RSSನವ್ರು ಪಾಕಿಸ್ತಾನದ ಏಜೆಂಟ್ಗಳು, ಮೊದಲು ಸಂಘದ ಫಂಡಿಂಗ್ ಬಗ್ಗೆ ಆಡಿಟ್ ಮಾಡಿ: ಪ್ರಿಯಾಂಕ್ ಖರ್ಗೆ ಆಗ್ರಹ
ಆರ್ಎಸ್ಎಸ್ ಮತ್ತು ಅದರ 2,500 ಕ್ಕೂ ಹೆಚ್ಚು ಅಂಗಸಂಸ್ಥೆಗಳ "ಸಾರ್ವಜನಿಕ ಲೆಕ್ಕಪರಿಶೋಧನೆ" ನಡೆಸಬೇಕೆಂದು ಒತ್ತಾಯಿಸಿದ್ದಾರೆ.

ನವದೆಹಲಿ: ಬಿಜೆಪಿ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯವರ ವಿದೇಶ ಪ್ರಯಾಣ ವೆಚ್ಚವನ್ನು ಪ್ರಶ್ನಿಸಿದ ನಂತರ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೇಸರಿ ಪಕ್ಷವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ಮೊದಲು ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್ಎಸ್ಎಸ್) ಫಂಡಿಂಗ್ ಬಗ್ಗೆ ಆಡಿಟ್ ಮಾಡಿಸಬೇಕು ಎಂದು ಆಗ್ರಹಿಸಿದ್ದಾರೆ.
ಆರ್ ಎಸ್ಎಸ್ ಮುಖಂಡರ ದಿನನಿತ್ಯದ ದೇಶೀಯ ಹಾಗೂ ಅಂತರರಾಷ್ಟ್ರೀಯ ಪ್ರಯಾಣದ ಹಣಕಾಸಿನ ಮೂಲ ಯಾವುದು ಎಂದು ಬಹಿರಂಗಪಡಿಸಬೇಕು. ಆರ್ಎಸ್ಎಸ್ ಮತ್ತು ಅದರ 2,500 ಕ್ಕೂ ಹೆಚ್ಚು ಅಂಗಸಂಸ್ಥೆಗಳ "ಸಾರ್ವಜನಿಕ ಲೆಕ್ಕಪರಿಶೋಧನೆ" ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿದ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ರಾಜಕೀಯ ಪ್ರವೇಶಿಸುವ ಮೊದಲು ಅವರ ಸ್ವಂತ ಪ್ರಯಾಣದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.
IT, ED ರಾಹುಲ್ ಗಾಂಧಿ ಮೇಲೆ ಬಿಟ್ಟಿದ್ದೀರಾ. ಮಾಹಿತಿ ತಗೊಳ್ಳಿ. ರಾಹುಲ್ ಗಾಂಧಿ ಕಾನೂನು ಉಲ್ಲಂಘನೆ ಮಾಡಿದ್ರೆ ಯಾಕೆ ಬಿಟ್ಟಿದ್ದೀರಾ? ಒಳಗೆ ಹಾಕಿಬಿಡಿ. 13 ವರ್ಷದಿಂದ ಅದೇ ಹಾಡು, ಅದೇ ಟೋಪಿ ಹಾಕ್ತೀರಾ. ರಾಹುಲ್ ಗಾಂಧಿ, ನೆಹರೂ ಕುಟುಂಬ ದೇಶದ್ರೋಹಿ ಅಂತೀರಾ ಸಾಬೀತು ಮಾಡಿ. ನೀವು ಆಗ ಎಲ್ಲೆಲ್ಲಿ ಹೋಗಿದ್ರಿ ಮಾಹಿತಿ ಕೊಡಿ. RSS ಅವರದ್ದು IT ಇದೆಯಾ? ID ಇದೆಯಾ? ಅವರು ರಿಜಿಸ್ಟರ್ ಆಗೇ ಇಲ್ಲ. RSS ಅವರಷ್ಟು ದೊಡ್ಡ ದೇಶದ್ರೋಹಿಗಳು ಮತ್ತೊಬ್ಬರಿಲ್ಲ ಎಂದು ಆರೋಪಿಸಿದರು.
ಇದಲ್ಲದೆ, "ವಿಶ್ವದ ಅತಿದೊಡ್ಡ ನೋಂದಾಯಿಸದ ಸಂಘಟನೆಯಾಗಿರುವ ಆರ್ ಎಸ್ಎಸ್, ಬೃಹತ್ ಆರ್ಥಿಕ, ರಾಜಕೀಯ ಮತ್ತು ಆಡಳಿತಾತ್ಮಕ ಪ್ರಭಾವವನ್ನು ಹೊಂದಿದೆ". ಆರ್ಎಸ್ಎಸ್, ಐದು ಪ್ರಮುಖ ಕಚೇರಿ ಸಂಕೀರ್ಣಗಳಿಗೆ ಹೇಗೆ ಹಣಕಾಸು ಒದಗಿಸುತ್ತದೆ ಮತ್ತು ಅದರ ಜಾಗತಿಕ ಸಂಪರ್ಕ ಮತ್ತು ವಿದೇಶಿ ಲಾಬಿಗೆ ಹೇಗೆ ಹಣ ನೀಡುತ್ತದೆ ಎಂದು ಕಾಂಗ್ರೆಸ್ ನಾಯಕ ಪ್ರಶ್ನಿಸಿದ್ದಾರೆ.
RSS ನವ್ರು ಪಾಕಿಸ್ತಾನದ ಏಜೆಂಟ್ಗಳು
ಇನ್ನು ಪಾಕಿಸ್ತಾನದ ಜೊತೆಗಿನ ಮಾತುಕತೆಯ ಎಲ್ಲಾ ಬಾಗಿಲುಗಳನ್ನ ಮುಚ್ಚಬಾರದು ಎಂಬ ಹೊಸಬಾಳೆ ಹೇಳಿಕೆಗೆ ಪ್ರತಿಕ್ರಿಯಿಸಿದ ಖರ್ಗೆ, RSS ಅವರು ಪಾಕಿಸ್ತಾನದ ಏಜೆಂಟ್ಗಳು. ಎರಡು ನೇಷನ್ ಥಿಯರಿ. ಭಾರತ- ಪಾಕಿಸ್ತಾನ ವಿಭಾಗ ಆಗಬೇಕು ಅಂತ ಮೊದಲು ಪ್ರಸ್ತಾಪ ಮಾಡಿದ್ದೇ RSSನ ವಿ.ಡಿ.ಸಾವರ್ಕರ್. ಇತಿಹಾಸ ಮೊದಲು ಬಿಜೆಪಿ ಸರಿಯಾಗಿ ಓದಲಿ. ನಮ್ಮ ಯಾವ ಚಾಲೆಂಜ್ ಬಿಜೆಪಿ ಸ್ವೀಕಾರ ಮಾಡಿಲ್ಲ. ಸಾವರ್ಕರ್ ಬ್ರಿಟಿಷರ ಏಜೆಂಟ್. 60 ರೂಪಾಯಿ ಪೆನ್ಶನ್ ತಗೋತಾ ಇದ್ದರು. RSS ನವರೆಲ್ಲ ಪಾಕಿಸ್ತಾನ ಏಜೆಂಟ್ಗಳೇ ಎಂದು ಕಿಡಿಕಾರಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



