'ಸಮವಸ್ತ್ರ' ಸುಂದರಿ
ಕೇರಳ ಮೂಲದ ಮಹಿಳಾ ಐಪಿಎಸ್ ಅಧಿಕಾರಿ ಒಬ್ಬರು ಎಷ್ಟು ಸುಂದರವಾಗಿ...

ಕೇರಳ ಮೂಲದ ಮಹಿಳಾ ಐಪಿಎಸ್ ಅಧಿಕಾರಿ ಒಬ್ಬರು ಎಷ್ಟು ಸುಂದರವಾಗಿದ್ದಾರೆಂದರೆ, ಅರೆಸ್ಟ್ ಆಗುವ ನೆಪದಲ್ಲಾದರೂ ಆಕೆಯ ದನಿ ಕೇಳಲು, ಹತ್ತಿರದಿಂದ ನೋಡಲು ಯುವಕರು ಕಾತರರಾಗಿದ್ದಾರೆ. ಹೀಗಾಗಿ ಆಕೆ ಬಂದು ಅರೆಸ್ಟ್ ಮಾಡುವುದಾದರೆ ನಾನು ಕಳ್ಳತನ ಮಾಡಲೂ ಸಿದ್ಧ ಎಂದು ಫೇಸ್ಬುಕ್ನಲ್ಲಿ ಕಾಮೆಂಟ್ ಮಾಡಿದ್ದಾರೆ!
ದಿನವೊಂದರಲ್ಲಿ 10,000ಲೈಕ್ ಗಳಿಸಿದ ಆಕೆಯ ಫೋಟೋ, ನೂರಾರು ಶೇರ್ಗಳನ್ನು ಕಂಡು, ವಾಟ್ಸಾಪ್ಗೂ ದಾಳಿಯಿಟ್ಟು ಫಾರ್ವರ್ಡ್ ಮೇಲೆ ಫಾರ್ವರ್ಡ್ ಕಂಡಿದೆ. ಅವಳ ಫೋಟೋವನ್ನು ಫೇಸ್ ಬುಕ್ಗೆ ಹಾಕಿದ ಯುವಕನೊಬ್ಬ, ಕೊಚ್ಚಿಗೆ ಬಂದಿರುವ ಹೊಸ ಎಸಿಪಿ ಎಂದು ಹೇಳಿ ವೆಲ್ಕಂ ಮಾಡಿದ್ದ. ಸುದ್ದಿ ಸುಳ್ಳಾದರೂ ಅದರ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳಲಿಲ್ಲ ಬಿಡಿ! ಎಲ್ಲ ಹುಡುಗರೂ ಕಾಮೆಂಟ್ ಬಾಕ್ಸ್ನಲ್ಲಿ ಸೌಂದರ್ಯ ಸಮರಕ್ಕಿಳಿದು, ಖದೀಮರಾಗುವ ಬಗ್ಗೆಯೇ ಯೋಚಿಸತೊಡಗಿದ್ದರು. ಯಾವ ಮಟ್ಟದ ದರೋಡೆಗಿಳಿದರೆ ಮೆರಿನ್ ಬಂದು ತಮ್ಮ ಕೈ ಸವರಿ ಕೋಳ ತೊಡಿಸಬಲ್ಲಳು ಎಂಬ ಜಿಜ್ಞಾಸೆಯಲ್ಲಿ ತೊಡಗಿದರು! ಜೊತೆ ಜೊತೆಗೆ ಸ್ಪರ್ಧೆಗೆ ಬಿದ್ದು ಆಕೆಗೆ ಶುಭ ಕೋರಿದರು. ಅಷ್ಟಕ್ಕೇ ಮುಗಿಯದ ಈ ಕತೆ, ಆಕೆಯ ಫೋಟೋದೊಂದಿಗೆ ನಟ ಮೋಹನ್ಲಾಲ್ ಅವರು 'ಅರೆಸ್ಟ್ ಮಿ' ಕೋರುತ್ತಿರುವ ಮೆಮೆ ಮಾಡಿ ಹರಿಬಿಟ್ಟರು.
ಒಂದೇ ದಿನದಲ್ಲಿ ಸಾವಿರಾರು ಹುಡುಗರ ವಾಲ್ಗಳಿಗೆ ವೈರಸ್ನಂತೆ ಅಟ್ಯಾಕ್ ಮಾಡಿದ ಆಕೆಯ ಹೆಸರು ಮೆರಿನ್ ಜೋಸೆಫ್. 2012ರಲ್ಲಿ ಸಿವಿಲ್ ಸರ್ವಿಶ್ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲೇ ಪಾಸ್ ಮಾಡಿರುವ ಈಕೆ, ದೆಹಲಿಯಲ್ಲಿ ಬಿಎ ಮುಗಿಸಿದ್ದಾಳೆ. 'ಐಪಿಎಸ್ ಟ್ರೈನಿಂಗ್ಗಾಗಿ ಕೊಚ್ಚಿಗೆ 2 ವಾರಕ್ಕೆ ಬಂದಿದ್ದೆನಷ್ಟೆ' ಜನವರಿಯ ನಂತರವಷ್ಟೆ ನಾನು ಚಾರ್ಜ್ ವಹಿಸಿಕೊಳ್ಳಬಲ್ಲೆ. ನನ್ನ ಬಗ್ಗೆ ಹಬ್ಬಿರುವ ವದಂತಿಗಳನ್ನು ನಂಬದಿರಿ ಎಂದು ಫೇಸ್ಬುಕ್ನಲ್ಲಿ ತನ್ನ ಗೋಡೆ ಮೇಲೆ ಬರೆದುಕೊಂಡಿದ್ದಾಳೆ.
ಇನ್ನೀಕೆ ಚಾರ್ಜ್ ವಹಿಸಿಕೊಂಡ ಮೇಲೆ ಕಳ್ಳರನ್ನು ತಳ್ಳಲು ಜೈಲಿನ ಕೊಠಡಿ ಸಾಕಾಗುವುದೋ ಇಲ್ಲವೋ? ಜೊತೆಯಲ್ಲಿ ಕೆಲಸ ನಿರ್ವಹಿಸುವ ಪುರುಷ ಪೊಲೀಸರ ಗತಿಯೇನೋ? ಕಾದು ನೋಡಬೇಕಿದೆ!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


