ವಿಶೇಷ

ತುಘಲಕ್ ಪತ್ರಿಕೆ ಪ್ರಾರಂಭದ ಹಿಂದಿನ 5 ರೂ ಬೆಟ್ಟಿಂಗ್ ಕತೆ!

ಚೊ. ರಾಮಸ್ವಾಮಿಯವ ರಾಜಕೀಯಕ್ಕೆ ಸಂಬಂಧಿಸಿದ ತಮ್ಮ ಅಭಿಪ್ರಾಯಗಳನ್ನು, ದೃಷ್ಟಿಕೋನಗಳನ್ನು ಪ್ರಕಟಿಸಲು ನಿಯತಕಾಲಿಕೆಯೊಂದನ್ನು ಹೊರತರುವುದಾಗಿ ಸ್ನೇಹಿತರೊಂದಿಗೆ ಬೆಟ್ ಕಟ್ಟಿದ್ದರು.

ತುಘಲಕ್ ಪತ್ರಿಕೆ ಪ್ರಾರಂಭದ ಹಿಂದಿನ 5 ರೂ ಬೆಟ್ಟಿಂಗ್ ಕತೆ!
ಚೊ. ರಾಮಸ್ವಾಮಿ
Published On :
ಚೆನ್ನೈ: ತುಘಲಕ್ ಪತ್ರಿಕೆಯ ಸ್ಥಾಪಕ ಸಂಪಾದಕ ಚೊ. ರಾಮಸ್ವಾಮಿ ಇತಿಹಾಸದ ಪುಟ ಸೇರಿದ್ದಾರೆ. ತಮಿಳುನಾಡಿನ ಮೊದಲ ರಾಜಕೀಯ ವಿಡಂಬನೆ ನಿಯತಕಾಲಿಕೆ ಎಂಬ ಇತಿಹಾಸ ನಿರ್ಮಿಸಿದ್ದ ತುಘಲಕ್ ಪತ್ರಿಯ ಹಿಂದೆ ಅಷ್ಟೇ ಸ್ವಾರಸ್ಯಕರ ಕತೆ ಇದೆ. 
ಪತ್ರಕರ್ತರಷ್ಟೇ ಅಲ್ಲದೇ ಅತ್ಯುತ್ತಮ ಹಾಸ್ಯನಟರೂ ಆಗಿದ್ದ ಚೊ.ರಾಮಸ್ವಾಮಿಯವರು 1960 ರಲ್ಲಿ ವಿವಾದಾತ್ಮಕ ನಾಟಕಗಳನ್ನು ಮಾಡುವ ಮೂಲಕ ಅತಿ ಹೆಚ್ಚು ಜನರನ್ನು ಸೆಳೆಯುತ್ತಿದ್ದರು. ಈ ಸಂದರ್ಭದಲ್ಲೇ ಚೊ. ರಾಮಸ್ವಾಮಿಯವ ರಾಜಕೀಯಕ್ಕೆ ಸಂಬಂಧಿಸಿದ ತಮ್ಮ ಅಭಿಪ್ರಾಯಗಳನ್ನು, ದೃಷ್ಟಿಕೋನಗಳನ್ನು ಪ್ರಕಟಿಸಲು ನಿಯತಕಾಲಿಕೆಯೊಂದನ್ನು ಹೊರತರುವುದಾಗಿ ಸ್ನೇಹಿತರೊಂದಿಗೆ ಬೆಟ್ ಕಟ್ಟಿದ್ದರು. 
ಅಣ್ಣಾಮಲೈ ವಿಶ್ವವಿದ್ಯಾನಿಲಯದಲ್ಲಿ ನಡೆದ ಸಭೆಯೊಂದರಲ್ಲಿ ಭಾಗವಹಿಸಲು ಚೊ. ರಾಮಸ್ವಾಮಿ ಅವರಿಗೆ ಆಹ್ವಾನ ನೀಡಲಾಗಿರುತ್ತದೆ. ಸಭೆಯಲ್ಲಿ ಅಂತಾರಾಷ್ಟ್ರೀಯ ವಿದ್ಯಮಾನ, ಅರ್ಥಶಾಸ್ತ್ರ, ರಾಜಕೀಯ ಹೀಗೆ ಚರ್ಚೆಗೆ ಬಂದ ಎಲ್ಲಾ ವಿಷಯಗಳ ಬಗೆಗಿನ ಪ್ರಶ್ನೆಗಳಿಗೂ ಚೊ. ರಾಮಸ್ವಾಮಿ ಸಮರ್ಥ ಉತ್ತರ ನೀಡಿದ್ದರು. ಇದನ್ನು ಗಮನಿಸಿದ ಸ್ನೇಹಿತರು ಲಘುಧಾಟಿಯಲ್ಲಿ, ಹಾಸ್ಯಭರಿತವಾಗಿ ನಿಮ್ಮನ್ನು ಏನೆಂದುಕೊಂಡಿದ್ದೀರಿ? ನಿಮಗೆ ಗೊತ್ತಿಲ್ಲದ ವಿಶಯಗಳ ಬಗ್ಗೆ    ಮಾತನಾಡುವುದಿಲ್ಲ ಎಂದು ಹೇಳಿ ಎನ್ನುತ್ತಾರೆ. ಸ್ನೇಹಿತರ ಅಭಿಪ್ರಾಯಕ್ಕೆ ಪ್ರತಿಕ್ರಿಯೆ ನೀಡಿದ್ದ ಚೊ. ಒಂದು ವೇಳೆ ಸಭೆಯಲ್ಲಿ ಮಾತನಾಡಲು ಸಾಧ್ಯವಾಗದೇ ಇದ್ದರೆ ನಾನು ನನ್ನ ಸ್ವಂತ ಪತ್ರಿಕೆ ಮೂಲಕ ಅಭಿಪ್ರಾಯ ತಿಳಿಸುತ್ತೇನೆ ಎನ್ನುತ್ತಾರೆ. ಇದನ್ನೇ ಗಂಭೀರವಾಗಿ ಪರಿಗಣಿಸಿದ ಸ್ನೇಹಿತರು ಸ್ವಂತ ಪತ್ರಿಕೆ ಪ್ರಾರಂಭಿಸುವಂತೆ ಸವಾಲು ಹಾಕಿ ಚೊ. ರಾಮಸ್ವಾಮಿಯವರೊಂದಿಗೆ 5 ರೂ ಬೆಟ್ ಕಟ್ಟುತ್ತಾರೆ.   
ಸ್ನೇಹಿತರ ಸವಾಲನ್ನು ಚೊ. ರಾಮಸ್ವಾಮಿ ಅವರೂ ಗಂಭೀರವಾಗಿ ಪರಿಗಣಿಸುತ್ತಾರೆ. ನಂತರ ತಮಿಳು ಭಾಷೆಯಲ್ಲೇ ಪತ್ರಿಕೆಗಳಿಗೆ ಜಾಹಿರಾತು ನೀಡಿದ್ದ ಚೊ. ರಾಮಸ್ವಾಮಿ, "ನನ್ನ ಅಭಿಪ್ರಾಯಗಳನ್ನು ತಿಳಿಸುವ ಪತ್ರಿಕೆಯೊಂದು ಪ್ರಾರಂಭವಾದರೆ ಅದನ್ನು ಖರೀದಿಸುತ್ತೀರಾ ಎಂದು ಕೇಳುತ್ತಾರೆ. ಅಚ್ಚರಿಯೆಂಬಂತೆ ಸುಮಾರು 10,000 ಕ್ಕೂ ಹೆಚ್ಚು ಜನರು ಚೊ. ರಾಮಸ್ವಾಮಿಯವರ ಪತ್ರಿಕೆಯನ್ನು ಖರೀದಿಸುತ್ತೇವೆ ಎಂಬ ಸಕಾರಾತ್ಮಕ ಅಭಿಪ್ರಾಯ ಪ್ರಕಟಿಸುತ್ತಾರೆ. ಪ್ರಾರಂಭದಲ್ಲಿ ಹಲವು ಅಡಚಣೆಗಳು ಎದುರಾದರೂ ಆನಂದ ವಿಕಟನ್ ನ ವ್ಯವಸ್ಥಾಪಕ ನಿರ್ದೇಶಕರು ಚೊ. ರಾಮಸ್ವಾಮಿಗಳ ತುಘಲಕ್ ನಿಯತಕಾಲಿಕೆ ಪ್ರಕಟಿಸಲು ಸಮ್ಮತಿ ಸೂಚಿಸುತ್ತಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.