂದೆ ಸೂರ್ಯನನ್ನು ಸಹ ಚಿತ್ರಿಸಿದ್ದು ಸೂರ್ಯನ ಶಕ್ತಿ ಅಂಗಡಿ ಮಾಲೀಕರಿಗೆ ಕೆಲಸದಲ್ಲಿ ಸಹಾಯ ಮಾಡಲಿದೆ ಎನ್ನುವುದನ್ನು ಇಲ್ಲಿ ಸಂಕೇತಿಸಲಾಗಿದೆ" ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.