ಫ್ರಾನ್ಸ್ ಗ್ರಂಥಾಲಯದಲ್ಲಿ ಅಪರೂಪದ ಶೇಕ್ಸ್ಪಿಯರ್ ಫೋಲಿಯೊ ಪತ್ತೆ
ಕೇವಲ ೨೩೦ ಪುಸ್ತಕಗಳಷ್ಟೇ ವಿಶ್ವದಾದ್ಯಂತ

ಪ್ಯಾರಿಸ್: ಕೇವಲ ೨೩೦ ಪುಸ್ತಕಗಳಷ್ಟೇ ವಿಶ್ವದಾದ್ಯಂತ ಉಳಿದಿವೆ ಎಂದು ನಂಬಲಾದ 'ಶೇಕ್ಸ್ಪಿಯರ್ ಫರ್ಸ್ಟ್ ಫೋಲಿಯೊ' ಸೇಂಟ್-ಒಮರ್ ಗ್ರಂಥಾಲಯದಲ್ಲಿ ೨೦೦ ವರ್ಷಗಳಿಂದ ಯಾರೂ ಎರವಲು ಪಡೆಯದೆ ಬಿದ್ದದ್ದು ಪತ್ತೆಯಾಗಿದೆ.
ಏನಿದು ಶೇಕ್ಸ್ಪಿಯರ್ ಫರ್ಸ್ಟ್ ಫೋಲಿಯೊ?
೧೬೨೩ ರಲ್ಲಿ ಪ್ರಕಟವಾದ ಈ ಪುಸ್ತಕ ಶೇಕ್ಸ್ಪಿಯರ್ ನ ೩೬ ನಾಟಕಗಳನ್ನೊಳಗೊಂಡ, ಫೋಲಿಯೊ ವಿನ್ಯಾಸದಲ್ಲಿ ಮುದ್ರಣವಾದ ಈ ಪುಸ್ತಕ ಅತಿ ವಿರಳ. ಇದನ್ನು ಸಂಪಾದಿಸಿದ್ದವರು ಶೇಕ್ಸ್ಪಿಯರ್ ನ ಸಹೋದ್ಯೋಗಿಗಳಾದ ಜಾನ್ ಹೆಮ್ಮಿಂಗ್ಸ್ ಮತ್ತು ಹೆನ್ರಿ ಕಾಂಡೆಲ್. ಈ ವಿಶ್ವವಿಖ್ಯಾತ ನಾಟಕಕಾರ ಸತ್ತ ಏಳು ವರ್ಷದ ನಂತರ ಪ್ರಕಟವಾಗಿತ್ತು. ಇದರ ೮೦೦ ಪ್ರತಿಗಳು ಮುದ್ರಣವಾಗಿ ಕೇವಲ ೨೩೦ ಪುಸ್ತಕಗಳಷ್ಟೇ ವಿಶ್ವದಾದ್ಯಂತ ಗ್ರಂಥಾಲಯಗಳಲ್ಲಿ ಮತ್ತು ವಿರಳ ಪುಸ್ತಕ ಸಂಗ್ರಹಗಾರರಲ್ಲಿದೆ ಎಂದು ನಂಬಲಾಗಿದೆ. ಈ ನಾಟಕಕಾರನ ಎಷ್ಟೋ ನಾಟಕಗಳು ಜನರಿಗೆ ತಲುಪಲು ಇದ್ದ ಒಂದೇ ಮೂಲ ಇದಾಗಿತ್ತು.
ಮೂಲ ಬೆಲೆ ೧ ಪೌಂಡ್ ಆಗಿದ್ದ ಈ ಪುಸ್ತಕ ಇಂದು ೧೫-೨೦ ಮಿಲಿಯನ್ ಪೌಂಡ್ ವರೆಗೆ ಮಾರಾಟವಾಗಬಹುದು ಎಂದು ಹೇಳಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


