ಮೋಜಿನ ಕ್ಷಿಪಣಿ
ದೀಪಾವಳಿಗೆ ಎಲ್ಲರ ಮನೆ ಮುಂದೆ ದೀಪಾಲಂಕಾರ ಜತೆಗೆ ಆಕಾಶಬುಟ್ಟಿ ಕಟ್ಟುವುದು ಸರ್ವೆ ಸಾಮಾನ್ಯ. ಈಗಂತೂ ವಿವಿಧ...

ದೀಪಾವಳಿಗೆ ಎಲ್ಲರ ಮನೆ ಮುಂದೆ ದೀಪಾಲಂಕಾರ ಜತೆಗೆ ಆಕಾಶಬುಟ್ಟಿ ಕಟ್ಟುವುದು ಸರ್ವೆ ಸಾಮಾನ್ಯ. ಈಗಂತೂ ವಿವಿಧ ತೆರನಾದ ಆಕಾಶಬುಟ್ಟಿಗಳು ಮಾರುಕಟ್ಟೆಯಲ್ಲಿ ಸಿಗ್ತವೆ. ರಾಜ್ಯದ ನಾನಾ ಕಡೆಗಳಹಳ್ಳಿಗಳಲ್ಲಿ ಇಂದಿಗೂ ಕಾಗದದ ಆಕಾಶಬುಟ್ಟಿ ಹಾರಿ ಬಿಡುವುದು ರೂಢಿ. ದೀಪಾವಳಿಯ ಈ ಸಂದರ್ಭದಲ್ಲಿ ಯುವಕರು ಹಾರಿಬಿಡುವ ಆಕಾಶಬುಟ್ಟಿಯು ನೋಡುಗರಿಗೆ ಧೂಮಕೇತುವಿನಂತೆ, ಅನ್ಯಗ್ರಹದಿಂದ ಹಾರಿಬಂದ ತಟ್ಟೆಯಂತೆ ಕಾಣಿಸುತ್ತದೆ.
ಬಾಗಲಕೋಟೆ ಜಿಲ್ಲೆಯ ಗುಳೆದಗುಡ್ಡದ ಯುವಕರ ಪಡೆ ಈ ಹೊತ್ತಿನಲ್ಲಿ ಬಣ್ಣ ಬಣ್ಣದ ಕಾಗದಗಳ ಜತೆ ಜತೆಗೆ ಕೆಲ ಬಿದಿರಿನ ತುಂಡು, ಅಂಟು, ತಂತಿ, ಬೆಂಕಿ ಪೊಟ್ಟಣದೊಂದಿಗೆ ನಾ ಮುಂದು- ತಾ ಮುಂದು ಎನ್ನುವಂತೆ ಆಕಾಶಕ್ಕೆ ಏರಿಸುವ ಆಕಾಶಬುಟ್ಟಿಗಳನ್ನು ಸಮರೋಪಾದಿಯಲ್ಲಿ ಉಡ್ಡಯಿಸಲು ಕಾತುರರಾಗಿರುತ್ತಾರೆ. ಸಂಜೆಯಾಗುತ್ತಿದ್ದಂತೆ ಸಕಲ ತಯಾರಿಯಲ್ಲಿ ಆಗಮಿಸುವ ಯುವಕರ ಗುಂಪು ಇದನ್ನ ತಯಾರಿಸಿ, ಒಣಗಿಸಿ ಹಾರಿಬಿಡುವ ಹೊತ್ತಿಗೆ ಇದನ್ನೇ ನೋಡಲು ಊಟ ಮುಗಿಸಿ ಬಂದ ಹೆಣ್ಣುಮಕ್ಕಳು , ಪುಟಾಣಿಗಳ ದಂಡೇ ಇಲ್ಲಿ ನೆರೆದಿರುತ್ತದೆ. ಅಷ್ಟೇ ಅಲ್ಲ ಹಿರಿಯರು ಕೂಡಾ ಇದಕ್ಕೆ ಮಾರ್ಗದರ್ಶನ ಮಾಡುತ್ತಿರುತ್ತಾರೆ.
ಹೀಗಿರುತ್ತೆ ಉಡ್ಡಯನ
ತಂತಿ ಮತ್ತು ಕಾಗದದಿಂದ ತಯಾರಿಸಿದ ಆಕಾಶಬುಟ್ಟಿಗದೆ ಒಳಗಡೆ ಹೊಗೆಯನ್ನು ತುಂಬಿಸಲಾಗುತ್ತೆ. ತದನಂತರ ಎಣ್ಣೆಯ ಬಟ್ಟೆಯನ್ನು ಸುತ್ತಿದ ತಂತಿಗೆ ಬೆಂಕಿ ಹಚ್ಚಲಾಗುತ್ತೆ. ಶಾಖದಿಂದ ಆಕಾಶಬುಟ್ಟಿಯೊಳಗಿನ ಗಾಳಿ ವಿರಳವಾಗುತ್ತಾ; ಹಗುರವಾಗುತ್ತಾ ನೋಡ ನೋಡುತ್ತಿದ್ದಂತೆ ರಾಕೆಟ್‌ನಂತೆ ನಿಧಾನವಾಗಿ ಮೇಲೇರತೊಡಗುತ್ತೆ. ಎಲ್ಲರೂ ಹೋಯ್ ಎಂದು ಕೂಗುತ್ತಾ, ಸೀಟಿ ಹೊಡೆದು -ಚಪ್ಪಾಳೆ ತಟ್ಟುತ್ತಾ ಆಕಾಶ ಬುಟ್ಟಿಗೆ ಟಾಟಾ ಮಾಡುತ್ತಾರೆ.
-ಪ್ರವೀಣ ರಾಜು ಸೊನ್ನದ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


