ಮಾರ್ಕ್ ಜೂಕರ್‌ಬರ್ಗ್ ಯಾಕೆ ಒಂದೇ ಕಲರ್‌ನ ಟೀಶರ್ಟ್ ಧರಿಸ್ತಾರೆ?
ಸಾಮಾಜಿಕ ತಾಣ ಫೇಸ್‌ಬುಕ್ ಸಿಇಒ ಮಾರ್ಕ್ ಜೂಕರ್‌ಬರ್ಗ್ ಯಾವತ್ತೂ ಬೇರೆ ಕಲರ್‌ನ ಡ್ರೆಸ್ ಹಾಕಿದ್ದೇ ನೋಡಿಲ್ಲ....

ಸಾಮಾಜಿಕ ತಾಣ ಫೇಸ್‌ಬುಕ್ ಸಿಇಒ ಮಾರ್ಕ್ ಜೂಕರ್‌ಬರ್ಗ್ ಯಾವತ್ತೂ ಬೇರೆ ಕಲರ್‌ನ ಡ್ರೆಸ್ ಹಾಕಿದ್ದೇ ನೋಡಿಲ್ಲ. ಯಾವುದೇ ಸಾರ್ವಜನಿಕ ಕಾರ್ಯಕ್ರಮಗಳಿರಲಿ ಜೂಕರ್‌ಬರ್ಗ್ ಮಾತ್ರ ಬೂದು ಬಣ್ಣದ ಟೀ ಶರ್ಟ್‌ನಲ್ಲೇ ಕಾಣಿಸಿಕೊಳ್ತಾರೆ! ಇದರ ಹಿಂದಿರುವ ಕಾರಣವೇನು? ಹೀಗೊಂದು ಪ್ರಶ್ನೆ ಎಲ್ಲರ ಮನಸ್ಸಿನಲ್ಲಿಯೂ ಹುಟ್ಟಿರಬಹುದು. ಈ ಪ್ರಶ್ನೆಗೀಗ ಉತ್ತರ ಸಿಕ್ಕಿದೆ!
ಗುರುವಾರ ಇದೇ ಮೊದಲ ಬಾರಿ ಸಾರ್ವಜನಿಕರೊಂದಿಗೆ ಮಾತನಾಡಿದ ಜೂಕರ್‌ಬರ್ಗ್ ಜನರ ಪ್ರಶ್ನೆಗಳಿಗೆ ನಗುತ್ತಾ ಉತ್ತರಿಸಿದ್ದಾರೆ. ವೇದಿಕೆಯಲ್ಲಿದ್ದ ಜೂಕರ್‌ಬರ್ಗ್‌ಗೆ ನೀವ್ಯಾಕೆ ಪ್ರತೀ ದಿನ ಒಂದೇ ಟೀ ಶರ್ಟ್‌ನ್ನು ಧರಿಸುತ್ತೀರಿ? ಎಂದು ಕೇಳಲಾಯಿತು. ಈ ಪ್ರಶ್ನೆಗೆ ಉತ್ತರಿಸಿದ ಜೂಕರ್‌ಬರ್ಗ್ ನನ್ನಲ್ಲಿ ಒಂದೇ ಕಲರ್‌ನ ಹಲವಾರು ಟೀ ಶರ್ಟ್‌ಗಳಿವೆ ಎಂದು ನಗುತ್ತಾ ಹೇಳಿದ್ದಾರೆ. ಈ ಸಮಾಜಕ್ಕೆ ನಾನೇನು ಕೊಡಬಲ್ಲೆ ಎಂಬುದರ ಬಗ್ಗೆ ನಾನು ಸದಾ ಯೋಚಿಸುತ್ತಿರುತ್ತೇನೆ. ಆದ್ದರಿಂದ ಯಾವುದು ಬಟ್ಟೆ ತೊಡಬೇಕು ಎಂಬುದರ ಬಗ್ಗೆ ಯೋಚಿಸಲು ನಾನು ಹೋಗುವುದಿಲ್ಲ.
ನಾನು ಯಾವ ಬಟ್ಟೆ ತೊಡಬೇಕು? ಬೆಳಗ್ಗಿನ ಉಪಹಾರಕ್ಕೆ ಏನು ತಿನ್ನಬೇಕು? ಮೊದಲಾದ ಪ್ರಶ್ನೆಗಳಿಗೆ ಉತ್ತರ ಯೋಚಿಸಿ ಶಕ್ತಿಯನ್ನು ಹಾಳು ಮಾಡಲು ನಾನು ಇಚ್ಛಿಸುವುದಿಲ್ಲ. ಮಾತ್ರವಲ್ಲದೆ ಇದರ ಬಗ್ಗೆಯೆಲ್ಲಾ ಯೋಚಿಸಿ ಸಮಯ ಹಾಳು ಮಾಡಿಕೊಡಿಕೊಳ್ಳಲು ನನಗಿಷ್ಟವಿಲ್ಲ ಎಂದು ಜೂಕರ್ ಬರ್ಗ್ ಹೇಳಿದ್ದಾರೆ.
ನಾನು ಪ್ರತಿದಿನ ಎದ್ದು, ನೂರುಕೋಟಿ ಜನರಿಗೆ ಯಾವ ರೀತಿ ಸಹಾಯ ಮಾಡಬಹುದು ಎಂದು ಯೋಚಿಸುತ್ತೇನೆ. ನನ್ನ ಜೀವನದ ಬಗ್ಗೆ ಯೋಚಿಸಲು ಹೋದರೆ ನಾನು ನನ್ನ ಕೆಲಸವನ್ನು ಸರಿಯಾಗಿ ಮಾಡುತ್ತಿಲ್ಲವೇನೋ ಎಂದು ನನಗೆ ಅನಿಸಿ ಬಿಡುತ್ತದೆ. ನನ್ನ ಜೀವನದ ಬಗ್ಗೆಯಿರುವ ಇಂಥಾ ವಿಷಯಗಳೆಲ್ಲ ನನಗೆ ಮೂರ್ಖತನ ಎಂದೆನಿಸುತ್ತದೆ.
ಆದಾಗ್ಯೂ, ಆ್ಯಪಲ್ ಸಂಸ್ಥೆಯ ಸಂಸ್ಥಾಪಕ ಸ್ಟೀವ್ ಜಾಬ್ ಅಥವಾ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಕೂಡಾ ತಾವು ಧರಿಸುವ ವಸ್ತ್ರದ ಬಗ್ಗೆ ಇದೇ ನಿಲುವನ್ನು ಪಾಲಿಸುತ್ತಿದ್ದಾರೆ ಎಂದು ಜೂಕರ್‌ಬರ್ಗ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


