ವಿಶೇಷ

ಕನ್ನಡನುಡಿ ಪರ್ವ: ಭಾಷೆಯಾಗಿ ಕನ್ನಡದ ಸ್ಥಿತಿ-ಗತಿ ಮತ್ತು ಸ್ವಾಸ್ಥ್ಯ

ಕೆಳಗಿನ ಹೇಳಿಕೆಗಳನ್ನು ಕುರಿತು ಯೋಚಿಸಿ...

ಕನ್ನಡನುಡಿ ಪರ್ವ: ಭಾಷೆಯಾಗಿ ಕನ್ನಡದ ಸ್ಥಿತಿ-ಗತಿ ಮತ್ತು ಸ್ವಾಸ್ಥ್ಯ
Published On :

ಈ ಕೆಳಗಿನ ಹೇಳಿಕೆಗಳನ್ನು ಕುರಿತು ಯೋಚಿಸಿ ಅದರ ಅಂಕಿ ಅಂಶಗಳನ್ನು ಕೆದಕಿದರೆ/ಚಿತ್ರಿಸಿಕೊಂಡರೆ ಕನ್ನಡ ನಿಧಾನವಾಗಿ ಕನ್ನಡಿಗರ ಮನ ಮನೆಗಳಿಂದ ದೂರವಾಗುತ್ತಿರುವುದನ್ನು ಗಮನಿಸಬಹುದು.

  • ಕರ್ನಾಟಕದ ಜನಸಂಖ್ಯೆ-

  • ಕನ್ನಡಿಗರ ಸಂಖ್ಯೆ

  • ಕನ್ನಡ ಮಾತನಾಡುವವರ ಸಂಖ್ಯೆ

  • ಕನ್ನಡ ಮಾಧ್ಯಮದಲ್ಲಿ ಕಲಿಯುತ್ತಿರುವ ಮಕ್ಕಳು

  • ಕನ್ನಡ ಮೊದಲ ಭಾಷೆಯಾಗಿ ಕಲಿಯುತ್ತಿರುವ ಮಕ್ಕಳು

  • ಕನ್ನಡ ನಿರರ್ಗಳ ಮಾತನಾಡಬಲ್ಲ ಕನ್ನಡಿಗರು

  • ಕನ್ನಡವನ್ನು ಸುಲಭವಾಗಿ ಬರೆಯಬಲ್ಲವರ ಸಂಖ್ಯೆ.

  • ಕನ್ನಡ ನಿಯತ ಕಾಲಿಕೆ/ ದಿನಪತ್ರಿಕೆ ಓದಬಲ್ಲ ಯುವ ಪೀಳಿಗೆ

  • ಕನ್ನಡ ಪುಸ್ತಕಗಳನ್ನು ಓದಬಲ್ಲ ಮಕ್ಕಳು

  • ಮನೆಯಲ್ಲಿ ಕನ್ನಡ ವ್ಯವಹಾರಿಕ ಭಾಷೆ

  • ಮನೆಯಲ್ಲಿ ಕಂಗ್ಲೀಶ್ ವ್ಯವಹಾರಿಕ ಭಾಷೆ

  • ಮನೆಯಲ್ಲಿ ಬಹುತೇಕ ಇಂಗ್ಲೀಶ್ ವ್ಯವಹಾರಿಕ ಭಾಷೆ

  • ಶಾಲೆ- ಹೊರಗಡೆ ಬಹುತೇಕ ಇಂಗ್ಲೀಷ್ ಬಳಸುವವರ ಸಂಖ್ಯೆ

  • ಕನ್ನಡ ದಿನಪತ್ರಿಕೆಗಳ ಮಾರಾಟದ ಒಟ್ಟು ಸಂಖ್ಯೆ

  • ನಿಯತಕಾಲಿಕೆಗಳ ಮಾರಾಟದ ಒಟ್ಟು ಸಂಖ್ಯೆ.

