'ನಾನು ಸಚಿವ ಸ್ಥಾನ ಆಕಾಂಕ್ಷಿ, ಪಕ್ಷಕ್ಕೆ ಕೆಲಸ ಮಾಡಿರುವುದನ್ನು ಪರಿಗಣಿಸಿ ನನಗೆ ಹುದ್ದೆ ನೀಡಬೇಕು': ಉಮಾಶ್ರೀ
ಸಚಿವ ಸಂಪುಟ ವಿಸ್ತರಣೆಯಲ್ಲಿ 19 ಮಂದಿಗೆ ಸ್ಥಾನ ನೀಡಿ ಒಂದು ಸ್ಥಾನ ಕಾಯ್ದಿರಿಸಿದ್ದಾರೆ, ನಾನು ಕೂಡ ಸಚಿವೆ ಸ್ಥಾನ ಆಕಾಂಕ್ಷಿ, ನಮ್ಮ ಪಕ್ಷ ನನಗೆ ಅವಕಾಶ ಮಾಡಿಕೊಡಬಹುದು ಎಂಬ ನಿರೀಕ್ಷೆಯಿದೆ, ನೋಡೋಣ ಏನು ಮಾಡುತ್ತಾರೆ ಎಂದು, ಕಾದು ನೋಡೋಣ ಎಂದರು.

ಬೆಂಗಳೂರು: ನನಗೆ ಉಪ ಸಭಾಪತಿ ಸ್ಥಾನ ನೀಡಿದ್ದಾರೆ, ನಾನು ಸಚಿವ ಸ್ಥಾನದ ಆಕಾಂಕ್ಷಿಯೂ ಹೌದು ಎಂದು ಮಾಜಿ ಸಚಿವೆ ಉಮಾಶ್ರೀ ಹೇಳಿದ್ದಾರೆ.
ಬೆಂಗಳೂರಿನಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನನಗೆ ಭರವಸೆ ಇದೆ, ಪಕ್ಷ ಸೂಕ್ತ ತೀರ್ಮಾನ ತೆಗೆದುಕೊಂಡು ನನಗೆ ಸಚಿವೆ ಸ್ಥಾನ ನೀಡಬಹುದು ಎಂಬ ನಂಬಿಕೆಯಿದೆ ಎಂದರು.
ಸಚಿವ ಸಂಪುಟ ವಿಸ್ತರಣೆಯಲ್ಲಿ 19 ಮಂದಿಗೆ ಸ್ಥಾನ ನೀಡಿ ಒಂದು ಸ್ಥಾನ ಕಾಯ್ದಿರಿಸಿದ್ದಾರೆ, ನಾನು ಕೂಡ ಸಚಿವೆ ಸ್ಥಾನ ಆಕಾಂಕ್ಷಿ, ನಮ್ಮ ಪಕ್ಷ ನನಗೆ ಅವಕಾಶ ಮಾಡಿಕೊಡಬಹುದು ಎಂಬ ನಿರೀಕ್ಷೆಯಿದೆ, ನೋಡೋಣ ಏನು ಮಾಡುತ್ತಾರೆ ಎಂದು, ಕಾದು ನೋಡೋಣ ಎಂದರು.
ಪಕ್ಷಕ್ಕೆ ದುಡಿದು, ಕೆಲಸ ಮಾಡಿರುವುದನ್ನು ಪರಿಗಣಿಸಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೇನೆ, ಮೂವರು ಮಹಿಳಾ ಶಾಸಕರಿಗೆ ಈ ಬಾರಿ ಅವಕಾಶ ನೀಡಬಹುದು ಎಂಬ ನಿರೀಕ್ಷೆಯಲ್ಲಿದ್ದೆವು. ಕೇಳಿದ್ದೆವು ಕೂಡ. ವರಿಷ್ಠ ಹಂತದಲ್ಲಿ ಕೊನೆ ಗಳಿಗೆಯಲ್ಲಿ ಏನು ತೀರ್ಮಾನವಾಯಿತೋ ಗೊತ್ತಿಲ್ಲ, ಮಹಿಳೆಯರು ಸಚಿವರಾಗಲಿಲ್ಲ ಎಂಬ ನೋವು ಖಂಡಿತಾ ಇದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



