ಪ್ಯಾರಾಚೂಟ್ ಇಲ್ಲದೆ ಅತಿ ಎತ್ತರದಿಂದ ಭೂಮಿಗೆ ಧುಮುಕಿದ ಸ್ಕೈ ಡೈವರ್
ಅಮೆರಿಕದ ಸ್ಟಂಟ್ ಮಾಸ್ಟರ್ ಲ್ಯೂಕ್ ಅಕಿನ್ಸ್, ಪ್ಯಾರಾಚೂಟ್ ಇಲ್ಲದೆ 25 ಸಾವಿರ ಅಡಿ ಎತ್ತರದಿಂದ ಧುಮುಕಿ ಈ ಸಾಧನೆ ಮಾಡಿದ ಜಗತ್ತಿನ ಪ್ರಥಮ ವ್ಯಕ್ತಿ ಎಂಬ

ಲಾಸ್ ಏಂಜಲೀಸ್: ಅಮೆರಿಕದ ಸ್ಟಂಟ್ ಮಾಸ್ಟರ್ 42 ವರ್ಷದ ಲ್ಯೂಕ್ ಅಕಿನ್ಸ್, ಪ್ಯಾರಾಚೂಟ್ ಇಲ್ಲದೆ 25 ಸಾವಿರ ಅಡಿ ಎತ್ತರದಿಂದ ಧುಮುಕಿ ಈ ಸಾಧನೆ ಮಾಡಿದ ಜಗತ್ತಿನ ಪ್ರಥಮ ವ್ಯಕ್ತಿ ಎಂಬ ದಾಖಲೆ ನಿರ್ಮಿಸಿದ್ದಾರೆ.
ವಿಂಗ್ಸೂಟ್ (ಗಾಳಿ ನಿಯಂತ್ರಣ ಕವಚ) ಅಥವಾ ಯಾರೊಬ್ಬ ಹಿಂಬಾಲಕರ ಸಹಾಯ ಇಲ್ಲದೆ ಧುಮುಕಿ ಆಶ್ಚರ್ಯದ ಜತೆ ಸಾಹಸ ಮೆರೆದಿದ್ದಾರೆ. ಅವರ ಲ್ಯಾಂಡಿಂಗ್ಗಾಗಿ ಫುಟ್ಬಾಲ್ ಮೈದಾನದಷ್ಟು ಅಂದರೆ 100*100 ಅಡಿ ಅಗಲ ನೆಟ್ ಹಾಕಲಾಗಿತ್ತು. ಕೇವಲ 2 ನಿಮಿಷದ ಅವಧಿಯಲ್ಲಿ 25 ಸಾವಿರ ಅಡಿ ಎತ್ತರದಿಂದ ಕೆಳಕ್ಕಿಳಿದು ವಿಶ್ವವೇ ತಮ್ಮತ್ತ ನೋಡುವಂತೆ ಮಾಡಿದ್ದಾರೆ.
ಕೆಳಗಿಳಿದ ತಕ್ಷಣ ನಾಲ್ಕು ವರ್ಷದ ತಮ್ಮ ಮಗನೊಂದಿಗೆ ನಿಂತಿದ್ದ ಪತ್ನಿಯ ಕಡೆ ಬಂದು ಇಬ್ಬರನ್ನು ಅಪ್ಪಿಕೊಂಡರು. ಅಕಿನ್ಸ್ ಕುಟುಂಬದವರೆಲ್ಲ ಸ್ಥಳದಲ್ಲಿ ನೆರೆದಿದ್ದರು. ಸುರಕ್ಷಿತವಾಗಿ ಧರೆಗಿಳಿದ ಅಕಿನ್ಸ್ ಹೊಸ ದಾಖಲೆಗೆ ಸಾಕ್ಷಿಯಾದರು. ವೃತ್ತಿಪರ ಸಾಹಸಪಟುವಾದ ಅಕಿನ್ಸ್ ಹಾಲಿವುಡ್ನ ಆಕ್ಷನ್ ಓರಿಯೆಂಟೆಡ್ ಸಿನಿಮಾ ಐರನ್ ಮ್ಯಾನ್-3 ಸಿನಿಮಾದಲ್ಲಿ ಸ್ಟಂಟ್ಗಳನ್ನು ಮಾಡಿದ್ದಾರೆ. ಈ ದಾಖಲೆ ನಿರ್ಮಿಸಲು 18 ಸಾವಿರ ಜಿಗಿತಗಳ ಮೂಲಕ ಅಭ್ಯಾಸ ಮಾಡಿದ್ದರು.
ಕೆಲವೊಮ್ಮೆ ಹೀಗಾಗುತ್ತೆ. ನನಗೆ ಮಾತುಗಳೇ ಬರುತ್ತಿಲ್ಲ, ಈ ಸಾಧಾನೆಗೆ ಕಳೆದ ಎರಡು ವರ್ಷಗಳಿಂದ ನನ್ನೊಂದಿಗೆ ಶ್ರಮಿಸಿದ ಎಲ್ಲಾ ಸಿಬ್ಬಂದಿಗೂ ನನ್ನ ಧನ್ಯವಾದಗಳು ಎಂದು ಹೇಳಿದರು. ನನ್ನ ತಂದೆ ಹಾಗೂ ತಾತ ಕೂಡ ಸ್ಕೈ ಡೈವರ್ ಆಗಿದ್ದರು, ನನ್ನ ಪತ್ನಿ ಕೂಡ ಇದುವರೆಗೂ 2ಸಾವಿರ ಜಂಪ್ ಮಾಡಿದ್ದಾಳೆ ಎಂದು ತಿಳಿಸಿದ್ದಾರೆ. ಅಮೆರಿಕಾದ ಪ್ಯಾರಚೂಟ್ ಅಸೋಸಿಯೇಷನ್ ನಲ್ಲಿ ಆಕ್ಸಿನ್ ತರಬೇತುದಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


