ಅವಳಿ ಮಕ್ಕಳಾದ್ರೂ ಅಪ್ಪಂದಿರು ಬೇರೆ ಬೇರೆ!
ಸಹಜವಾಗಿ ಒಂದು ಮಗುವಿನ ಅಥವಾ ಅವಳಿ ಮಕ್ಕಳ ಡಿಎನ್ಎ ಒಂದೇ ಇರುವುದು ಸಾಮಾನ್ಯ. ಆದರೆ ಅವಳಿ ಮಕ್ಕಳಿಗೆ ಭಿನ್ನ ಅಪ್ಪಂದಿರಿರುವ ಅತ್ಯಂತ ವಿರಳ...

ಹನೊಯಿ: ಸಹಜವಾಗಿ ಒಂದು ಮಗುವಿನ ಅಥವಾ ಅವಳಿ ಮಕ್ಕಳ ಡಿಎನ್ಎ ಒಂದೇ ಇರುವುದು ಸಾಮಾನ್ಯ. ಆದರೆ ಅವಳಿ ಮಕ್ಕಳಿಗೆ ಭಿನ್ನ ಅಪ್ಪಂದಿರಿರುವ ಅತ್ಯಂತ ವಿರಳ ಎನ್ನಬಹುದಾದ ಪ್ರಕರಣವೊಂದು ವಿಯೆಟ್ನಾಂನಲ್ಲಿ ವರದಿಯಾಗಿದೆ.
ವಿಯೆಟ್ನಾಂ ಜೆನೆಟಿಕ್ ಅಸೋಸಿಯೇಷನ್ ಅಧ್ಯಕ್ಷರಾದ ಪ್ರೊ. ಲೆ ಡಿನ್ಹ ಲಾಂಗ್ ಹನೊಯಿಯಲ್ಲಿರುವ ತಮ್ಮ ಪ್ರಯೋಗಾಲದಲ್ಲಿ ಅವಳಿ ಮಕ್ಕಳ ಡಿಎನ್‌ಎ ಪರೀಕ್ಷೆಯ ವೇಳೆ ಭಿನ್ನ ಅಪ್ಪಂದಿರಿರುವ ಸಂಗತಿ ಬಯಲಾಗಿದೆ ಎಂದು ತಿಳಿಸಿದ್ದಾರೆ.
ವಿಶ್ವದಾದ್ಯಂತ 2011ರವರೆಗೂ ಇಂತಹ ಏಳೇ ಏಳು ಪ್ರಕರಣಗಳು ವರದಿಯಾಗಿದ್ದವು. ವಿಯೆಟ್ನಾಂನಲ್ಲಿ ಇದು ಮೊದಲ ಪ್ರಕರಣ ಎಂದೂ ಅವರು ತಿಳಿಸಿದ್ದಾರೆ. ಅವಳಿ ಮಕ್ಕಳ ಕುರಿತು ಹೆಚ್ಚಿನ ಮಾಹಿತಿ ನೀಡಲು ಅವರು ನಿರಾಕರಿಸಿದ್ದಾರೆ.
ಅಂಡೋತ್ಪತ್ತಿ ಅವಧಿಯನ್ನು ಹೊರತುಪಡಿಸಿ ಒಂದರಿಂದ ಏಳು ದಿನಗಳ ಒಳಗೆ ಒಂದೇ ತಾಯಿಯ ಎರಡು ಅಂಡಾಣುಗಳು ಭಿನ್ನ ಪುರುಷರಿಂದ ಗರ್ಭ ಧರಿಸಿದರೆ ಇಂಥ ‘ಕೌತುಕ’ ಸಾಧ್ಯ ಎನ್ನುತ್ತಾರೆ ಲಾಂಗ್ . ಇನ್ನು ಆಸ್ಪತ್ರೆಯವರು ಮಕ್ಕಳನ್ನು ಅದಲು ಬದಲು ಮಾಡಿದರೆ ಎಂಬ ಅನುಮಾನವು ಸ್ಪಷ್ಟಗೊಂಡಿದ್ದು, ಇಬ್ಬರೂ ಮಕ್ಕಳ ತಾಯಿ ಒಬ್ಬಳೇ ಎಂದು ಡಿಎನ್ಎ ಪರೀಕ್ಷೆಯಲ್ಲಿ ಸ್ಪಷ್ಟವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


