ತಂದೆಗೆ ತನ್ನ ಪಿತ್ತಕೋಶ ದಾನ ಮಾಡಿ ಪುನರ್ಜನ್ಮ ನೀಡಿದ ಪುತ್ರಿ
ಪೂಜಾ ಬಿಜಾರ್ನಿಯಾ ಎಂಬ ಯುವತಿ ಪಿತ್ತಕೋಶ ವೈಫಲ್ಯದಿಂದ ಬಳಲುತ್ತಿದ್ದ ತನ್ನ ತಂದೆಗೆ ತನ್ನ ಪಿತ್ತಕೋಶ ದಾನ ಮಾಡಿ ತಂದೆಗೆ ಮರುಜೀವ ನೀಡಿದ್ದಾಳೆ...

Published On :
ನವದೆಹಲಿ: ಪೂಜಾ ಬಿಜಾರ್ನಿಯಾ ಎಂಬ ಯುವತಿ ಪಿತ್ತಕೋಶ ವೈಫಲ್ಯದಿಂದ ಬಳಲುತ್ತಿದ್ದ ತನ್ನ ತಂದೆಗೆ ತನ್ನ ಪಿತ್ತಕೋಶ ದಾನ ಮಾಡಿ ತಂದೆಗೆ ಮರುಜೀವ ನೀಡಿದ್ದಾಳೆ. ಯುವತಿಯ ಈ ಧೈರ್ಯವನ್ನು ವೈದ್ಯರೊಬ್ಬರು ಫೇಸ್ ಬುಕ್ ಫೋಟೋ ಹಾಕಿ ಪುಟ್ಟದಾದ ವರದಿಯೊಂದನ್ನು ಹಾಕಿದ್ದು ಇದಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಪೂಜಾ ಬಿಜಾರ್ನಿಯಾ ತನ್ನ ತಂದೆಗೆ ತನ್ನ ಪಿತ್ತಕೋಶ ದಾನ ಮಾಡಿ ಅವರನ್ನು ಬದುಕಿಸಿ ಕೊಂಡಿದ್ದು ಶಸ್ತ್ರಚಿಕಿತ್ಸೆ ನಂತರ ಚೇತರಿಸಿಕೊಂಡ ಅಪ್ಪ-ಮಗಳ ಫೋಟೋವನ್ನು ಡಾ. ರಚಿತ್ ಭೂಷಣ್ ಶ್ರೀವಾಸ್ತವ ಹಾಕಿ ಅದರ ಕೆಳಗೆ ಮನಮುಟ್ಟುವ ಅಡಿಬರಹ ತಮ್ಮ ಫೇಸ್ ಬುಕ್ ನಲ್ಲಿ ಪ್ರಕಟಿಸಿದ್ದಾರೆ.
ಪಿತ್ತಕೋಶ ದಾನ ಮಾಡಿ ತಂದೆಯನ್ನು ಉಳಿಸಿಕೊಂಡ ಈ ಯುವತಿಯು ಹೆಣ್ಣೆಂದರೆ ಅಸಡ್ಡೆ ತೋರುವ ಅದೆಷ್ಟೋ ಹೆತ್ತವರಿಗೆ, ಹೆಣ್ಣು ಏನು ತಾನೇ ಮಾಡಿಯಾಳು ಎಂದು ಪ್ರಶ್ನಿಸುವ ವ್ಯಕ್ತಿಗಳಿಗೆ ಉತ್ತರ ನೀಡಿದ್ದಾಳೆ. ಈಕೆ ವೈಯಕ್ತಿಕವಾಗಿ ಪರಿಚಯವಿಲ್ಲದಿದ್ದರೂ ಈಕೆಗೆ ನಾನು ಅಭಿನಂದನೆ ಅರ್ಪಿಸುತ್ತೇನೆ. ದೇವರು ಆಕೆಗೆ ಒಳ್ಳೆಯದನ್ನು ಮಾಡಲಿ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


