ಕುರ್ಚಿ ಬಿಟ್ಟುಕೊಡುವ ಜಾಯಮಾನ ಸಿದ್ದರಾಮಯ್ಯ ಅವರದ್ದಲ್ಲ; ಅಧಿಕಾರಕ್ಕಾಗಿ ಕುರುಬ ಸಮಾಜವನ್ನು ಎಳೆದು ತರೋದು ನ್ಯಾಯವಲ್ಲ: HDK
ಕುರುಬ ಸಮಾಜದವನು, ನನ್ನನ್ನ ಅಸೂಯೆಯಿಂದ ತೆಗೆಯೋಕೆ ಹೋಗ್ತಾ ಇದ್ದಾರೆ ಅಂತಾರೆ. ಉತ್ತಮ ಬಜೆಟ್ ಕೊಟ್ಟವನು ನಾನು ಅಂತಾರೆ. ಸಿದ್ದರಾಮಯ್ಯ ಬೆಳೆಯೋಕೆ ಕುರುಬ ಸಮಾಜ ಮಾತ್ರವಲ್ಲ ಎಲ್ಲಾ ಸಮುದಾಯ ಬೆಂಬಲ ಕೊಟ್ಟಿದೆ.

ಬೆಂಗಳೂರು: ಸಿದ್ದರಾಮಯ್ಯ ಕಾಂಗ್ರೆಸ್ ಅವರಿಗೆ ಸಂದೇಶ ಕೊಟ್ಟಿದ್ದಾರೋ? ಸಿಎಂ ಸ್ಥಾನ ತೆಗೆಯೋಕೆ ನಿಂತಿರೋರಿಗೆ ಸಂದೇಶ ಕೊಟ್ಡಿದ್ದಾರೋ ಗೊತ್ತಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಸಿದ್ದರಾಮಯ್ಯ ಸರಣಿ ಟ್ಟೀಟ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅವರು, ಇಂತಹ ಸಮಯದಲ್ಲಿ ಅವರು ಕುರುಬ ಸಮಾಜವನ್ನ ಎಳೆದಿರೋದು ಯಾವ ಮಟ್ಟಕ್ಕೆ ಅವರ ಹೃದಯದ ಭಾವನೆ ಇದೆ ಅಂತ ಗೊತ್ತಾಗುತ್ತದೆ. ಜಾತಿ ಹೆಸರು ಇಟ್ಟುಕೊಂಡು ಸಾಮಾಜಿಕ ನ್ಯಾಯ, ಜಾತ್ಯಾತೀತ ಅಂತ ಹೇಳ್ತಾರೆ ಎಂದು ಹೆಚ್ಡಿಕೆ ಕಿಡಿಕಾರಿದ್ದಾರೆ.
ಕುರುಬ ಸಮಾಜದವನು, ನನ್ನನ್ನ ಅಸೂಯೆಯಿಂದ ತೆಗೆಯೋಕೆ ಹೋಗ್ತಾ ಇದ್ದಾರೆ ಅಂತಾರೆ. ಉತ್ತಮ ಬಜೆಟ್ ಕೊಟ್ಟವನು ನಾನು ಅಂತಾರೆ. ಸಿದ್ದರಾಮಯ್ಯ ಬೆಳೆಯೋಕೆ ಕುರುಬ ಸಮಾಜ ಮಾತ್ರವಲ್ಲ ಎಲ್ಲಾ ಸಮುದಾಯ ಬೆಂಬಲ ಕೊಟ್ಟಿದೆ. ಇವತ್ತು ಜಾತಿ ಹೆಸರಿನ ಸಂಕುಚಿತ ಮನೋಭಾದಲ್ಲಿ ಸಾಮಾಜಿಕ ನ್ಯಾಯ ಜಾರಿಗೆ ತರೋದು, ಎಲ್ಲಾ ಸಮಾಜದ ಬಗ್ಗೆ ಚರ್ಚೆ ಮಾಡ್ತಾರೆ.
ಅಂಬೇಡ್ಕರ್, ಬಸವಣ್ಣ ಎಲ್ಲರ ಹೆಸರು ಹೇಳಿದ್ದಾರೆ. ಸಿದ್ದರಾಮಯ್ಯಗೆ ಈಗ ಜ್ಞಾನೋದಯವಾಗಿದೆ. ಅವರ ನಡವಳಿಕೆ ಅವರನ್ನ ಬೆಳೆಸಿದವರು ಊಹೆ ಮಾಡಿರಲಿಲ್ಲ ಎಂದಿದ್ದಾರೆ.
