ವಿಶ್ವ ಜನಸಂಖ್ಯಾ ದಿನ; ಭಾರತೀಯರ ಸಂಖ್ಯೆ ೧,೨೭೪,೨೩೪,೫೩೮
ಇಂದು ವಿಶ್ವ ಜನಸಂಖ್ಯಾ ದಿನ. ಸ್ವತಂತ್ರ ಸಾಮಜಿಕ-ಆರ್ಥಿಕ ಅಂಕಿ ಅಂಶಗಳ ಸಂಸ್ಥೆಯೊಂದರ ಪ್ರಕಾರ ಶನಿವಾರ ಮಧ್ಯಾಹ್ನ ೨:೩೦ರ ಸಮಯಕ್ಕೆ ಭಾರತೀಯರ ಸಂಖ್ಯೆ

ನವದೆಹಲಿ: ಇಂದು ವಿಶ್ವ ಜನಸಂಖ್ಯಾ ದಿನ. ಸ್ವತಂತ್ರ ಸಾಮಜಿಕ-ಆರ್ಥಿಕ ಅಂಕಿ ಅಂಶಗಳ ಸಂಸ್ಥೆಯೊಂದರ ಪ್ರಕಾರ ಶನಿವಾರ ಮಧ್ಯಾಹ್ನ ೨:೩೦ರ ಸಮಯಕ್ಕೆ ಭಾರತೀಯರ ಸಂಖ್ಯೆ ೧,೨೭೪,೨೩೪,೫೩೮. ಇದು ವಿಶ್ವದಲ್ಲಿರುವ ಮನುಷ್ಯರ ಸಂಖ್ಯೆಯಲ್ಲಿ ಶೇಕಡಾ ೧೭.೨೩.
ಜಾಗತಿಕವಾಗಿ ಜನಸಂಖ್ಯೆ ಬೆಳೆಯುತ್ತಿರುವುದರ ಬಗ್ಗೆ ಹಾಗೂ ತುರ್ತು ಪರಿಸ್ಥಿತಿಯಲ್ಲಿ ಜನಸಂಖ್ಯೆಯ ಮೇಲೆ ಬೀರಬಹುದಾದ ಪರಿಣಾಮದ ಬಗ್ಗೆ ಅರಿವು ಮೂಡಿಸುತ್ತದೆ ವಿಶ್ವ ಜನಸಂಖ್ಯಾ ದಿನ.
೨೦೨೮ರ ವೇಳೆಗೆ ಅತಿ ಹೆಚ್ಚು ಜನಸಂಖ್ಯೆಯುಳ್ಳ ದೇಶವಾಗಿ ಭಾರತ ಚೈನಾವನ್ನು ಹಿಂದಕ್ಕಲಿದೆ ಎನ್ನುತ್ತವೆ ಅಂಕಿಅಂಶ. ಆದರೆ ೧೯೯೧-೨೦೦೦ ಗೆ ಇದ್ದ ೨.೫೪% ಜನಸಂಖ್ಯಾ ಹೆಚ್ಚಳದಿಂದ ೨೦೦೧-೧೧ ರ ಸಮಯದಲ್ಲಿ ಈ ಹೆಚ್ಚಳ ೧೭.೬೪% ಇಳಿದಿದೆ ಎಂದು ಕೂಡ ತಿಳಿದುಬಂದಿದೆ.
1952 ರಲ್ಲಿ ಪ್ರಾರಂಭವಾದ ಜನಸಂಖ್ಯಾ ನಿಯಂತ್ರಣ ಕಾರ್ಯಕ್ರಮಗಳು ಇಂದು ಫಲ ನೀಡಿವೆ ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


