ರಾಜಕೀಯ

ಕೆಲವರು ನಾನು ಸಿಎಂ ಆಗ್ಬೇಕು ಅಂತಾರೆ, ತೀರ್ಮಾನ ಹೈಕಮಾಂಡ್ ಗೆ ಬಿಟ್ಟದ್ದು: ಪರಮೇಶ್ವರ್; ಇಬ್ಬರ ಜಗಳ ಬೀದಿಗೆ ಬಂದಿದೆ ಎಂದ ಅಶೋಕ್

ಯಾರೋ ಡಿಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯಾಗಲು ಬಯಸುತ್ತಾರೆ, ಯಾರೋ ಸಿದ್ದರಾಮಯ್ಯ ಮುಂದುವರಿಯಬೇಕೆಂದು ಬಯಸುತ್ತಾರೆ, ಇನ್ಯಾರೋ ನಾನು ಮುಖ್ಯಮಂತ್ರಿಯಾಗಬೇಕೆಂದು ಬಯಸುತ್ತಾರೆ ಎಂದರು.

ಕೆಲವರು ನಾನು ಸಿಎಂ ಆಗ್ಬೇಕು ಅಂತಾರೆ, ತೀರ್ಮಾನ ಹೈಕಮಾಂಡ್ ಗೆ ಬಿಟ್ಟದ್ದು: ಪರಮೇಶ್ವರ್; ಇಬ್ಬರ ಜಗಳ ಬೀದಿಗೆ ಬಂದಿದೆ ಎಂದ ಅಶೋಕ್
ಡಾ ಜಿ ಪರಮೇಶ್ವರ್, ಆರ್ ಅಶೋಕ್
Published On :

ಬೆಂಗಳೂರು: ಅತ್ತ ಸಿಎಂ-ಡಿಸಿಎಂ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸುತ್ತಿದ್ದರೆ ಇತ್ತ ಮಾಧ್ಯಮ ಪ್ರತಿನಿಧಿಗಳಿಗೆ ಕಾಂಗ್ರೆಸ್ ನಲ್ಲಿ ನಾಯಕತ್ವ ವಿವಾದ ಬಗ್ಗೆ ಗೃಹ ಸಚಿವ ಡಾ ಜಿ ಪರಮೇಶ್ವರ್ ಮಾತನಾಡಿದ್ದಾರೆ.

ಯಾರೋ ಡಿಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯಾಗಲು ಬಯಸುತ್ತಾರೆ, ಯಾರೋ ಸಿದ್ದರಾಮಯ್ಯ ಮುಂದುವರಿಯಬೇಕೆಂದು ಬಯಸುತ್ತಾರೆ, ಇನ್ಯಾರೋ ನಾನು ಮುಖ್ಯಮಂತ್ರಿಯಾಗಬೇಕೆಂದು ಬಯಸುತ್ತಾರೆ, ಮತ್ತಿನ್ಯಾರೋ ಬೇರೆಯವರನ್ನು ಬಯಸುತ್ತಾರೆ. ನೀವು ಜನರ ಆಕಾಂಕ್ಷೆಗಳನ್ನು ತಡೆಯಲು ಸಾಧ್ಯವಿಲ್ಲ ಎಂದರು.

ಮುಖ್ಯಮಂತ್ರಿ ಹುದ್ದೆ ಬಗ್ಗೆ ಚರ್ಚೆ ನಡೆಯುವಾಗಲೆಲ್ಲಾ, ಅದು ಚುನಾವಣೆಯ ನಂತರ ಅಥವಾ ನಡುವೆ ಎಲ್ಲೋ ಆಗಿರಲಿ, ದಲಿತರು ತಮ್ಮ ಆಕಾಂಕ್ಷೆಗಳನ್ನು ವ್ಯಕ್ತಪಡಿಸುತ್ತಾರೆ. ಅದರಲ್ಲಿ ಯಾವುದೇ ತಪ್ಪಿಲ್ಲ. ಅದು ತಪ್ಪೆಂದು ನಾನು ಭಾವಿಸುವುದಿಲ್ಲ. ಯಾರನ್ನು ಮಾಡಬೇಕೆಂಬುದು ಹೈಕಮಾಂಡ್‌ಗೆ ಬಿಟ್ಟದ್ದು. ಈ ಎಲ್ಲಾ ಬೆಳವಣಿಗೆಗಳನ್ನು ಹೈಕಮಾಂಡ್ ಖಂಡಿತವಾಗಿಯೂ ಗಮನಿಸುತ್ತಾರೆ ಮತ್ತು ಸೂಕ್ತ ಸಮಯದಲ್ಲಿ ಮಧ್ಯೆ ಪ್ರವೇಶಿಸಿ ಬಗೆಹರಿಸುತ್ತಾರೆ ಎಂದರು.

