ಅಂದು ಮೇಕೆದಾಟು 'ಪಾದಯಾತ್ರೆ'ಯ ಬೀದಿ ನಾಟಕ, ಇಂದು 'ಮೌನವ್ರತ'? ತಾಕತ್ತಿದ್ದರೆ ತಮಿಳುನಾಡು ಕಾಂಗ್ರೆಸ್ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಮಾಡಿ!
ನಿಮಗೆ ತಾಕತ್ತಿದ್ದರೆ, ಧಮ್ಮಿದ್ದರೆ, ಕನ್ನಡಿಗರ ಮೇಲೆ ನಿಜವಾದ ಕಾಳಜಿಯಿದ್ದರೆ, ಈಗ ಚೆನ್ನೈಗೆ ಪಾದಯಾತ್ರೆ ಮಾಡಿ ಅಲ್ಲಿನ ತಮಿಳುನಾಡು ಕಾಂಗ್ರೆಸ್ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಕೂತು ನಿಮ್ಮ ರಾಜಕೀಯ ಬದ್ಧತೆಯನ್ನು ಸಾಬೀತುಪಡಿಸಿ!

ಬೆಂಗಳೂರು: ಮೇಕೆದಾಟು ಯೋಜನೆಗೆ ಅವಕಾಶ ಕೊಡಲ್ಲ ಎಂಬ ತಮಿಳುನಾಡು ಕಾಂಗ್ರೆಸ್ ಹೇಳಿಕೆ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಆರ್.ಅಶೋಕ್ ಕಿಡಿಕಾರಿದ್ದಾರೆ. ನಿಮಗೆ ತಾಕತ್ತಿದ್ದರೆ, ಧಮ್ಮಿದ್ದರೆ ತಮಿಳುನಾಡಿಗೆ ಪಾದಯಾತ್ರೆ ಮಾಡಿ ಎಂದು ಸವಾಲು ಹಾಕಿದ್ದಾರೆ.
ರಾಜ್ಯ ಸರ್ಕರದ ವಿರುದ್ಧ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಅಶೋಕ್, ಅಂದು ಅಧಿಕಾರಕ್ಕಾಗಿ ಮೇಕೆದಾಟು ಪಾದಯಾತ್ರೆಯ ನಾಟಕವಾಡಿದ ಡಿ.ಕೆ.ಶಿವಕುಮಾರ್ ಈಗ ತಮಿಳುನಾಡು ಕಾಂಗ್ರೆಸ್ ಮುಂದೆ ಮೌನವ್ರತ ಮಾಡುತ್ತಿರುವುದೇಕೆ? ಸಿಎಂ ಡಿ.ಕೆ.ಶಿವಕುಮಾರ್ ಅವರೇ, ಚುನಾವಣೆಗೆ ಮುನ್ನ ಅಧಿಕಾರ ಹಿಡಿಯುವುದಕ್ಕಾಗಿ ಮೇಕೆದಾಟು ಪಾದಯಾತ್ರೆಯ ಬೀದಿನಾಟಕ ಮಾಡಿದ್ದರಲ್ಲ ಸ್ವಾಮಿ, ಈಗ ಏಕೆ ಮೌನಕ್ಕೆ ಶರಣಾಗಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.
ಚುನಾವಣೆಗೆ ಮುನ್ನ ಅಧಿಕಾರ ಹಿಡಿಯುವುದಕ್ಕಾಗಿ ಮೇಕೆದಾಟು ಪಾದಯಾತ್ರೆಯ ಬೀದಿನಾಟಕ ಮಾಡಿದ್ದರಲ್ಲ ಸ್ವಾಮಿ, ಈಗ ಏಕೆ ಮೌನಕ್ಕೆ ಶರಣಾಗಿದ್ದೀರಿ? ನಿಮ್ಮದೇ ಕಾಂಗ್ರೆಸ್ ಪಕ್ಷದ ತಮಿಳುನಾಡು ಘಟಕದ ಅಧ್ಯಕ್ಷರು "ಮೇಕೆದಾಟಿಗೆ ಒಂದು ಇಟ್ಟಿಗೆ ಹಾಕಲೂ ಬಿಡುವುದಿಲ್ಲ" ಎಂದು ಕರ್ನಾಟಕಕ್ಕೆ ಬಹಿರಂಗ ಸವಾಲು ಹಾಕಿದ್ದಾರೆ.
