ರಾಜಕೀಯ

ವಿಜಯ್ ಸಾಧನೆ ಅಚ್ಚರಿ ತಂದಿದೆ, ಆದ್ರೆ ಗ್ಯಾರಂಟಿಗಳಿಗೆ 6-7 ಲಕ್ಷ ಕೋಟಿ ರೂ ಬೇಕು, ಹಣ ಹೇಗೆ ಹೊಂದಿಸ್ತಾರೆ? ದೇವರೇ ಕಾಪಾಡಬೇಕು: HDK

ಇಂದು ಹೊಳೆನರಸೀಪುರ ತಾಲೂಕಿನ ಮಾವಿನಕೆರೆಯ ರಂಗನಾಥಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ತಮಿಳುನಾಡಿನಲ್ಲಿ ವಿಜಯ್ ಸಾಧನೆ ಎಲ್ಲರಿಗೂ ಅಚ್ಚರಿ ತಂದಿದೆ ಎಂದರು.

ವಿಜಯ್ ಸಾಧನೆ ಅಚ್ಚರಿ ತಂದಿದೆ, ಆದ್ರೆ ಗ್ಯಾರಂಟಿಗಳಿಗೆ 6-7 ಲಕ್ಷ ಕೋಟಿ ರೂ ಬೇಕು, ಹಣ ಹೇಗೆ ಹೊಂದಿಸ್ತಾರೆ? ದೇವರೇ ಕಾಪಾಡಬೇಕು: HDK
ಎಚ್ ಡಿ ಕುಮಾರಸ್ವಾಮಿ
Published On :

ಹಾಸನ: ತಮಿಳುನಾಡಿನಲ್ಲಿ ನಟ ವಿಜಯ್ ಅವರ ಟಿವಿಕೆ ಪಕ್ಷದ ಸಾಧನೆ ಎಲ್ಲರಿಗೂ ಅಚ್ಚರಿ ತಂದಿದೆ. ಆದರೆ ಅವರ ಗ್ಯಾರಂಟಿಗಳಿಗೆ 6-7 ಲಕ್ಷ ಕೋಟಿ ಬೇಕು. ಆ ಹಣವನ್ನು ಹೇಗೆ ಹೊಂದಿಸ್ತಾರೆ? ದೇವರೇ ಕಾಪಾಡಬೇಕು ಎಂದು ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಅವರು ಶುಕ್ರವಾರ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಇಂದು ಹೊಳೆನರಸೀಪುರ ತಾಲೂಕಿನ ಮಾವಿನಕೆರೆಯ ರಂಗನಾಥಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ತಮಿಳುನಾಡಿನಲ್ಲಿ ವಿಜಯ್ ಸಾಧನೆ ಎಲ್ಲರಿಗೂ ಅಚ್ಚರಿ ತಂದಿದೆ ಎಂದರು.

ತಮಿಳುನಾಡು ಬಜೆಟ್ ಗಾತ್ರ ವರ್ಷ 3.40 ಲಕ್ಷ ಕೋಟಿ ಇದೆ. ಆದರೆ, ವಿಜಯ್‌ ಘೋಷಿಸಿದ ಉಚಿತ ಗ್ಯಾರಂಟಿಗಳನ್ನು ನೀಡಲು 6 ರಿಂದ 7 ಲಕ್ಷ ಕೋಟಿ ಬೇಕು. ಅದ್ಯಾವ ರೀತಿ ಹಣ ಹೊಂದಿಸುತ್ತಾರೆ ಕಾದು ನೋಡಬೇಕು ಎಂದು ಎಂದರು.

ಒಂದು ತಿಂಗಳ ಹಿಂದೆ ನಮ್ಮ ಸ್ನೇಹಿತರಿಗೆ ಹೇಳಿದ್ದೆ. ಕಳೆದ 50 ವರ್ಷಗಳಿಂದ ಎರಡು ದ್ರಾವಿಡ ಪಕ್ಷಗಳ ಆಡಳಿತ ಏನೆಂದು ಅಲ್ಲಿಯ ಜನ ನೋಡಿದ್ದಾರೆ. ಒಂದು ಹೊಸ ವ್ಯವಸ್ಥೆ ತರಲು ಜನಸಾಮಾನ್ಯರು ನಿರ್ಧಾರ ಮಾಡ್ತಾರೆ ಎಂಬ ನನ್ನ ನಿರೀಕ್ಷೆ ನಿಜವಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು.

