ರಾಜಕೀಯ

'ಕುದುರೆ ವ್ಯಾಪಾರ' ಮಾಡುವ ಡಿಕೆಶಿ ಚಾಣಕ್ಯನಾಗಲು ಹೇಗೆ ಸಾಧ್ಯ? ನಾವು 17 ಶಾಸಕರನ್ನು ಕರೆದುಕೊಂಡು ಹೋದಾಗ ಚಾಣಾಕ್ಷ ಎಲ್ಲಿದ್ದ?

2019ರಲ್ಲಿ ಕಾಂಗ್ರೆಸ್ ‌ಶಾಸಕರು ಮುಂಬೈಗೆ ಹೋದಾಗ ಇದೇ ಕಾಂಗ್ರೆಸ್ ನಾಯಕರು ಕುದುರೆ ವ್ಯಾಪಾರ ಅಂದಿದ್ದರು. ನಮ್ಮ ಜೊತೆಗೆ ಕಾಂಗ್ರೆಸ್ ಶಾಸಕರು ಬಂದಾಗ ಆಪರೇಷನ್ ಕಮಲ ಅಂತಾ ಹೇಳಿದ್ದೀರಿ. ಆಗ ನಮಗೆ ಬುದ್ಧಿ ಹೇಳ್ತಿರಾ?

'ಕುದುರೆ ವ್ಯಾಪಾರ' ಮಾಡುವ ಡಿಕೆಶಿ ಚಾಣಕ್ಯನಾಗಲು ಹೇಗೆ ಸಾಧ್ಯ? ನಾವು 17 ಶಾಸಕರನ್ನು ಕರೆದುಕೊಂಡು ಹೋದಾಗ ಚಾಣಾಕ್ಷ ಎಲ್ಲಿದ್ದ?
ವಿಪಕ್ಷ ನಾಯಕ ಆರ್. ಅಶೋಕ್
Published On :

ಬೆಳಗಾವಿ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚಾಣಕ್ಯ ಅಲ್ಲ. ಚಾಣಕ್ಯ ಎಂದೂ ಕುದುರೆ ವ್ಯಾಪಾರ ಮಾಡಿಲ್ಲ. ಈಗ ಕುದುರೆ ವ್ಯಾಪಾರ ಮಾಡುತ್ತಿರುವ ಕಾಂಗ್ರೆಸ್‌, ಇದಕ್ಕೆ ತಕ್ಕ ಪಾಠ ಕಲಿಯುತ್ತದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಲೇವಡಿ ಮಾಡಿದರು.

ಬೆಳಗಾವಿಯಲ್ಲಿ ಮಾತನಾಡಿದ ಅವರು, ಪರಿಷತ್ ಚುನಾವಣೆ ಬಳಿಕ ಸಿಎಂ ಡಿಕೆಶಿ ತಂತ್ರ ‌ಚಾಣಕ್ಯ ತಂತ್ರ ಎಂದು ಬಣ್ಣಿಸುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಡಿಕೆಶಿ ಚಾಣಾಕ್ಷ ಯಾವೂರಿಗೆ..? ನಾವು 17 ಜನ ಶಾಸಕರನ್ನು ಕರೆದುಕೊಂಡು ಹೋದಾಗ ಈ ಚಾಣಕ್ಯ ಎಲ್ಲಿದ್ದ..? ಡಿಕೆಶಿ ‌ಆಗ ಮಂತ್ರಿ ಇದ್ದರು, ಆಗ ನಮ್ಮ ಜೊತೆಗೆ ಅವರ ಶಾಸಕರು ಬಂದಿದ್ದರು ಎಂದು ತಿರುಗೇಟು ನೀಡಿದರು.

2019ರಲ್ಲಿ ಕಾಂಗ್ರೆಸ್ ‌ಶಾಸಕರು ಮುಂಬೈಗೆ ಹೋದಾಗ ಇದೇ ಕಾಂಗ್ರೆಸ್ ನಾಯಕರು ಕುದುರೆ ವ್ಯಾಪಾರ ಅಂದಿದ್ದರು. ನಮ್ಮ ಜೊತೆಗೆ ಕಾಂಗ್ರೆಸ್ ಶಾಸಕರು ಬಂದಾಗ ಆಪರೇಷನ್ ಕಮಲ ಅಂತಾ ಹೇಳಿದ್ದೀರಿ. ಆಗ ನಮಗೆ ಬುದ್ಧಿ ಹೇಳ್ತಿರಾ? ಈಗ ನೀವು ಮಾಡಿದ್ದೇನು, ನಾಚಿಕೆ ಆಗಲ್ಲವಾ..? ಕಾಂಗ್ರೆಸ್‌ಗೆ ಇದು ತಿರುಗುಬಾಣ ಆಗುತ್ತದೆ. ನಾವೇ ಉತ್ತರ ಕೊಡುತ್ತೇವೆ ಎಂದು ಆರ್.ಅಶೋಕ ಸವಾಲು ಹಾಕಿದರು.

ಪರಿಷತ್ ಚುನಾವಣೆಯಲ್ಲಿ ಪಕ್ಷಕ್ಕೆ ದ್ರೋಹ, ವಂಚನೆ ಬಗೆದಿರುವುದು ನಿಜ. ಯಾವ ಶಾಸಕ ದ್ರೋಹ ಮಾಡಿದ್ದಾರೆ ಗೊತ್ತಿಲ್ಲ. ಆ ಕಾರಣಕ್ಕೆ ಅಧ್ಯಕ್ಷರ ಜೊತೆಗೆ ಮಾತನಾಡುತ್ತೇವೆ. ಈ ವಿಚಾರವಾಗಿ ಚರ್ಚಿಸಲು ನಮ್ಮ ಹೈಕಮಾಂಡ್ ನಾಯಕರ ಭೇಟಿಗೆ ಸಮಯ ಕೇಳಿದ್ದೇವೆ. ಚುನಾವಣೆಯಲ್ಲಿ ಕಾಂಗ್ರೆಸ್ ಕುದುರೆ ವ್ಯಾಪಾರ, ಹಣದ ಹೊಳೆ ಹರಿಸಿರುವುದನ್ನು ತಿಳಿಸುತ್ತೇವೆ. ಪರಿಷತ್ ‌ಚುನಾವಣೆಯಲ್ಲಿ ಈ ರೀತಿ ಮಾಡಿರುವುದು ಕಾಂಗ್ರೆಸ್‌ಗೆ ಒಳ್ಳೆಯದಲ್ಲ ಎಂದು ಆರ್.ಅಶೋಕ ಹರಿಹಾಯ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.