ಅಪ್ಪ-ಮಗ ಇಬ್ಬರನ್ನು ತಿಹಾರ್ ಜೈಲಿಗೆ ಹಾಕಿ; ನನ್ನಲ್ಲಿ ಹರಿಯೋದು ದಲಿತ ರಕ್ತ ಎಂದು ಏಕೆ ಬೊಗಳುತ್ತೀರಿ? ದ್ವೇಷ ಭಾಷಣ ಕಲಿಸಿದ್ದು ನಿಮ್ಮ ಮನೆಯ ಬ್ರಾಹ್ಮಣರಾ?
ಖರ್ಗೆ ಕುರಾನ್‌ನಲ್ಲಿ ಇರುವ ಒಂದು ವಿಷಯ ಪ್ರಸ್ತಾಪ ಮಾಡಿದ್ದಾರೆ. ವಿಷಕಾರಿ ಹಾವನ್ನು ಸಾಯಿಸಬೇಕು ಎಂದು ಹೇಳಿದ್ದಾರೆ. BJP-RSS ವಿಷಕಾರಿ ಹಾವು ಅಂದಿದ್ದಾರೆ. ಅವರೇನು ನೋಡಿದ್ದಾರಾ?

ಬೆಂಗಳೂರು: BJP-RSS ಅವರನ್ನು ಕೊಲ್ಲಬೇಕು ಎಂಬ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಸಮರ್ಥನೆ ಮಾಡಿಕೊಂಡ ಪುತ್ರ ಪ್ರಿಯಾಂಕ್ ಖರ್ಗೆ ಅವರನ್ನು ತಿಹಾರ್ ಜೈಲಿಗೆ ಹಾಕಬೇಕು ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಒತ್ತಾಯಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಪ್ರಚೋದನಕಾರಿ ಹೇಳಿಕೆ ಕೊಟ್ಟಿದ್ದಾರೆ. ಇಡೀ ದೇಶದಲ್ಲಿ ಅವರಿಗೆ ಹಿಡಿಶಾಪ ಹಾಕ್ತಿದ್ದಾರೆ. ಖರ್ಗೆ ಕುರಾನ್‌ನಲ್ಲಿ ಇರುವ ಒಂದು ವಿಷಯ ಪ್ರಸ್ತಾಪ ಮಾಡಿದ್ದಾರೆ. ವಿಷಕಾರಿ ಹಾವನ್ನು ಸಾಯಿಸಬೇಕು ಎಂದು ಹೇಳಿದ್ದಾರೆ. BJP-RSS ವಿಷಕಾರಿ ಹಾವು ಅಂದಿದ್ದಾರೆ. ಅವರೇನು ನೋಡಿದ್ದಾರಾ? ಖರ್ಗೆ ನಾಲಿಗೆ ಹದ್ದುಬಸ್ತಿನಲ್ಲಿ ಇರಬೇಕಿತ್ತು ಎಂದಿದ್ದಾರೆ.
ನಿಮಗೆ ಅರಳು-ಮರಳೋ ಅಥವಾ ಮಾನಸಿಕ ಆರೋಗ್ಯ ಕೆಟ್ಟಿದೆಯಾ? ಇದು ದ್ವೇಷ ಭಾಷಣ ಆಗುತ್ತದೆ. ಕರ್ನಾಟಕದಲ್ಲಿ ದ್ವೇಷ ಭಾಷಣ ಬಿಲ್ ಪಾಸ್ ಆಗಿದೆ. ಬಿಜೆಪಿ ಈಗಾಗಲೇ ಖರ್ಗೆ ವಿರುದ್ಧ ದೂರು ಕೊಟ್ಟಿದ್ದಾರೆ. ರಜಾಕಾರರು ನಮ್ಮ ಕುಟುಂಬದವರನ್ನ ಕೊಂದರು ಎಂದು ಖರ್ಗೆ ಹೇಳಿದ್ರು. ನಿಮಗೆ ಯಾರ ಮೇಲೆ ಕೋಪ ಇರಬೇಕಿತ್ತು? ರಜಾಕಾರರ ಮೇಲೆ ಕೋಪ ಇರಬೇಕಿತ್ತು. ಆದರೆ, ಅವರನ್ನ ಎತ್ತಿಕಟ್ಟಿ BJP-RSS ಕೊಲ್ಲಬೇಕು ಅಂತೀರಾ. ನಾಚಿಕೆ ಆಗೊಲ್ಲವಾ ಎಂದು ಕಿಡಿಕಾರಿದರು.
ನಿಮ್ಮ ತಂದೆ ದನ ಕಾದು ನಿಮಗೆ ಅಕ್ಷರ ಕಲಿಸಿ ವಿದ್ಯೆ ಕೊಟ್ಟರು. ಅವರನ್ನ ನೀವು ಮನೆಗೆ ಸೇರಿಸಿಲ್ಲ ಎಂದು ಅನೇಕರು ಹೇಳ್ತಾರೆ. BJP-RSS ನಿಮಗೆ ಏನು ಮಾಡಿದೆ? ಯಾರನ್ನು ಮೆಚ್ಚಿಸಲು ಹೇಳಿಕೊಡ್ತಾ ಇದ್ದಾರೆ ಎಂದು ವಾಗ್ದಾಳಿ ನಡೆಸಿದರು.
ನಿಮ್ಮಮನೆ ತುಂಬ ಬ್ರಾಹ್ಮಣರನ್ನು ತುಂಬಿಸಿಕೊಂಡಿದ್ದೀರಿ. ನೀವು ದಲಿತರಾಗಿ ಉಳಿದಿಲ್ಲ. ನನ್ನಲ್ಲಿ ಹರಿಯೋದು ದಲಿತ ರಕ್ತ ಎಂದು ಏಕೆ ಬೊಗಳುತ್ತೀರಿ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಛಲವಾದಿ ನಾರಾಯಣಸ್ವಾಮಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಬ್ರಾಹ್ಮಣರು ದ್ವೇಷ ಭಾಷಣ ಕಲಿಸುತ್ತಾರೆಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ನಿಮಗೆ ದ್ವೇಷ ಭಾಷಣ ಕಲಿಸಿದ್ದು ನಿಮ್ಮ ಮನೆಯ ಬ್ರಾಹ್ಮಣರಾ? ಎಂದು ಪ್ರಶ್ನಿಸಿದರು. ಬ್ರಾಹ್ಮಣರಿಗೆ ದಲಿತರು, ಮುಸ್ಲಿಮರೆಲ್ಲ ಆಗಲ್ಲ ಎನ್ನುತ್ತಾರೆ. ಮುಸ್ಲಿಮರ ಬಗ್ಗೆ ಪ್ರೀತಿ ಇದ್ದರೆ, ಅದೇ ಸಮುದಾಯದವರನ್ನು ಮದುವೆ ಆಗಬೇಕಿತ್ತು. ನಿಮ್ಮ ಮಕ್ಕಳನ್ನೂ ಮುಸ್ಲಿಂ ಸಮುದಾಯದ ಜೊತೆ ಮದುವೆ ಮಾಡಿಸಬೇಕಿತ್ತು. ಬೇವಿನಕಾಯಿಗೆ ಹಾಗಲಕಾಯಿ ಸಾಕ್ಷಿ. ತಂದೆ ಮಾತಿಗೆ ಮಗನ ಬೆಂಬಲ, ಇಬ್ಬರ ಮನಸ್ಥಿತಿ ಒಂದೇ ಎಂದು ಟೀಕಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



