2028ರಲ್ಲಿ ಮೈತ್ರಿ ಸರ್ಕಾರದ ಮೂಲಕ ವಿಧಾನಸೌಧಕ್ಕೆ ಬರುತ್ತೇವೆ: ಎಚ್.ಡಿ ಕುಮಾರಸ್ವಾಮಿ
ರಾಜ್ಯದ ಜನತೆ ಆಶೀರ್ವಾದದ ಜೊತೆಗೆ ಭಗವಂತ ನಮ್ಮ ಹಣೆಯಲ್ಲಿ ಬರೆದಿರುತ್ತಾನೆ. ಅದರ ಪ್ರಕಾರ ನಾವು ಕೆಲಸವನ್ನು ನಿರ್ವಹಣೆ ಮಾಡಬೇಕಾಗುತ್ತದೆ. ನೋಡೋಣ ಮುಂದಿನ ದಿನಗಳಲ್ಲಿ ಭಗವಂತ ಇಚ್ಛೆ ಏನಿದೆ ಎಂದರು.

ಬೆಂಗಳೂರು: ವಿಧಾನಸೌಧಕ್ಕೆ ಮತ್ತೆ ವಾಪಸ್ ಬರೋದು ಭಗವಂತ ಇಚ್ಛೆ ಮತ್ತು ಜನರ ಆಶೀರ್ವಾದದಿಂದ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ತಿಳಿಸಿದರು.
ಎರಡು ವರ್ಷಗಳ ಬಳಿಕ ಕೈಗಾರಿಕಾ ಸಚಿವರ ಜೊತೆ ಸಭೆ ನಡೆಸಲು ವಿಧಾನಸೌಧಕ್ಕೆ ಅವರು ಆಗಮಿಸಿದ್ದರು. ಈ ವೇಳೆ ಮಾಧ್ಯಮ ಪ್ರತಿನಿಧಿಗಳು, ಯಾವಾಗ ವಿಧಾನಸೌಧಕ್ಕೆ ಬರುತ್ತೀರಿ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅವರು, ವಿಧಾನಸೌಧಕ್ಕೆ ಮತ್ತೆ ಬರೋದು ಅದೆಲ್ಲವನ್ನು ಭಗವಂತ ನಿಗದಿ ಮಾಡುತ್ತಾನೆ.
ರಾಜ್ಯದ ಜನತೆ ಆಶೀರ್ವಾದದ ಜೊತೆಗೆ ಭಗವಂತ ನಮ್ಮ ಹಣೆಯಲ್ಲಿ ಬರೆದಿರುತ್ತಾನೆ. ಅದರ ಪ್ರಕಾರ ನಾವು ಕೆಲಸವನ್ನು ನಿರ್ವಹಣೆ ಮಾಡಬೇಕಾಗುತ್ತದೆ. ನೋಡೋಣ ಮುಂದಿನ ದಿನಗಳಲ್ಲಿ ಭಗವಂತ ಇಚ್ಛೆ ಏನಿದೆ ಎಂದರು.
ನಾವು ಮೈತ್ರಿ ಪಕ್ಷದ ಹೊಂದಾಣಿಕೆಯಲ್ಲಿ ಇದ್ದೇವೆ. ದೆಹಲಿ ಬಿಜೆಪಿ ಹೈಕಮಾಂಡ್ ನಾಯಕರು, ರಾಜ್ಯ ನಾಯಕರು ನಾವೆಲ್ಲ ಜೊತೆಗೂಡಿ ಮುಂದಿನ ದಿನಗಳಲ್ಲಿ ವಿಧಾನಸೌಧಕ್ಕೆ ಬರೋದಕ್ಕೆ ಜನತೆ ಆಶೀರ್ವಾದದಿಂದ ಪ್ರಯತ್ನ ಪಡುತ್ತೇವೆ ಎಂದರು. 2028 ರಲ್ಲಿ ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಹಾಗೂ ವಿಧಾನಸೌಧಕ್ಕೆ ಮತ್ತೆ ಬರುವ ಸಂದರ್ಭ ಸೃಷ್ಟಿಸುವ ಪ್ರಯತ್ನ ನಡೆಸುತ್ತೇವೆ ಎನ್ನುವ ಮೂಲಕ ಕುತೂಹಲ ಮೂಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