ಸಿದ್ದರಾಮಯ್ಯ ಕುರ್ಚಿ ಬಿಟ್ಟು ಕೊಡುವ ಜಾಯಮಾನದವರಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಸಿದ್ದರಾಮಯ್ಯ ಅಧಿಕಾರ ಬಿಟ್ಟು ಕೊಡೊಲ್ಲ. ಇದು ಅವರ ಜಾಯಮಾನದಲ್ಲಿ ಬಂದಿದೆ. ನನ್ನ ಪಕ್ಷದಲ್ಲೇ ಇದನ್ನ ನೋಡಿದ್ದೇನೆ ನಾನು. ರಾಜ್ಯದ ಜನತೆ ವಿಷಯ, ಅಹಿಂದ ಜನರಿಗಾಗಿ ಕೆಲಸ ಮಾಡೋಕೆ ಅವರು ಅಧಿಕಾರಕ್ಕೆ ಬಂದಿಲ್ಲ ಅವರು. ಅವರಿಗೆ ವಯಕ್ತಿಕ ಕುರ್ಚಿ ಮುಖ್ಯ. ಕುರ್ಚಿ ಹಿಡಿಯಲು ನಮ್ಮಲ್ಲಿ ಇದ್ದಾಗ ಕೆಲವು ಪಕ್ಷದ ವಿರೋಧಿ ಚಟುವಟಿಕೆ ಮಾಡಿದ್ರು. ಅವತ್ತು ಅದಕ್ಕೆ ನಾವು ನಿರ್ಧಾರ ಮಾಡಿದ್ವಿ. ಆಶ್ರಯ ಕೊಟ್ಟ ಪಕ್ಷವನ್ನೇ ಇವತ್ತು ಆವರಿಸಿಕೊಂಡಿದ್ದಾರೆ ಅಂತ ಹೇಳಿದ್ರು.
ಕಾಂಗ್ರೆಸ್ ಪಕ್ಷದ ಹಳಬರನ್ನ ಮೂಲೆಗುಂಪು ಮಾಡಿದ್ದಾರೆ. ನಾನು ಇದ್ದರೆ ಕಾಂಗ್ರೆಸ್, ನಾನು ಇಲ್ಲ ಅಂದರೆ ಕಾಂಗ್ರೆಸ್ ಇಲ್ಲ ಅಂತ ವಾತಾವರಣ ನಿರ್ಮಾಣ ಮಾಡ್ತಾ ಇದ್ದಾರೆ. ಈ ಮೂಲಕ ಸಿಎಂ ಸ್ಥಾನ ಬಿಡೋಕೆ ಆಗೊಲ್ಲ ಅಂತ ಹೊಸ ಅಸ್ತ್ರ ಪ್ರಯೋಗ ಮಾಡಿದ್ದಾರೆ. ಸಿದ್ದರಾಮಯ್ಯ ಕುರ್ಚಿ ಬಿಡೊಲ್ಲ ಅಂತ ಹೆಚ್ಡಿಕೆ ಪುನರುಚ್ಚರಿಸಿದ್ರು.
ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ರಚನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸಮನ್ವಯ ಸಮಿತಿ ಆಗಬೇಕು ಅಂತ ಬಿಜೆಪಿ ಕಾರ್ಯಕಾರಣಿಯಲ್ಲಿ ಚರ್ಚೆ ಆಗಿದೆ. ಗೊಂದಲ ಸರಿ ಪಡಿಸಲು ಸಮಿತಿ ಅಗಬೇಕು ಅಂತ ನಾನು ಮೊದಲಿಂದ ಹೇಳಿದ್ದೇನೆ. ಅವರಲ್ಲಿ ಸಮಿತಿ ಮಾಡಬೇಕು ಅಂತ ಅವರ ಭಾವನೆ ಇದೆ. ನಮ್ಮ ಪಕ್ಷದಿಂದ ಮೈತ್ರಿಯ ಹೊಂದಾಣಿಕೆಗೆ ಚ್ಯುತಿ ಬಾರದಂತೆ ನಾವು ನಡೆದುಕೊಳ್ಳುತ್ತೇವೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