ಬದಲಾಗುತ್ತಿರುವ ಜನಸಂಖ್ಯಾ ಚಿತ್ರಣ ಮತ್ತು ಅದರ ಪರಿಣಾಮಗಳು

  • ಕುಟುಂಬ ಕಲ್ಯಾಣ ಯೋಜನೆ

  • ಒಂದು ಅಥವಾ ಎರಡು ಮಕ್ಕಳು

  • ಸಣ್ಣ ಪ್ರಮಾಣದ ಮಕ್ಕಳ ಸಂಖ್ಯೆ

  • ಹೆಚ್ಚುತ್ತಿರುವ ಕನ್ನಡ ವಿಮುಖತೆ

  • ಸಂಕುಚಿತಗೊಂಡ ಯುವ ಪೀಳಿಗೆಯ ಜನಸಂಖ್ಯೆ

  • ಸಂಕುಚಿತಗೊಂಡ ಕನ್ನಡವನ್ನು ಸಮರ್ಪಕವಾಗಿ ಬಳಸಬಲ್ಲ ಯುವಪೀಳಿಗೆಯ ಪ್ರಮಾಣ

  • ಸಂಕುಚಿತ ಭಾಷಾ ಬಳಕೆದಾರರ ಸಂಖ್ಯೆ

  • ಕನ್ನಡ ಭಾಷಾ ಅಲ್ಪ ಸಂಖ್ಯಾತರು

  • ಕನ್ನಡ ಭಾಷೆಯ ನಿರ್ವಹಣೆ  ಸರಕಾರಗಳಿಗೆ ಅರ್ಥಿಕ ಹೊರೆ

  • ಕನ್ನಡ ಭಾಷೆಗೆ ಸರಕಾರಗಳ ನಿರ್ಲಕ್ಷ್ಯ

  • ಕನ್ನಡ ಭಾಷಾ ಮರಣ ಶಾಸನ!!

ಇವೆಲ್ಲ ಪ್ರಶ್ನೆಗಳು ಕನ್ನಡದ ವತಿಯಿಂದ ಬಹಳ ಮುಖ್ಯವಾದವುಗಳು. ಕಾರಣ, ಕನ್ನಡ ಒಂದು ಪ್ರಾದೇಶಿಕ ಭಾಷೆ. ಅದಕ್ಕೆ ಸೀಮಿತ ಸಂಖ್ಯೆಯ ಜನರು ಮಾತ್ರವೇ ವಾರಸುದಾರರು. ಕನ್ನಡಕ್ಕೆ ಇಂಗ್ಲೀಷಿಗಿರುವಂತೆ ಜಾಗತಿಕ ವೇದಿಕೆ ಇಲ್ಲ.ಕನ್ನಡದ ಪುಸ್ತಕಗಳನ್ನು ಕನ್ನಡದವರು ಮಾತ್ರವೇ ಓದುವುದು. ಹೀಗಾಗಿ ಸಂಖ್ಯಾ ಪ್ರಮಾಣ ಕಡಿಮೆಯಿರುವಲ್ಲಿ ಪ್ರತಿಯೊಂದು ಸದಸ್ಯನಿಗೂ ಪ್ರಾಮುಖ್ಯತೆ ಬರುತ್ತದೆ ಹಾಗೂ ಅವರ ಕೊಡುಗೆಗೆ ಮಹತ್ವ ಇದೆ. ಇದನ್ನೇ ಇನ್ನೊಂದು ರೀತಿ ಹೇಳ ಬೇಕೆಂದರೆ, ಕನ್ನಡನುಡಿಯಿಂದ ವಿಮುಖನಾಗುವ ಪ್ರತಿಯೊಬ್ಬ ಪ್ರಜೆಯೂ ಕನ್ನಡವನ್ನು ವಿನಾಶದೆಡೆಗೆ ತಳ್ಳುತ್ತಿದ್ದಾನೆ/ಳೆ ಎಂದೆನ್ನಬಹುದು.

ಈ ಹಿನ್ನೆಲೆಯಲ್ಲಿ ನುಡಿಯ ಬಗೆಗೆ ನಾವೇಕೆ ಇಷ್ಟೊಂದು ಆತಂಕ ತಾಳಬೇಕೆಂಬುದನ್ನು ಇಲ್ಲಿ ಪರೀಕ್ಷಿಸೋಣ.

ನುಡಿಯ ಮಹತ್ವ:

ಈಗ ನುಡಿಯ ಮಹತ್ವ ಏನು? ನಾವು ಏಕೆ ನಮ್ಮ ಭಾಷೆಯ ಕುರಿತು ಅಭಿಮಾನ ತಳೆಯಬೇಕೆಂಬುದನ್ನು ಸ್ವಲ್ಪ ಪರ್ಯಾವಲೋಚಿಸೋಣ

