ಜನಾಂಗೀಯ ದ್ವೇಷದ ಬಗ್ಗೆ ನಾಜಿ ಪ್ರಚಾರ 'ಬಹಳ ಪರಿಣಾಮಕಾರಿ'ಯಾಗಿತ್ತು: ಅಧ್ಯಯನ
ಜನಾಂಗೀಯ ದ್ವೇಷಕ್ಕಾಗಿ ಮಾಡಿದ ನಾಜಿ ಪ್ರಚಾರ ಮತ್ತು ಸಿದ್ಧಾಂತದ ತೀವ್ರ ಬೋಧನೆ 'ಬಹಳ ಪರಿಣಾಮಕಾರಿ' ಫಲಿತಾಂಶ ನೀಡಿತ್ತು ಎಂದು ಕ್ಯಾಲಫೋರ್ನಿಯಾ

ವಾಶಿಂಗ್ಟನ್: ಜನಾಂಗೀಯ ದ್ವೇಷಕ್ಕಾಗಿ ಮಾಡಿದ ನಾಜಿ ಪ್ರಚಾರ ಮತ್ತು ಸಿದ್ಧಾಂತದ ತೀವ್ರ ಬೋಧನೆ 'ಬಹಳ ಪರಿಣಾಮಕಾರಿ' ಫಲಿತಾಂಶ ನೀಡಿತ್ತು ಎಂದು ಕ್ಯಾಲಫೋರ್ನಿಯಾ ವಿಶ್ವವಿದ್ಯಾಲಯ ಪ್ರಕಟಿಸಿರುವ ಅಧ್ಯಯನ ಹೇಳುತ್ತದೆ.
೧೯೩೦ ರಲ್ಲಿ ಹುಟ್ಟಿದ್ದ ೫೩೦೦ ಜರ್ಮನ್ ನಾಗರಿಕರೊಂದಿಗೆ ೧೯೯೬ ರಿಂದ ೨೦೦೬ ರ ನಡುವೆ ನಡೆಸಿದ ಸಂದರ್ಶನಗಳ ಅಧ್ಯಯನ ಮಾಡಿದ್ದು, ನಾಜಿ ಆಡಳಿತದಲ್ಲಿ ಬೆಳೆದವರು ನಂತರ ಹುಟ್ಟಿ ಬೆಳೆದವರಿಗಿಂತಲೂ ಹೆಚ್ಚು ಜ್ಯೂ ಧರ್ಮದ ವಿರೋಧಿಗಳಾಗಿದ್ದರು (ಸೆಮಿಟಿಕ್ ವಿರೋಧಿ) ಎಂದು ಅಧ್ಯಯನ ಸಾಬೀತುಪಡಿಸುತ್ತದೆ ಎಂದು ಎಫೆ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.
"೧೯೩೩ ರಿಂದ ೧೯೪೫ರ ಮಧ್ಯೆ ಜರ್ಮನಿಯ ಯುವ ಜನರು ಸೆಮಿಟಿಕ್ ವಿರೋಧಿ ಸಿದ್ಧಾಂತಕ್ಕೆ ಶಾಲೆಗಳಲ್ಲಿ, ರೇಡಿಯೋ ಮೂಲಕ, ಬರವಣಿಗೆ, ಸಿನೆಮಾಗಳ ಮೂಲಕ ಪ್ರಭಾವಿತರಾಗುತ್ತಿದ್ದರು" ಎಂದು ಅಧ್ಯಯನ ತಿಳಿಸಿದೆ.
ಸರ್ಕಾರದ ನೀತಿಗಳಿಂದ ನಾಗರಿಕರ ನಂಬಿಕೆಗಳನ್ನು ತಿದ್ದಬಹುದು ಎನ್ನುತ್ತದೆ ಅಧ್ಯಯನ.
ರೇಡಿಯೋ ಮತ್ತು ಸಿನೆಮಾಗಳಿಗಿಂದ ಶಿಕ್ಷಣ ಮತ್ತು ಯುವ ಸಂಘಟನೆಗಳು ಜರ್ಮನಿಯ ಸಿದ್ಧಾಂತದ ಮೇಲೆ ಆ ಸಮಯದಲ್ಲಿ ಹೆಚ್ಚು ಪರಿಣಾಮ ಬೀರಿವೆ ಎಂದು ಅಧ್ಯಯನ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


