'ಓಡೋರು ಓಡಲಿ, ಸುಸ್ತಾಗಿ ನೀರು ಕುಡಿಯೋಕೆ ಕೂರ್ತಾರೆ; ನಾನು ರೇಸ್ ನಿಧಾನವಾಗಿ ಓಡ್ತೀನಿ; ಹಾಸನ ಕ್ಷೇತ್ರಕ್ಕೆ ಮುಂದಿನ ಕ್ಯಾಂಡಿಡೇಟ್ ನಾನೇ'
ಹೆಚ್‌ಡಿಕೆ ಮುಂದಿನ ಸಿಎಂ ಆಗ್ತಾರೆ ಎಂದು ಜೆಡಿಎಸ್ ನಾಯಕರು ತಮ್ಮ ಮನಸ್ಸಿನ ಮಾತನ್ನು ಹೇಳಿಕೊಂಡಿದ್ದಾರೆ. ನಮ್ಮ ಸಿದ್ಧಾಂತದ ಪ್ರಕಾರ ನಾವು ಕೆಲಸ ಮಾಡುತ್ತೇವೆ. ನಮ್ಮ ಪಕ್ಷದ ಸಿದ್ಧಾಂತ ಒಪ್ಪಿರುವ ಮತದಾರರು ನಮ್ಮೊಂದಿಗಿರುತ್ತಾರೆ.

ಹಾಸನ: ನನ್ನ ಮನಸ್ಸಿನ ಇಚ್ಚೆ ನಾನು ಸಾರ್ವಜನಿಕವಾಗಿ ಹೇಳಿದ್ರೆ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಗೌರವ ತರಲ್ಲ. ನಾನು ಗೌರವವನ್ನು ಕಾಪಾಡಿಕೊಂಡು, ರಾಜಕಾರಣವನ್ನು ಮಾಡುವಂತ ಅನಿವಾರ್ಯತೆ ಇದೆ. ಹಾಗಾಗಿ ನಾನು ತಾಳ್ಮೆಯಿಂದ ಇದ್ದೀನಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಹೇಳಿದ್ದಾರೆ.
ಬಿಜೆಪಿ ಜೊತೆ ಮೈತ್ರಿ ಅಷ್ಟೇ, ಸಿದ್ದಾಂತದಲ್ಲಿ ರಾಜೀ ಇಲ್ಲ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರೀತಂ ಗೌಡ, ನಿಖಿಲ್ ಯುವಕರಾಗಿದ್ದು. ಅವರು ಅವರ ಪಕ್ಷ ಸಿದ್ದಾಂತದ ಬಗ್ಗೆ ಮಾತಾಡಿದ್ದಾರೆ. ಅವರಿಗೆ ಆಲ್ ದಿ ಬೆಸ್ಟ್ ಒಳ್ಳೆಯದಾಗಲಿ ಎಂದು ಟಾಂಗ್ ನೀಡಿದರು. ನಿಖಿಲ್ ಕುಮಾರಸ್ವಾಮಿ ಹೇಳಿರೋದು ಸರಿ ಇದೆ, ಅವರಿಗೆ ಆಲ್ ದಿ ಬೆಸ್ಟ್ ಹೇಳುತ್ತೇನೆ ಎಂದು ಟಾಂಗ್ ನೀಡಿದರು.
ಹೆಚ್‌ಡಿಕೆ ಮುಂದಿನ ಸಿಎಂ ಆಗ್ತಾರೆ ಎಂದು ಜೆಡಿಎಸ್ ನಾಯಕರು ತಮ್ಮ ಮನಸ್ಸಿನ ಮಾತನ್ನು ಹೇಳಿಕೊಂಡಿದ್ದಾರೆ. ನಮ್ಮ ಸಿದ್ಧಾಂತದ ಪ್ರಕಾರ ನಾವು ಕೆಲಸ ಮಾಡುತ್ತೇವೆ. ನಮ್ಮ ಪಕ್ಷದ ಸಿದ್ಧಾಂತ ಒಪ್ಪಿರುವ ಮತದಾರರು ನಮ್ಮೊಂದಿಗಿರುತ್ತಾರೆ ಎಂದರು.
ಎನ್‌ಡಿಎ ನೇತೃತ್ವದಲ್ಲಿ ಸಿಎಂ ಆಗ್ತಾರೆ, ಆದರೆ ಯಾರು ಸಿಎಂ ಆಗ್ತಾರೆ ಅನ್ನೋದು ಆವತ್ತಿನ ದಿನದಲ್ಲಿ ತೀರ್ಮಾನ ಆಗುತ್ತದೆ. ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್ ಆದ ಹಾಗೇ, ಬಿಹಾರದಲ್ಲಿ ಸಾಮ್ರಾಟ ಚೌಧರಿ ಆದ ರೀತಿಯಲ್ಲಿಯೇ ಕರ್ನಾಟಕದಲ್ಲೂ ಒಬ್ಬರು ಮುಖ್ಯಮಂತ್ರಿಯಾಗ್ತಾರೆ.ಕಾದು ನೋಡೋಣ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



