ರಾಜಕೀಯ

ಸಿಎಂ ಹುದ್ದೆಯಿಂದ ಸಿದ್ದರಾಮಯ್ಯ ನಿರ್ಗಮನ: ಪುತ್ರ ಯತೀಂದ್ರಗೆ ಸಚಿವ ಸಂಪುಟದಲ್ಲಿ ಸ್ಥಾನ!

ಸಚಿವರ ಅಧಿಕೃತ ಪಟ್ಟಿ ಇನ್ನೂ ಬಿಡುಗಡೆಯಾಗದಿದ್ದರೂ, ಮೊದಲ ಹಂತದಲ್ಲಿ ಯತೀಂದ್ರ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಮೂಲಕ ಮೈಸೂರು ಜಿಲ್ಲೆ ಸಂಪುಟದಲ್ಲಿ ಮಹತ್ವದ ಸ್ಥಾನ ಉಳಿಸಿಕೊಳ್ಳಲಿದೆ ಎಂದು ಬಲ್ಲ ಮೂಲಗಳು ದೃಢಪಡಿಸಿವೆ.

ಸಿಎಂ ಹುದ್ದೆಯಿಂದ ಸಿದ್ದರಾಮಯ್ಯ ನಿರ್ಗಮನ: ಪುತ್ರ ಯತೀಂದ್ರಗೆ ಸಚಿವ ಸಂಪುಟದಲ್ಲಿ ಸ್ಥಾನ!
ಯತೀಂದ್ರ ಸಿದ್ದರಾಮಯ್ಯ
Published On :

ಮಂಡ್ಯ: ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಹೊಸ ಸಚಿವ ಸಂಪುಟ ರಚನೆಯಾಗಲಿದ್ದು, ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಅವರ ಹೆಸರನ್ನು ಕಾಂಗ್ರೆಸ್ ಹೈಕಮಾಂಡ್ ಅನುಮೋದಿಸಿದೆ.

ಸಚಿವರ ಅಧಿಕೃತ ಪಟ್ಟಿ ಇನ್ನೂ ಬಿಡುಗಡೆಯಾಗದಿದ್ದರೂ, ಮೊದಲ ಹಂತದಲ್ಲಿ ಯತೀಂದ್ರ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಮೂಲಕ ಮೈಸೂರು ಜಿಲ್ಲೆ ಸಂಪುಟದಲ್ಲಿ ಮಹತ್ವದ ಸ್ಥಾನ ಉಳಿಸಿಕೊಳ್ಳಲಿದೆ ಎಂದು ಬಲ್ಲ ಮೂಲಗಳು ದೃಢಪಡಿಸಿವೆ.

ತಂದೆ ಸಿದ್ದರಾಮಯ್ಯ ಅವರು ಸಿಎಂ ಆಗಿ ನಿರ್ಗಮಿಸಿದ ನಂತರ ಯತೀಂದ್ರ ಅವರು ಸರ್ಕಾರದಲ್ಲಿ ಮೈಸೂರಿನ ಪ್ರಮುಖ ರಾಜಕೀಯ ಮುಖವಾಗಲು ಸಜ್ಜಾಗಿರುವುದರಿಂದ ಈ ಸೇರ್ಪಡೆ ಮಹತ್ವ ಪಡೆದುಕೊಂಡಿದೆ. ರೋಗಶಾಸ್ತ್ರಜ್ಞರಾಗಿರುವ ಯತೀಂದ್ರ ಅವರು ಎಂಬಿಬಿಎಸ್ ಪೂರ್ಣಗೊಳಿಸಿ ನಂತರ ಎಂಡಿ ಪದವಿ ಪಡೆದು ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಿದರು.

2018 ಮತ್ತು 2023 ರ ನಡುವೆ ವರುಣ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದರು ಮತ್ತು ನಂತರ ಪರಿಷತ್ತಿಗೆ ಆಯ್ಕೆಯಾದರು.ತಮ್ಮ ತಂದೆಯ ವರುಣ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡರು.

ಸಂಘಟನಾತ್ಮಕ ವ್ಯವಹಾರಗಳಲ್ಲಿ ಸಕ್ರಿಯವಾಗಿರುವ ಯತೀಂದ್ರ ಸರಳ ಸಜ್ಜನಿಕಗೆ ಹೆಸರುವಾಸಿಯಾಗಿದ್ದಾರೆ. ಹೀಗಾಗಿ ಅವರಿಗೆ ಒಂದು ಪ್ರಮುಖ ಖಾತೆಯನ್ನು ವಹಿಸುವ ನಿರೀಕ್ಷೆಯಿದೆ.

ಯತೀಂದ್ರ ಅವರು ಸಂಪುಟಕ್ಕೆ ಬಡ್ತಿ ಪಡೆಯುವುದರಿಂದ ಸರ್ಕಾರದಲ್ಲಿ ಸಿದ್ದರಾಮಯ್ಯ ಅವರ ಪ್ರಭಾವ ಮುಂದುವರಿಯುವುದು ಮಾತ್ರವಲ್ಲದೆ, ಯುವ ಪೀಳಿಗೆಯ ನಾಯಕರನ್ನು ಉತ್ತೇಜಿಸುವ ಮತ್ತು ಮೈಸೂರು ಪ್ರದೇಶದ ಪ್ರಮುಖ ಧ್ವನಿ ಮತ್ತು ಪ್ರಾತಿನಿಧ್ಯವಾಗಬೇಕೆಂಬ ಕಾಂಗ್ರೆಸ್ ನಾಯಕತ್ವದ ಉದ್ದೇಶವೂ ಸ್ಪಷ್ಟವಾಗುತ್ತದೆ ಎಂದು ಮೈಸೂರಿನ ರಾಜಕೀಯ ನಾಯಕರು ನಂಬುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.