ಮೈಸೂರು: ಲಘು ವಿಮಾನದಲ್ಲಿ 80 ದಿನಗಳ ವಿಶ್ವ ಪರ್ಯಟನೆಗೆ ತಾಯಿ-ಮಗಳು ಸಜ್ಜು
ಮೈಸೂರು ಮೂಲದ ತಾಯಿ-ಮಗಳು ಲಘು ವಿಮಾನದಲ್ಲಿ ಒಟ್ಟು 80 ದಿನಗಳಲ್ಲಿ 50 ಸಾವಿರ ಕಿ.ಮೀ ಪ್ರಯಾಣಿಸಿ, ವಿಶ್ವ ಪರ್ಯಟನೆ ನಡೆಸಲು ಮುಂದಾಗಿದ್ದಾರೆ

Published On :
ಮೈಸೂರು: ಮೈಸೂರು ಮೂಲದ ತಾಯಿ-ಮಗಳು ಲಘು ವಿಮಾನದಲ್ಲಿ ಒಟ್ಟು 80 ದಿನಗಳಲ್ಲಿ 50 ಸಾವಿರ ಕಿ.ಮೀ ಪ್ರಯಾಣಿಸಿ, ವಿಶ್ವ ಪರ್ಯಟನೆ ನಡೆಸಲು ಮುಂದಾಗಿದ್ದಾರೆ
ಮೈಸೂರಿನ ಆಡ್ರೆ ದೀಪಿಕಾ ಮಾಬೆನ್ ಮತ್ತು ಆಕೆಯ ಮಗಳು ಅಮಿ ಮೆಹ್ತಾ ಈ ದಾಖಲೆಯ ಪಯಣಕ್ಕೆ ಮುಂದಾಗಿದ್ದು, ಬೆಂಗಳೂರಿನ ಜಕ್ಕೂರು ವಾಯುನೆಲೆಯಲ್ಲಿ ಇವರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. 2018ರ ಫೆಬ್ರವರಿಯಲ್ಲಿ ಆರಂಭವಾಗಲಿರುವ ಇವರ ಪ್ರವಾಸದಲ್ಲಿ ಹವ್ಯಾಸಿ ಪೈಲಟ್ ಆಗಿರುವ ದೀಪಿಕಾ ಮತ್ತು ಆಕೆಯ ಮಗಳು, ಮಹಿಳಾ ಸಬಲೀಕರಣ ಕುರಿತ ಜಾಗೃತಿಗಾಗಿ ಈ ಪ್ರವಾಸ ಕೈಗೊಳ್ಳಲಿದ್ದಾರೆ.ೀ ಮುಖೇನ ದಾಖಲೆಯ ವಿಶ್ವ ಪರ್ಯಟನೆ ನಡೆಸುವ ಮೊದಲ ಭಾರತೀಯ ಮಹಿಳೆಯರು ಎನ್ನುವ ಕೀರ್ತಿ ಇವರದಾಗಲಿದೆ.
"ನಾನು ಹಲವು ಬಾರಿ ಲಘು ವಿಮಾನದಲ್ಲಿ ಹಾರಾಟ ನಡೆಸಿದ್ದೇನೆ. ನಮ್ಮ ಪಯಣ ಜಕ್ಕೂರಿನಿಂದ ಪ್ರಾರಂಭವಾಗಿ ಜಕ್ಕೂರಿನಲ್ಲಿಯೇ ಕೊನೆಗೊಳ್ಳಲಿದೆ. ಈ ಪ್ರವಾಸಕ್ಕೆ ನನಗೆ ನನ್ನ ಮಗಳು ಜತೆಯಾಗಲಿದ್ದಾಳೆ" ದೀಪಿಕಾ ಹೇಳಿದ್ದಾರೆ. "ತಾಯಿ ಜತೆಗೆ ವಿಶ್ವಪರ್ಯಟನೆ ಮಾಡುತ್ತಿರುವುದಕ್ಕೆ ಪುಳಕವಾಗುತ್ತಿದೆ" ಎಂದು ಅವರ ಪುತ್ರಿ ಅಮಿ ಸಂತಸದಿಂದ ನುಡಿಯುತ್ತಾರೆ. ಇವರು ಫೋಟೋಗ್ರಫಿ ಕಲಿಯುತ್ತಿದ್ದಾರೆ.
ಸ್ಲೊವೇನಿಯಾ ದೇಶದ ಸೈಸನ್ ಪಿಪಿಸ್ಟ್ರೆಲ್-912 ಎಂಜಿನ್ ನ ವಿಮಾನದಲ್ಲಿ ಇವರು ಪ್ರಯಾಣ ನಡೆಸಲಿದ್ದು ವಿಮಾನ 4ರಿಂದ 5ಗಂಟೆ ನಿರಂತರವಾಗಿ ಹಾರಾಟ ನಡೆಸುವ ಸಾಮರ್ಥ್ಯ ಹೊಂದಿದೆ. ಗಂಟೆಗೆ ಸರಾಸರಿ 110 ಕಿ.ಮೀ ವೇಗದಲ್ಲಿ ವಿಮಾನವು ಸಂಚರಿಸಲಿದೆ.
ತಾಯಿ ಮಗಳ ಈ ಸಾಹಸಕ್ಕೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಂಬಲ ನೀಡಿದೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ವಿಶ್ವ ಪರ್ಯಟನೆJakkurಜಕ್ಕೂರುMysore mother-daughterfly around the worldDeepika MabenAmy Mehtaಮೈಸೂರು ತಾಯಿ-ಮಗಳುದೀಪಿಕಾ ಮಾಬೆನ್ಆಮಿ ಮೆಹ್ತಾ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


