ವಾಟರ್‌ಲೂ ಯುದ್ಧದ ನೆನಪಿಗೆ 200 ವರುಷ
ಇತಿಹಾಸ ಪ್ರಸಿದ್ಧವಾದ ವಾಟರ್‌ಲೂ ಯುದ್ಧಕ್ಕೆ 200 ವರುಷದ ವಾರ್ಷಿಕ ಆಚರಣೆ ಇಂದು...

ಇತಿಹಾಸ ಪ್ರಸಿದ್ಧವಾದ ವಾಟರ್‌ಲೂ ಯುದ್ಧಕ್ಕೆ 200 ವರುಷದ ವಾರ್ಷಿಕ ಆಚರಣೆ ಇಂದು. ಈ ಯುದ್ಧದಲ್ಲಿ ಹುತಾತ್ಮರಾದ ಬ್ರಿಟೀಷ್ ಸೇನೆಯ ಸ್ಮಾರಕವನ್ನು ಬೆಲ್ಜಿಯಂನಲ್ಲಿರುವ ವಾಟರ್‌ಲೂ ಯುದ್ಧ ಭೂಮಿಯಲ್ಲಿ ಚಾರ್ಲ್ಸ್ ರಾಜಕುಮಾರ ಅನಾವರಣಗೊಳಿಸಲಿದ್ದಾರೆ.
ಒಂದು ವಾರಗಳ ಕಾಲ ವಾಟರ್‌ಲೂ ಯುದ್ಧ ವಾರ್ಷಿಕ ಆಚರಣೆ ನಡೆಯಲಿದೆ. ನಿನ್ನೆ ಇದೇ ಯುದ್ಧಭೂಮಿಯಲ್ಲಿ ವಾಟರ್‌ಲೂ ಯುದ್ಧವನ್ನು ನಾಟಕದ ಮೂಲಕ ಆಡಿ ತೋರಿಸಲಾಗಿತ್ತು. ಈಗಾಗಲೇ ಯುದ್ಧ ಭೂಮಿಯನ್ನು ವೀಕ್ಷಿಸಲು ಬರುವ ಪ್ರವಾಸಿಗಳ ಸಂಖ್ಯೆ ಏರಿಕೆಯಾಗಿದೆ.
ವಾಟರ್‌ಲೂ ಯುದ್ಧದ ನೆನಪು
ಫ್ರೆಂಚ್ ಚಕ್ರವರ್ತಿ ನೆಪೋಲಿಯನ್ ಸೈನ್ಯವನ್ನು ಪರಾಜಯಗೊಳಿಸಿದ ವಾಟರ್‌ಲೂ ಯುದ್ಧದಲ್ಲಿ ಬ್ರಿಟಿಷ್ ಮತ್ತು ಮಿತ್ರಸೈನ್ಯಗಳ 23,000 ಸೈನಿಕರು ಹತರಾಗಿದ್ದರು. ಫ್ರೆಂಚ್ ಸೈನ್ಯದಲ್ಲಿ 25,000ಸೈನಿಕರು ಹತರಾಗಿದ್ದರು.
1815 ಜೂನ್ 18ರಂದು ನೆದರ್‌ಲ್ಯಾಂಡ್ಸ್ ಸಾಮ್ರಾಜ್ಯದ ಭಾಗವಾಗಿದ್ದ ಈಗಿನ ಬೆಲ್ಜಿಯಂನ ವಾಟರ್‌ಲೂ ಬಳಿ ಯುದ್ಧ ನಡೆದಿತ್ತು. ನೆಪೋಲಿಯನ್ ನೇತೃತ್ವದ ಫ್ರೆಂಚ್ ಸೈನ್ಯವನ್ನು ಬ್ರಿಟಿಷರು ಈ ಯುದ್ಧದಲ್ಲಿ ಪರಾಭವಗೊಳಿಸಿದ್ದರು.
ಬ್ರಿಟನ್ ನ ಡ್ಯೂಕ್ ಆಫ್ ವೆಲ್ಲಿಂಗ್ಟನ್ ಈ ಯುದ್ಧದ ನೇತೃತ್ವ ವಹಿಸಿದ್ದರು.
ವಾಟರ್ ಲೂ ಯುದ್ಧದಲ್ಲಿ ಫ್ರೆಂಚ್ ಚಕ್ರವರ್ತಿ ನೆಪೋಲಿಯನ್ ಅಧಿಕಾರ ಅಂತ್ಯಗೊಂಡಿತು.
ಬೆಳಗ್ಗೆ 11.30ಕ್ಕೆ ಆರಂಭವಾದ ಯುದ್ಧ ರಾತ್ರಿ 8.30ಕ್ಕೆ ಅಂತ್ಯವಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


