ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆಯುವುದು ಫಿಕ್ಸ್ ಆದ್ಮೇಲೆ ಪಾದಯಾತ್ರೆ; ತಾಕತ್ತಿದ್ದರೆ KPSC ಹಗರಣ ವಿರುದ್ಧ ಹೋರಾಡಲಿ: ಯತ್ನಾಳ್
ಪಾದಯಾತ್ರೆ ಯಾರಿಗೆ ಮೈನಸ್ ಆಗುತ್ತೋ, ಪ್ಲಸ್ ಆಗುತ್ತೋ ಬಿಡುತ್ತೆ ಗೊತ್ತಿಲ್ಲ. ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆಯುತ್ತಾರೆ ಎಂಬ ಭಯ ಬಂದಿದೆ. ಹೀಗಾಗಿ ಪಾದಯಾತ್ರೆಯಿಂದ ತಾವು ಹೀರೋ ಆಗಬೇಕು ಎಂದು ಇದೆಲ್ಲ ಮಾಡ್ತಿದ್ದಾರೆ.

ಬೆಂಗಳೂರು: ಬಿವೈ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆಯುವುದು ಫಿಕ್ಸ್ ಆದ ಮೇಲೆ ಪಾದಯಾತ್ರೆ ಆರಂಭವಾಗಿದೆ ಆಗಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ ಅಶೋಕ್, ಸುನೀಲ್ ಕುಮಾರ್ ಎಲ್ಲರೂ ಸದನದ ಬಾವಿಗೆ ಇಳಿದು ಹೋರಾಟ ಮಾಡಿದ್ದರು. ಆಗ ವಿಜಯೇಂದ್ರ 5 ನಿಮಿಷ ಬಾವಿಯಲ್ಲಿ ನಿಲ್ಲಲ್ಲಿಲ್ಲ. ಬರಿ ಪುಕ್ಸಟ್ಟೆ ಒಂದು ಪಾದಯಾತ್ರೆ ಮಾಡಿದ್ರೆ ಕ್ರೆಡಿಟ್ ಬರುತ್ತಾ? ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆಯುವುದು ಗ್ಯಾರಂಟಿ ಆದ ಮೇಲೆ ಪಾದಾಯತ್ರೆ ಗ್ಯಾರಂಟಿ ಆಗಿದೆ. ವಾರಂಟಿ ಮುಗಿದಿದೆ ಹೀಗಾಗಿ ತಮ್ಮ ಅಸ್ತಿತ್ವ ತೋರಿಸಲು, ಹೊರಟಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಪಾದಯಾತ್ರೆ ಯಾರಿಗೆ ಮೈನಸ್ ಆಗುತ್ತೋ, ಪ್ಲಸ್ ಆಗುತ್ತೋ ಬಿಡುತ್ತೆ ಗೊತ್ತಿಲ್ಲ. ರಾಜ್ಯಾಧ್ಯಕ್ಷ ಸ್ಥಾನದಿಂದ ತೆಗೆಯುತ್ತಾರೆ ಎಂಬ ಭಯ ಬಂದಿದೆ. ಹೀಗಾಗಿ ಪಾದಯಾತ್ರೆಯಿಂದ ತಾವು ಹೀರೋ ಆಗಬೇಕು ಎಂದು ಇದೆಲ್ಲ ಮಾಡ್ತಿದ್ದಾರೆ. ಹೋರಾಟ, ಪಾದಯಾತ್ರೆ ಮಾಡುವುದಾದರೆ ಕೆಪಿಎಸ್ಸಿ ಹಗರಣ ಹೋರಾಟ ಮಾಡಲಿ ಎಂದು ತಿಳಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗು ಸಿಎಂ ಡಿ.ಕೆ.ಶಿವಕುಮಾರ್ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಮಾಡಿದರು. ಸದನದಲ್ಲಿ ಬಿಡದಿ ಯೋಜನೆ, ಕೆಪಿಎಸ್ ಸಿ ಹಗರಣ ಹಾಗು ನೈಸ್ ಯೋಜನೆ ಬಗ್ಗೆ ಮಾತನಾಡಿ ಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಬಹುದಿತ್ತು ಎಂದು ಹೇಳಿದರು.
ಆದರೆ ಸದನದಲ್ಲಿ ನಾಗೇಂದ್ರ ವಿಚಾರ ಪ್ರಸ್ತಾಪಿಸಿ ಧರಣಿ ನಡೆಸಲಾಯಿತು, ವಿಜಯೇಂದ್ರ ಮತ್ತು ಡಿ.ಕೆ.ಶಿವಕುಮಾರ್ ಅಡ್ಡೆಸ್ಟ್ ಮೆಂಟ್ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕೆಪಿಎಸ್ಸಿ ಹಗರಣದ ವಿರುದ್ಧ ಮಾತನಾಡಲು ಧೈರ್ಯವಿದ್ದರೆ ಪಾದಯಾತ್ರೆ ಮಾಡಲಿ ಎಂದು ಸವಾಲು ಹಾಕಿದ್ದಾರೆ. ಈ ಹಗರಣವು ರಾಜ್ಯದ ಲಕ್ಷಾಂತರ ನಿರುದ್ಯೋಗಿ ಯುವಕರ ಭವಿಷ್ಯಕ್ಕೆ ಧಕ್ಕೆ ತಂದಿದೆ ಎಂದು ಅವರು ಹೇಳಿದ್ದಾರೆ.
ಸಾವಿರಾರು ನಿರುದ್ಯೋಗಿ ಯುವಕರ ಮೇಲೆ ಪರಿಣಾಮ ಬೀರುವ ಹಗರಣದ ಹೊರತಾಗಿಯೂ, ಅಮುಖ್ಯ ವಿಷಯಗಳ ಕುರಿತು ಪಾದಯಾತ್ರೆ ನಡೆಸುತ್ತಿರುವ ವಿಜಯೇಂದ್ರ ಅವರ ಕೆಪಿಎಸ್ಸಿ ಅಕ್ರಮಗಳ ಬಗ್ಗೆ ಅವರ ಮೌನವನ್ನು ಪ್ರಶ್ನಿಸಿದರು.
"ಕೆಪಿಎಸ್ಸಿಯ ಅಮಾನತುಗೊಂಡ ಅಧ್ಯಕ್ಷ ಶಿವಶಂಕರಪ್ಪ ಸಾಹುಕರ್ ನಿಮಗೆ (ವಿಜಯೇಂದ್ರ) ಎಷ್ಟು ಶೇಕಡಾ (ಕಮಿಷನ್ ಮೊತ್ತ) ಪಾವತಿಸಿದ್ದಾರೆಂದು ನನಗೆ ತಿಳಿದಿದೆ. ವಿಜಯೇಂದ್ರ ಶೇ. 75 ರಷ್ಟು ಮತ್ತು ಸಾಹುಕರ್ ಶೇ. 25 ರಷ್ಟು ಪಡೆಯುತ್ತಾರೆ" ಎಂದು ಯತ್ನಾಳ್ ಆರೋಪಿಸಿದ್ದಾರೆ. ವಿಜಯೇಂದ್ರ ಅವರು ಪಾದಯಾತ್ರೆ ಮೂಲಕ ಕೆಪಿಎಸ್ಸಿ ಸಮಸ್ಯೆಯನ್ನು ಕೈಗೆತ್ತಿಕೊಳ್ಳುವ ಮೂಲಕ ತಮ್ಮ ಬದ್ಧತೆಯನ್ನು ಸಾಬೀತುಪಡಿಸಲಿ ಎಂದು ಸವಾಲು ಹಾಕಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