ನಿಮಗೆ ತಾಕತ್ತಿದ್ದರೆ, ಧಮ್ಮಿದ್ದರೆ, ಕನ್ನಡಿಗರ ಮೇಲೆ ನಿಜವಾದ ಕಾಳಜಿಯಿದ್ದರೆ, ಈಗ ಚೆನ್ನೈಗೆ ಪಾದಯಾತ್ರೆ ಮಾಡಿ ಅಲ್ಲಿನ ತಮಿಳುನಾಡು ಕಾಂಗ್ರೆಸ್ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಕೂತು ನಿಮ್ಮ ರಾಜಕೀಯ ಬದ್ಧತೆಯನ್ನು ಸಾಬೀತುಪಡಿಸಿ! ಅಂದು ವೋಟು ಗಿಟ್ಟಿಸಿಕೊಳ್ಳಲು ಪಾದಯಾತ್ರೆಯ ನಾಟಕವಾಡಿದ ನೀವು ಈಗ ತಮಿಳುನಾಡಿನ ಮೈತ್ರಿ ರಾಜಕಾರಣಕ್ಕೆ ಹೆದರಿ ತಲೆಮರೆಸಿಕೊಂಡಿದ್ದೀರಾ? ಎಂದು ಕಿಡಿ ಕಾರಿದ್ದಾರೆ.
ಕಾವೇರಿ ಕೊಳ್ಳದ ನಮ್ಮ ರೈತರ ಮತ್ತು ಬೆಂಗಳೂರಿನ ಕೋಟ್ಯಂತರ ಜನರ ಕುಡಿಯುವ ನೀರಿನ ಹಕ್ಕಿಗಿಂತ ನಿಮಗೆ ದೆಹಲಿ ಹೈಕಮಾಂಡ್ ಅಣತಿ ಮತ್ತು ತಮಿಳುನಾಡಿನ ಮೈತ್ರಿ ರಾಜಕಾರಣವೇ ಹೆಚ್ಚಾಯಿತೇ?
ಕನ್ನಡಿಗರ ರಕ್ತ ಹೀರುತ್ತಿರುವ ಈ ನಾಡದ್ರೋಹಿ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಮೇಕೆದಾಟು ಯೋಜನೆ ಜಾರಿಗೊಳಿಸುವ ಇಚ್ಛಾಶಕ್ತಿಯೇ ಇಲ್ಲ. ಅಂದು ಕೇವಲ ಚುನಾವಣಾ ಗಿಮಿಕ್ ಮಾಡಲು ಮೇಕೆದಾಟು ಹೆಸರನ್ನು ಬಳಸಿಕೊಂಡ ಇವರು, ಇಂದು ತಮಿಳುನಾಡು ಕಾಂಗ್ರೆಸ್‌ನ ಉದ್ಧಟತನದ ಹೇಳಿಕೆಗೆ ಕನಿಷ್ಠ ಖಂಡನೆ ವ್ಯಕ್ತಪಡಿಸಲೂ ಹೆದರುತ್ತಿರುವುದು ನಾಚಿಕೆಗೇಡು ಎಂದು ತಪರಾಕಿ ಹಾಕಿದ್ದಾರೆನಿಮ್ಮ ಈ ವಿಶ್ವಾಸಘಾತುಕ ರಾಜಕಾರಣಕ್ಕೆ ಮತ್ತು ಕನ್ನಡಿಗರಿಗೆ ಮಾಡಿದ ನಂಬಿಕೆ ದ್ರೋಹಕ್ಕೆ ರಾಜ್ಯದ ಜನತೆ ತಕ್ಕ ಪಾಠ ಕಲಿಸುವುದು ನಿಶ್ಚಿತ!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