ತಮಿಳುನಾಡು ರಾಜಕಾರಣದ ಬಗ್ಗೆ ಮೊದಲಿನಿಂದಲೂ ಎಲ್ಲರಿಗೂ ಗೊತ್ತಿದೆ. ಅಲ್ಲಿನ ಜನ ಸ್ವಲ್ಪ ಸಿನಿಮಾ ಪ್ರಭಾವಕ್ಕೆ ಒಳಗಾಗುತ್ತಾರೆ. ಹೀಗಾಗಿ ಹೊಸ ವ್ಯಕ್ತಿಗೆ ಅಧಿಕಾರ ನೀಡಲು ಜನ ಬಯಸಿದ್ದಾರೆ. ಮಾಧ್ಯಮಗಳು ಡಿಎಂಕೆ ಅಧಿಕಾರಕ್ಕೆ ಬರುತ್ತದೆ ಎಂದು ಭವಿಷ್ಯ ನುಡಿದಿದ್ದವು, ಆದರೆ ವಿಜಯ್ ಅವರ ಈ ಸಾಧನೆಯನ್ನು ಯಾರೂ ನಿರೀಕ್ಷಿಸಿರಲಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಇನ್ನು ಟಿವಿಕೆಗೆ ಕಾಂಗ್ರೆಸ್ ಬೆಂಬಲ ನೀಡುತ್ತಿರುವ ಕುರಿತು ಪ್ರತಿಕ್ರಿಯಿಸಿದ ಮಾಜಿ ಸಿಎಂ, ಕಾಂಗ್ರೆಸ್ ಪಕ್ಷದ ನಡವಳಿಕೆ ಬಗ್ಗೆ ನಾನು ಟೀಕೆ ಮಾಡ್ಬೇಕಾ? ನಾನು ಚರ್ಚೆ ಮಾಡುವುದು ಅನವಶ್ಯಕ. ಕಾಂಗ್ರೆಸ್ ಪಕ್ಷ ಯಾವ್ಯಾವ ಸಂದರ್ಭದಲ್ಲಿ, ಯಾವ್ಯಾವ ರೀತಿ ಸರ್ಕಾರಗಳನ್ನ ಅಸ್ಥಿರಗೊಳಿಸಿದ್ದಾರೆ ಎಂಬುವುದು ತಿಳಿದಿದೆ. ಕೇಂದ್ರದಲ್ಲಿದ್ದಂತಹ ಚರಣ್ ಸಿಂಗ್ ಅವರಿಂದ ಪ್ರಾರಂಭವಾಗಿ ವಿಪಿ ಸಿಂಗ್, ಚಂದ್ರಶೇಖರ್‌ವರೆಗೆ. ಅಷ್ಟೇ ಅಲ್ಲ ದೇವೇಗೌಡರು ಅಧಿಕಾರದಲ್ಲಿದ್ದಾಗ ಯಾವ ಕಾರಣಗಳನ್ನ ಕೊಟ್ಟು ಸರ್ಕಾರ ತೆಗೆದರು ಎಂಬುವುದು ಎಲ್ಲರಿಗೂ ಗೊತ್ತೇ ಇದೆ. ಇವತ್ತು ಡಿಎಂಕೆ ಜೊತೆ ಇಪ್ಪತ್ತು ವರ್ಷದ ಸಂಬಂಧ ಕಡಿದು ವಿಜಯ್ ಅವರ ಜೊತೆ ಸೇರಿದ್ದಾರೆ. ಅವರ ಪಕ್ಷದ ಮುಂದಿನ ಭವಿಷ್ಯದ ದೃಷ್ಟಿಯಿಂದ ತೀರ್ಮಾನ ತೆಗೆದುಕೊಂಡಿದ್ದಾರೆ. ಕಾಲ ಅದಕ್ಕೆ ಉತ್ತರ ಕೊಡುತ್ತೆ ಎಂದು ಕಿಡಿಕಾರಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.