ಆ ತುಟಿಗಳು
ಬರಿಯ ಚರ್ಮದ ತೀಟೆಗಾಗಿ ಗಂಡನ್ನು ಸಮೀಪಿಸುವ ಹೆಣ್ಣು, ಹೆಣ್ಣಿನ ಬಳಿ ಸುಳಿದಾಡುವ ಗಂಡು...

ಗಂಡು ಹೆಣ್ಣಿನ ಸಮಾಗಮಕ್ಕೆ ಒಂದು ಘನತೆ ಇರಬೇಕು. ಬರಿಯ ಚರ್ಮದ ತೀಟೆಗಾಗಿ ಗಂಡನ್ನು ಸಮೀಪಿಸುವ ಹೆಣ್ಣು, ಹೆಣ್ಣಿನ ಬಳಿ ಸುಳಿದಾಡುವ ಗಂಡು ಉತ್ತಮರಲ್ಲ. ಮಿಲನದ ಮಂಚದಲ್ಲಿ ಕೇವಲ ಕಾಮದ ಒಗರು ಇರಬಾರದು. ಅಲ್ಲಿ ಪ್ರೇಮದ ನವುರೂ ಇರಬೇಕು. ಆಗಷ್ಟೇ ಅದು ಶ್ರೇಷ್ಠವೆನಿಸುತ್ತದೆ. ಹಾಗಿದ್ದರೆ ವೇಶ್ಯೆಯರ ಗತಿ?
ಇದು ಜಗತ್ತಿನ ಅತ್ಯಂತ ಪ್ರಾಚೀನ ವೃತ್ತಿ. ಸಂಸ್ಕೃತ ಕಾವ್ಯ ನಾಟಕಗಳಲ್ಲಿ ವೇಶ್ಯಾವಾಟಿಕೆಗಳ ವರ್ಣನೆ ಧಾರಾಳ. ಕವಿಗಳೂ ಸಾಕಷ್ಟು ರಸಿಕರೇ ಇದ್ದುದರಿಂದ, ಈ ಭಾಗಗಳನ್ನು ಮನೋಹರ ವರ್ಣನೆಗಳಿಗೆ ಮೀಸಲಿಟ್ಟಿದ್ದಾರೆ. ಅಲ್ಲಿ ಗೌರವಾನ್ವಿತ ವೇಶ್ಯೆಯರೂ ಸಾಕಷ್ಟು ಮಂದಿ ಇದ್ದರು. ಆದರೆ ಕೆಲ ಕವಿಗಳಿಗಳಿಗೆ ವೇಶ್ಯೆಯರನ್ನು ಕಂಡರೆ ಆಗದು. ಅಂಥವರು ಆ ಬಗ್ಗೆ ಜಿಗುಪ್ಸೆ ಹುಟ್ಟಿಸುವ ಚಿತ್ರಣ ಕೊಡುತ್ತಾರೆ.
ವೇಶ್ಯೆಯರ ತುಟಿಗಳು ಮೇಲ್ನೋಟಕ್ಕೆ ಚೆಲುವೆಯಾಗಿಯೂ ಎಳೆಚಿಗುರಿನಂತ ಕೋಮಲವಾಗಿಯೂ ತೋರುತ್ತದೆ. ಆದರೆ ಅವು ಗೂಢಚರರು, ಸೈನಿಕರು, ಕಳ್ಳರು, ಚೇಟಕರು(ಪಿಂಪ್‌ಗಳು), ವಿಟಪುರುಷರು, ಸೋಗುಗಾರ ನಟರು ಮುಂತಾದವರು ಉಗುಳುವ ಪಾತ್ರೆಗಳಲ್ಲವೇ? ಅಂಥವುಗಳನ್ನು ಕುಲೀನನಾದ ಪುರುಷನು ಚುಂಬಿಸಲುಂಟೇ ವೇಶ್ಯೆಯರ ಬಗ್ಗೆ ಜಿಗುಪ್ಸೆ ಹುಟ್ಟಿಸಲೆಂದೇ ಕವಿ ಇದನ್ನು ಬರೆದಂತಿದೆ. ಆದರೆ ವಿಟರು ಇರುವವರೆಗೆ ಜಾರಿಣಿಯರೂ ಇರುತ್ತಾರೆ ಎಂಬುದನ್ನು ಮರೆಯುವಂತಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


