ವಿಶೇಷ

81ರ ವಯಸ್ಸಿನ ಕ್ಯಾನ್ಸರ್ ರೋಗಿಯ ಹೃದಯಕ್ಕೆ ಹಸುವಿನ ಕವಾಟ!

ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ 81 ರ ವಯಸ್ಸಿನ ಕ್ಯಾನ್ಸರ್ ರೋಗಿಯ ಹೃದಯದಲ್ಲಿನ ಕವಾಟದ ಬದಲಿಗೆ ಹಸುವಿನ ಕವಾಟ ಅಳವಡಿಸುವ...

81ರ ವಯಸ್ಸಿನ ಕ್ಯಾನ್ಸರ್ ರೋಗಿಯ ಹೃದಯಕ್ಕೆ ಹಸುವಿನ ಕವಾಟ!
ಅಲ್ಲೂರಿ ಸೀತಮ್ಮರೊಂದಿಗೆ ವೈದ್ಯರು
Published On :

ಚೆನ್ನೈ: ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ 81 ರ ವಯಸ್ಸಿನ ಕ್ಯಾನ್ಸರ್ ರೋಗಿಯ ಹೃದಯದಲ್ಲಿನ ಕವಾಟದ ಬದಲಿಗೆ ಹಸುವಿನ ಕವಾಟ ಅಳವಡಿಸುವ ಮೂಲಕ ವೈದ್ಯಕೀಯ ಜಗತ್ತಿಗೆ ಅಚ್ಚರಿ ಮೂಡಿಸಲಾಗಿದೆ.

ಚೆನ್ನೈನ ಫ್ರಾಂಟೀರ್ ಲೈಫ್ ಲೈನ್ ಆಸ್ಪತ್ರೆಯ ವೈದ್ಯರು ಬಯೋಪ್ರೊಸ್ಥೆಟಿಕ್ (ಯಾವುದಾದರು ಪ್ರಾಣಿಯ ಅಂಗಾಂಶ ಅಥವಾ ಜೀವಕೋಶ) ಮೂಲಕ ಅಲ್ಲೂರಿ ಸೀತಮ್ಮ ಎನ್ನುವವರ ಹೃದಯದಲ್ಲಿನ ಕವಾಟವೊಂದಕ್ಕೆ ಹಸುವಿನ ಕವಾಟ ಬಳಸಿದ್ದು, ಈಗ ಅವರು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಅಲ್ಲೂರಿ ಸೀತಮ್ಮ ಎಂಬುವರು ಹೃದಯ ಕವಾಟ ಸೋರಿಕೆಯಿಂದ ಬಳಲುತ್ತಿದ್ದರು. 11 ವರ್ಷಗಳ ಹಿಂದೆ ಅವರಿಗೆ ಹೃದಯ ಕಸಿ ಮಾಡಲಾಗಿತ್ತು. ಅವರ ಮೂಲ ಕವಾಟ ವರ್ಷದಿಂದ ವರ್ಷಕ್ಕೆ ಕಿರಿದಾಗುತ್ತಿತ್ತು. ಜತೆಗೆ ರಕ್ತದೊತ್ತಡವು ಹೆಚ್ಚಾಗಿ ಅವರ ಕವಾಟ ಆರೋಗ್ಯವಾಗಿರಲ್ಲಿಲ್ಲ, ಜತೆಗೆ ಶಸ್ತ್ರ ಚಿಕಿತ್ಸೆಗೊಳಪಡುವ ಪರಿಸ್ಥಿತಿಯಲ್ಲಿ ಸೀತಮ್ಮನವರು ಇರಲಿಲ್ಲ ಎಂದು ವೈದ್ಯರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.