ಮಾಲಿನ್ಯ ತುಂಬಿದ್ದ 160 ಕಿ.ಮೀ ಉದ್ದದ ನದಿಯನ್ನು ಸ್ವಚ್ಛಗೊಳಿಸಿದ ಇಕೋ ಬಾಬಾ
2000 ಇಸವಿಯಲ್ಲಿ ಇಕೋ ಬಾಬಾ ಎಂದೇ ಕರೆಯಲ್ಪಡುವ ಸಂತ್ ಬಲ್‌ಬೀರ್ ಸಿಂಗ್ ಸಿಚೇವಲ್ ಈ ನದಿಯನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಆರಂಭಿಸಿದ್ದು, ಈಗ ತಮ್ಮ...

Published On :
ಪಂಜಾಬ್: ಮಾಲಿನ್ಯ ತುಂಬಿದ್ದ ಪಂಜಾಬ್‌ನ ಕಾಲೇ ಬೈನ್ ಎಂಬ ನದಿಯನ್ನು ಇಕೋ ಬಾಬಾ ಮತ್ತು ಸಂಗಡಿಗರು ಸೇರಿ ಸ್ವಚ್ಛಗೊಳಿಸಿದ್ದಾರೆ. ಕಾರ್ಖಾನೆಯ ತ್ಯಾಜ್ಯಗಳು ಸೇರಿದಂತೆ ಇಡೀ ಊರಿನ ಮಾಲಿನ್ಯವು ಈ ನದಿಗೆ ಸೇರಿ, ಅಲ್ಲಿನ ನೀರು ಉಪಯೋಗ ಶೂನ್ಯವಾಗಿತ್ತು.
2000 ಇಸವಿಯಲ್ಲಿ ಇಕೋ ಬಾಬಾ ಎಂದೇ ಕರೆಯಲ್ಪಡುವ ಸಂತ್ ಬಲ್‌ಬೀರ್ ಸಿಂಗ್ ಸಿಚೇವಲ್ ಈ ನದಿಯನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಆರಂಭಿಸಿದ್ದು, ಈಗ ತಮ್ಮ ಕಾರ್ಯದಲ್ಲಿ ಯಶ ಕಂಡಿದ್ದಾರೆ. 160 ಕಿಮೀ ಉದ್ದವಿರುವ ಈ ನದಿಯಿಂದ ಟನ್‌ಗಟ್ಟಲೆ ಮಾಲಿನ್ಯವನ್ನು ಬಾಬಾ ಮತ್ತು ಅವರ ಸಂಗಡಿಗರು ಸೇರಿ ಸ್ವಚ್ಛಗೊಳಿಸಿದ್ದಾರೆ. ವಿಶೇಷ ಎಂದರೆ ಸರ್ಕಾರವಾಗಲೀ, ಇನ್ನಿತರ ಯಾವುದೇ ಸಂಘ ಸಂಸ್ಥೆಗಳ ಸಹಾಯವಿಲ್ಲದೆ ಇವರು ನದಿಯಿಂದ ಹೂಳೆತ್ತುವ ಕಾರ್ಯವನ್ನು ಮಾಡಿದ್ದಾರೆ.
ಇದೀಗ ಕಾಲೇ ಬೈನ್ ನದಿಯಲ್ಲಿ ಶುದ್ದಜಲ ಹರಿಯುತ್ತಿದೆ. ಈ ನದಿಯನ್ನು ಉಪಯೋಗ ಯೋಗ್ಯವಾಗುವಂತೆ ಮಾಡಿದ ಬಾಬಾ ಮತ್ತು ಸಂಗಡಿಗರು ಈಗ ನದಿ ದಂಡೆಯನ್ನು ಸುಂದರವಾಗಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಜಲಕ್ಷಾಮದಿಂದಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದ ಊರಿನಲ್ಲಿ ನದಿಯೊಂದನ್ನು ಸ್ವಚ್ಛಗೊಳಿಸಿ ಜನರಿಗೆ ಸಹಾಯ ಮಾಡಿದ ಈ ಬಾಬಾ ಮತ್ತು ಸಂಗಡಿಗರಿಗೆ ಜೈ ಹೋ..
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