ಸಂಘ ಜೀವಿಯಾಗಿ ವಿಕಾಸ ಹೊಂದಿದ ಮನುಷ್ಯ ಸಮಾಜಮುಖಿಯಾಗಿ ಸಮಾಜದ ಮೂಲಕ ತನ್ನ ಭದ್ರತೆಯನ್ನು ಕಂಡುಕೊಂಡಿದ್ದು ಈಗ ಓಬೀರಾಯನ ಇತಿಹಾಸವಾಗಿ ಕಾಣಬಹುದು. ಇವತ್ತು ನಾವು ಸಮಾಜವನ್ನು ನಮ್ಮ ದೇಹದ ಭಾಗದಷ್ಟೇ ಸ್ವಾಭಾವಿಕವಾಗಿ ಸ್ವೀಕರಿಸಿದ್ದೇವೆ. ಎಲ್ಲರಿಗೂ ಇದು ತಿಳಿದದ್ದೇ.ಚಿಕ್ಕ ಚಿಕ್ಕ ಗುಂಪುಗಳಾಗಿ, ನಂತರ ಪುಟ್ಟ ಸಮಾಜಗಳಾಗಿ, ಪುಟ್ಟ ಸಮಾಜಗಳು ದೊಡ್ದ ಸಮಾಜಗಳಾಗಿ,ಪ್ರಾಂತ್ಯ,ರಾಜ್ಯ, ದೇಶಗಳೆಂದು ಬೆಳೆದು ಇಂದು ತಮ್ಮದೇ ವೈಶಿಷ್ಟ್ಯಗಳನ್ನು ಪ್ರದರ್ಶಿಸುತ್ತ ಪ್ರಪಂಚದಲ್ಲಿ ತಮ್ಮ ತಮ್ಮ ಛಾಪು ಮೂಡಿಸುತ್ತಿರುವುದು, ತಮ್ಮ ಜೀವನಕ್ರಮವನ್ನು ಇತರರ ಮೇಲೆ ಹೇರುವ ಪ್ರಯತ್ನ ನಡೆಸುವುದು, ಅದನ್ನು ಇನ್ನೊಂದು ಸಮಾಜ ಪ್ರತಿಭಟಿಸುವುದು, ಕಾಲಾಂತರದಲ್ಲಿ ಒಂದು ಇನ್ನೊಂದನ್ನು ನುಂಗಿ ಹಾಕುವುದು, ಪ್ರತಿದಿನ ಕೇಳಿ, ಓದಿ, ತಿಳಿದ ಸರ್ವವೇದ್ಯ ಸತ್ಯ. ಧರ್ಮ, ದೇಶ, ಜಾತಿ, ನಂಬಿಕೆಗಳು ಮಾನವನನ್ನು ಪ್ರಬಲವಾಗಿ ಪ್ರಚೋದಿಸಬಲ್ಲ ವಿಷಯಗಳು. ಇವೆಲ್ಲವನ್ನು ಭಾವನಾತ್ಮಕವಾಗಿ ಬಂಧಿಸುವ ಸಾಮಾನ್ಯ ಕೊಂಡಿಯೇ ಭಾಷೆ. ಹೀಗಾಗಿ ಭಾಷೆ ಒಂದು ಸಮಾಜದ ಗುಣ-ಲಕ್ಷಣಗಳನ್ನು  ಪ್ರತಿನಿಧಿಸುವ ಅಪೂರ್ವ ಮತ್ತು ಶಕ್ತಿಶಾಲೀ  ಸಾಧನ. ಕರ್ನಾಟಕವೆಂಬ ಪ್ರಾಂತ್ಯದ ಕನ್ನಡಿಗರಿಗೂ ಕೊಂಡಿಯ ರೂಪದಲ್ಲಿ ಕನ್ನಡ ಭಾಷೆಯ ಪ್ರಸ್ತುತತೆ ಅನ್ವಯಿಸುತ್ತದೆ. ಕನ್ನಡವನ್ನು ಕಳೆದುಕೊಂಡಾಗ ನಮ್ಮ ಸ್ವಂತಿಕೆಯೂ ನಶಿಸಿಹೋಗುವುದು ಅನಿವಾರ್ಯವಾಗುತ್ತದೆ. ಹೀಗೆ ಭಾಷೆಯನ್ನು ಕಳೆದುಕೊಳ್ಳುವ  ಪರಿಸ್ಥಿತಿ ಏಕೆ ಬರುತ್ತದೆ? ಇದನ್ನು ಅರಿತುಕೊಳ್ಳಲು, ಮಾನವನ ಅವಶ್ಯಕತೆಯನ್ನು ಪೂರೈಸುವ ಸಾಧನವಾಗಿ ಭಾಷೆಯೊಂದು ಉದಯವಾಗಿ ಬೆಳೆದು ಪ್ರಾದೇಶಿಕತೆ ಮತ್ತು ಬಾಂಧವ್ಯವನ್ನು ಬೆಸೆಯುವ ಪ್ರಕ್ರಿಯೆಯನ್ನು ಮೊದಲು ತಿಳಿಯಬೇಕು. (ಮುಂದುವರಿಯುವುದು)
-ಸುದರ್ಶನ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.