ಪ್ರೇಮದ ಕೀಟಗಳು
ಪ್ರಿಯಕರ ಅಥವಾ ಪ್ರಿಯತಮೆಯಾಗಿ ಕಾಯುತ್ತಿರುವಾಗ ಇನ್ಯಾರಾದಾರೂ ನಮ್ಮ ತಲೆ ತಿನ್ನುತ್ತ ಕೂತುಕೊಂಡಿದ್ದರೆ ಕೆಟ್ಟ ಸಿಟ್ಟು ...

ಪ್ರಿಯಕರ ಅಥವಾ ಪ್ರಿಯತಮೆಯಾಗಿ ಕಾಯುತ್ತಿರುವಾಗ ಇನ್ಯಾರಾದಾರೂ ನಮ್ಮ ತಲೆ ತಿನ್ನುತ್ತ ಕೂತುಕೊಂಡಿದ್ದರೆ ಕೆಟ್ಟ ಸಿಟ್ಟು ಬಂದೇ ಬರುತ್ತದೆ. ಇದು ಇಂದಿನ ಕತೆಯಲ್ಲ, ಎಂದಿನಿಂದಲೂ ಹೀಗೇ. ಇಲ್ಲೊಬ್ಬಳು ನಾಯಿಕೆ ಇದ್ದಾಳೆ. ನೋಡಿ
ಆಯಾತೇ ದಯಿತೇ ಮನೋರಥಶತೈರ್ನಿತ್ವಾ ಕಥಂಚಿದ್ದಿನಂ
ವೈದಗದ್ದ್ಯಾಪಗಮಾಜ್ಜಡೇ ಪರಿಜನೇ ದೀರ್ಘಾ ಕಥಾಂ ಕುರ್ವತಿ
ದಷ್ಟಾಸ್ಮೀತ್ಯಭಿಧಾಯ ಸತ್ವರಪದಂ ವ್ಯಾಧೂಯ ಚೀನಾಂಶುಕಂ
ತನ್ವಂಗ್ಯಾ ರತಿಕಾತರೇಣ ಮನಸಾ ನೀತಃ ಪ್ರದೀಪ ಶಮಮ್
ವಿದೇಶಕ್ಕೆ ಹೋಗಿರುವ ಪ್ರಿಯತಮನು ಸದ್ಯದಲ್ಲೇ ಬರಲಿದ್ದಾನೆ. ಆತ ಪ್ರತೀಕ್ಷೆಯಲ್ಲಿ ತರುಣಿ ಇದ್ದಾಳೆ. ಹಗಲು ಹೇಗೋ ಹೊತ್ತು ಕಳೆಯುತ್ತಾಳೆ- ಪ್ರಿಯತಮನ ಆಗಮನಾನಂತರ ಅಪ್ಪುಗೆ ಸಿಹಿಮುತ್ತು ಇತ್ಯಾದಿ ತನ್ನ ಮನೋರಥಗಳು ಹೇಗೆ ಈಡೇರಬಹುದು ಎಂದೆಲ್ಲ ಊಹಿಸಿಕೊಳ್ಳುತ್ತ . ಆದರೆ ಸಂಜೆಯಾದ ಕೂಡಲೆ ಆಕೆಯ ಕೆಲವು ಸಖಿಯರು ಬಳಿ ಬಂದು ಬೋರ್ ಹೊಡೆಸುವ ನೀರಸ ಮಾತು ಕತೆಯಲ್ಲಿ ನಿರತರಾಗುತ್ತಾರೆ. ಪ್ರಿಯನನ್ನು ಕೂಡಲು ಕಾತರಳಾದ ಅಳು ಇದನ್ನೆಂತು ಸಹಿಸಿಯಾಳು? ಇರುವೆ, ಸೊಳ್ಳೆ ಇತ್ಯಾದಿ ಕ್ರಿಮಿಕೀಟಗಳು ತನ್ನನ್ನು ಕಚ್ಚುತ್ತಿವೆ ಎಂದು ಉಡುಗೆಯನ್ನು ಒದರುತ್ತಾ ಒಳಹೋಗಿ, ದೀಪವನ್ನು ಆರಿಸುತ್ತಾಳೆ. ದೀಪ ಆರಿಸಿದ್ದು, ಕ್ರಿಮಿಕೀಟಗಳು ಬರದಿರಲೆಂದಲ್ಲ, ಸಖಿಯರು ತೊಲಗಲಿ ಎಂಬುದಕ್ಕಾಗಿ.
ನೆನಪಿಡಿ, ಪ್ರೇಮಿಗಳ ಸಮಾಗಮದ ಮಧ್ಯೆ ಮೂಗು ತೂರಿಸಿ ಅವರ ಸಮಯ ಹಾಳು ಮಾಡಿದರೆ ನೀವು ಕ್ರಿಮಿಕೀಟಕ್ಕಿಂತ ಕಡೆಯಾಗುತ್ತೀರಿ!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


