ಶಾಂತಿಯ ಡೈನಾಮೈಟ್ ಸ್ಫೋಟ!

ಡೈನಾಮೈಟ್ ಸಿಡಿದಿದೆ. ಶಾಂತಿ ಕದಡಿದೆ. ಹೂ. ಭಾರತೀಯ ಮೂಲದ ಬ್ರಿಟಿಷ್ ನೀಲಿ ಚಿತ್ರತಾರೆ ಶಾಂತಿ ಡೈನಾಮೈಟ್ ತನ್ನನ್ನು ಸನ್ನಿಲಿಯೋನ್‌ಗೆ ಹೋಲಿಸಿರುವವರ ವಿರುದ್ಧ ಗರಮ್ಮಾಗಿದ್ದಾಳೆ.
'ಇಬ್ರೂ ನೀಲಿ ಚಿತ್ರದಲ್ಲಿ ನಟಿಸಿದ್ದೀವಿ ಅಂದಾಕ್ಷಣ ನಮ್ಮಿಬ್ಬರನ್ನೂ ಒಂದೇ ತಕ್ಕಡಿಯಲ್ಲಿ ತೂಗಬೇಡಿ' ಎಂದು ಕಿರುಚಾಡಿರುವ ಶಾಂತಿ, ಮಾಧ್ಯಮದವರಿಗೆ ತನ್ನ 'ಐ ಲವ್ ದುಬೈ' ಬಿಡುಗಡೆಯಾಗುವ ತನಕ ಕಾದು ನೋಡಲು ತಾಕೀತು ಮಾಡಿದ್ದಾಳೆ. 'ನನಗಿರುವ ಎಲ್ಲವೂ ಅವಳಿಗಿದೆ. ಅದನ್ನು ಈವರೆಗೆ ಇಬ್ಬರೂ ಪ್ರದರ್ಶಿಸಿದ್ದೇವೆ. ಆದರೆ ನನಗಿರುವ ಅಭಿನಯ ಸಾಮರ್ಥ್ಯ ಅವಳಿಗಿಲ್ಲ. ಅದನ್ನು ಇಕ್ರಮ್ ಅಕ್ತರ್ ನಿರ್ದೇಶನದ ಐ ಲವ್ ದುಬೈ ಪ್ರೂವ್ ಮಾಡಲಿದೆ' ಎಂದು ಗುಡುಗಿದ್ದಾಳೆ ಶಾಂತಿ. ಬ್ರಿಟಿಷ್ ಪತ್ರಿಕೆಯೊಂದರ ಪ್ರಕಾರ ಶಾಂತಿ ಏಷ್ಯಾದ ಟಾಪ್ 50 ಸೆಕ್ಸಿ ತಾರೆಯರಲ್ಲಿ ಒಬ್ಬಳು. ಆದರೆ ಅದರ ಹೊರತಾಗಿ ತನ್ನ ಇಮೇಜ್ ಬೆಳೆಸಿಕೊಳ್ಳುವುದು ಆಕೆಯ ಸದ್ಯದ ಆದ್ಯತೆಯಂತೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


