'ತಂದೆ 14 ಮಂದಿಯ ಹೆಸರನ್ನು ಕೊಟ್ಟಿದ್ದರು, ಅದರಲ್ಲಿ ಮಹದೇವಪ್ಪನವರದ್ದೂ ಇತ್ತು, ಆದರೂ ಸಚಿವ ಸ್ಥಾನ ಅವರ ಕೈತಪ್ಪಿತು': ಯತೀಂದ್ರ ಸಿದ್ದರಾಮಯ್ಯ; Video
ಹಿರಿಯರಾದ ಮಹದೇವಪ್ಪ ಮತ್ತು ತನ್ವೀರ್ ಸೇಠ್ ಅವರ ಮನವೊಲಿಸುವ ಕಾರ್ಯವನ್ನು ಪಕ್ಷದ ವರಿಷ್ಠರು ಮಾಡಿದ್ದಾರೆ. ಕುರುಬ ಸಮುದಾಯದ ಅಸಮಾಧಾನದಿಂದಾಗಿ ಮತ್ತು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನ ಬಿಟ್ಟಿದ್ದರಿಂದ ತನಗೆ ಸಚಿವ ಸ್ಥಾನ ಲಭಿಸಿತು ಎಂದು ಕೂಡ ಹೇಳಿದ್ದಾರೆ.

ಮೈಸೂರು: ಮಾಜಿ ಸಚಿವ ಹೆಚ್ಸಿ ಮಹದೇವಪ್ಪಗೆ ಈ ಬಾರಿ ಸಚಿವ ಸ್ಥಾನ ಕೈತಪ್ಪಿದ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ನಗರಾಭಿವೃದ್ಧಿ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ ಯತೀಂದ್ರ ಸಿದ್ದರಾಮಯ್ಯ, ಮಹದೇವಪ್ಪ ಹೆಸರನ್ನು ಸಿದ್ದರಾಮಯ್ಯ ಸಚಿವರ ಪಟ್ಟಿಯಲ್ಲಿ ಶಿಫಾರಸು ಮಾಡಿದ್ದರು. ಆದರೆ, ಹೈಕಮಾಂಡ್ ಈ ಬಾರಿ ಹೊಸ ಮುಖವಾಗಿ ನರೇಂದ್ರ ಸ್ವಾಮಿ ಅವರನ್ನು ಆಯ್ಕೆ ಮಾಡಿದೆ ಎಂದು ಸ್ಪಷ್ಟಪಡಿಸಿದರು.
ಹಿರಿಯರಾದ ಮಹದೇವಪ್ಪ ಮತ್ತು ತನ್ವೀರ್ ಸೇಠ್ ಅವರ ಮನವೊಲಿಸುವ ಕಾರ್ಯವನ್ನು ಪಕ್ಷದ ವರಿಷ್ಠರು ಮಾಡಿದ್ದಾರೆ. ಕುರುಬ ಸಮುದಾಯದ ಅಸಮಾಧಾನದಿಂದಾಗಿ ಮತ್ತು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನ ಬಿಟ್ಟಿದ್ದರಿಂದ ತನಗೆ ಸಚಿವ ಸ್ಥಾನ ಲಭಿಸಿತು ಎಂದು ಕೂಡ ಹೇಳಿದ್ದಾರೆ.
ನೂತನವಾಗಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡ ಯತೀಂದ್ರ ಸಿದ್ದರಾಮಯ್ಯ, ತಮ್ಮ ಜಿಲ್ಲಾ ಉಸ್ತುವಾರಿ ಸ್ಥಾನ ಮತ್ತು ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿದ್ದಾರೆ. ಬರ ಪೀಡಿತ ಪ್ರದೇಶಗಳ ಪರಿಶೀಲನೆಗಾಗಿ ಮುಖ್ಯಮಂತ್ರಿಗಳ ಸೂಚನೆಯಂತೆ ಮೈಸೂರಿಗೆ ಭೇಟಿ ನೀಡಿರುವ ಅವರು, ಮೊದಲು ಉರುಲಿಂಗ ಪೆದ್ದಿ ಮಠ ಹಾಗೂ ಸುತ್ತೂರು ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಈ ಹಿಂದೆ ತಾತ್ಕಾಲಿಕವಾಗಿ ಮೈಸೂರು ಉಸ್ತುವಾರಿ ಜವಾಬ್ದಾರಿ ವಹಿಸಿಕೊಂಡಿದ್ದ ಯತೀಂದ್ರ, ಈಗ ಅಧಿಕೃತವಾಗಿ ಸ್ಥಾನ ಖಚಿತವಾಗಿರುವ ಕಾರಣ ಮಠಗಳಿಗೆ ಭೇಟಿ ನೀಡಿರುವುದಾಗಿ ಹೇಳಿದರು.
ಅಸಮಾಧಾನಗೊಂಡಿರುವ ಹಿರಿಯ ನಾಯಕರನ್ನು ನಮ್ಮ ವರಿಷ್ಠರು ಹೋಗಿ ಭೇಟಿ ಮಾಡಿದ್ದಾರೆ. ಹಾಗಾಗಿ ಭಿನ್ನಮತ ಶಮನವಾಗಲಿದೆ ಎಂದರು.
ಈ ದೇಶ ಹಿಂದೂ ರಾಷ್ಟ್ರವಾದರೆ ಜಾತಿ ವ್ಯವಸ್ಥೆ ಮತ್ತೆ ಬರುತ್ತದೆ, ಹಿಂದುತ್ವವಾದಿಗಳು ಮನುಸ್ಮೃತವಾದಿಗಳಲ್ಲಿರುವ ಸಾಮಾಜಿಕ ವ್ಯವಸ್ಥೆಯನ್ನು ವಾಪಸ್ ತರುತ್ತಾರೆ ಎಂದು ಆಕ್ಷೇಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