ಇಂದಿನ ಮೀಟಿಂಗ್ ಗೆ ನಮ್ಮನ್ನು ಯಾರನ್ನೂ ಕರೆದಿಲ್ಲ, ಅದು ಕೇವಲ ಸಿಎಂ ಮತ್ತು ಡಿಸಿಎಂ ಮಧ್ಯೆ ನಡೆಯುವ ಮಾತುಕತೆ, ಅಗತ್ಯವಿರುವಾಗ ಸಂಪುಟ ಸದಸ್ಯರನ್ನು ಕರೆಯುತ್ತಾರೆ, ಅಗತ್ಯವಿದ್ದರೆ ಹೈಕಮಾಂಡ್ ಡೆಲ್ಲಿಗೂ ಕರೆಯುತ್ತಾರೆ ಆಗ ಹೋಗುತ್ತೇವೆ ಎಂದರು.

ಇಬ್ಬರ ಜಗಳ ಬೀದಿಗೆ ಬಂದಿದೆ

ನಾಯಕತ್ವ ವಿವಾದದ ಕುರಿತು, ವಿಧಾನ ಸಭೆ ವಿರೋಧ ಪಕ್ಷ ನಾಯಕ ಆರ್ ಅಶೋಕ್ ಮಾತನಾಡಿ, ಕರ್ನಾಟಕ ರಾಜಕೀಯದಲ್ಲಿ ಇದು ಬಹಳ ನಿರ್ಣಾಯಕ ಹಂತ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವಿನ ಹೋರಾಟ ಬೀದಿ ಜಗಳವಾಗಿ ಮಾರ್ಪಟ್ಟಿದೆ. ಕಾಂಗ್ರೆಸ್ ಹೈಕಮಾಂಡ್ ದುರ್ಬಲವಾಗಿದೆ. ಡಿಕೆ ಶಿವಕುಮಾರ್ ಅವರ ಬೇಡಿಕೆಯಂತೆ ಅರ್ಧಾವಧಿಯ ಅಧಿಕಾರ ಹಂಚಿಕೆ ಒಪ್ಪಂದವನ್ನು ಅವರು ಜಾರಿಗೆ ತರಬೇಕು. ಆದರೆ ಸಿದ್ದರಾಮಯ್ಯ ಅವರು ಬಿಡುತ್ತಿಲ್ಲ. ಕಳೆದ ಒಂದು ವರ್ಷದಿಂದ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳಾಗಿಲ್ಲ, ಸಿಎಂ ಮತ್ತು ಡಿಸಿಎಂ ನಡುವೆ ಸಮನ್ವಯವಿಲ್ಲ, ಯಾವುದೇ ಸಚಿವರು ಕೆಲಸ ಮಾಡುತ್ತಿಲ್ಲ, ಎಲ್ಲರೂ ಮನೆಯಲ್ಲಿ ಕುಳಿತಿದ್ದಾರೆ, ವಿಧಾನಸೌಧಕ್ಕೆ ಬರುತ್ತಿಲ್ಲ. ಇಡೀ ರಾಜ್ಯವು ಸಿಎಂ ಯಾರು ಎಂಬ ಬಗ್ಗೆ ಗೊಂದಲದಲ್ಲಿದೆ. ಇಂದು ನಾವು ಬಿಜೆಪಿ ಮತ್ತು ಜೆಡಿಎಸ್ ಸಭೆ ನಡೆಸುತ್ತಿದ್ದೇವೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.