ಶಾಸಕರ ಅಮಾನತು ಹಿಂಪಡೆಯಿರಿ: ಸ್ಪೀಕರ್'ಗೆ BJP ಒತ್ತಾಯ
ಅಮಾನತುಗೊಂಡ ಶಾಸಕರನ್ನು ವಿಧಾನಸಭೆ ಲಾಬಿ ಅಥವಾ ಸಭಾಂಗಣಕ್ಕೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ. ಅವರೇನು ಭಯೋತ್ಪಾದಕರೇ ಅಥವಾ ನಕ್ಸಲೀಯರೇ? ಎಂದು ಪ್ರಶ್ನಿಸಿದರು.

ಬೆಂಗಳೂರು: 18 ಶಾಸಕರನ್ನು ಆರು ತಿಂಗಳ ಕಾಲ ಅಮಾನತುಗೊಳಿಸಿದ ಆದೇಶವನ್ನು ಹಿಂಪಡೆಯುವಂತೆ ಸ್ಪೀಕರ್ ಯು.ಟಿ.ಖಾದರ್ ಅವರಿಗೆ ಬಿಜೆಪಿ ಒತ್ತಾಯಿಸಿದೆ.
ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ಸ್ಪೀಕರ್ ಅವರ ನಿರ್ಧಾರವನ್ನು "ಕಾನೂನುಬಾಹಿರ, ಸಂವಿಧಾನಬಾಹಿರ, ಏಕಪಕ್ಷೀಯ" ಎಂದು ಕರೆದರು.
ಸ್ಪೀಕರ್ ಶಾಸಕರನ್ನು ಮಾತ್ರವಲ್ಲದೆ ಅವರ ಕ್ಷೇತ್ರದ ಜನರನ್ನು ಸಹ ಅವಮಾನಿಸಿದ್ದಾರೆ ಎಂದು ಅವರು ಹೇಳಿದರು.
ಅಮಾನತುಗೊಂಡ ಶಾಸಕರನ್ನು ವಿಧಾನಸಭೆ ಲಾಬಿ ಅಥವಾ ಸಭಾಂಗಣಕ್ಕೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ. ಅವರೇನು ಭಯೋತ್ಪಾದಕರೇ ಅಥವಾ ನಕ್ಸಲೀಯರೇ? ಎಂದು ಪ್ರಶ್ನಿಸಿದರು.
ಶಾಸಕರು ಸ್ಥಾಯಿ ಸಮಿತಿ ಸಭೆಗಳಿಗೆ ಹಾಜರಾಗುವುದನ್ನು ನಿಷೇಧಿಸುವ ಸ್ಪೀಕರ್ ನಿರ್ಧಾರಕ್ಕೂ ಅವರು ಆಕ್ಷೇಪ ವ್ಯಕ್ತಪಡಿಸಿದರು.
ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಮಾತನಾಡಿ, ಬಿಜೆಪಿ ಶಾಸಕರು ವಿಧಾನಸಭೆಯ ಗೌರವವನ್ನು ರಕ್ಷಿಸಲು ಹೋರಾಡುತ್ತಿದ್ದಾರೆ. ಆದರೆ ಸ್ಪೀಕರ್ "ಹಿಟ್ಲರ್‌ನಂತೆ ವರ್ತಿಸಿದ್ದಾರೆಂದು ಕಿಡಿಕಾರಿದರು.
ನಾನು ಇಂದು ಬೆಳಿಗ್ಗೆ ಸ್ಪೀಕರ್ ಅವರೊಂದಿಗೆ ಮಾತನಾಡಿದೆ. ಅವರ ಈ ನಿರ್ಧಾರವು ವಿಧಾನಸಭೆಗೆ ಗೌರವವನ್ನು ತರುವುದಿಲ್ಲ ಎಂದು ಅವರಿಗೆ ತಿಳಿಸಿದ್ದೇನೆ. ಮೊದಲ ಬಾರಿಗೆ ಸದಸ್ಯರನ್ನು ಆರು ತಿಂಗಳ ಕಾಲ ಅಮಾನತುಗೊಳಿಸಲಾಗಿದೆ. ಸ್ಪೀಕರ್ ಮತ್ತು ಕಾಂಗ್ರೆಸ್‌ಗೆ ತಿಳುವಳಿಕೆ ಇದೆಯೇ? ಎಂದು ವಾಗ್ದಾಳಿ ನಡೆಸಿದರು.
ಅಮಾನತುಗೊಂಡ ಶಾಸಕರೊಂದಿಗೆ ದೃಢವಾಗಿ ನಿಲ್ಲುತ್ತೇವೆ. ನಾವೂ ವಿಧಾನಸಭೆಗೆ ಪ್ರವೇಶಿಸುವುದಿಲ್ಲ. ಸಮಿತಿ ಸಭೆಗಳಿಗೆ ಹಾಜರಾಗುವ ಬಗ್ಗೆ ಶೀಘ್ರದಲ್ಲೇ ನಿರ್ಧರಿಸುತ್ತೇವೆ ಎಂದು ತಿಳಿಸಿದರು.
ಏಪ್ರಿಲ್ 1 ಅಥವಾ 2 ರಂದು ಸ್ಪೀಕರ್ ಬೆಂಗಳೂರಿಗೆ ಹಿಂತಿರುಗುವವರೆಗೆ ನಾವು ಅವರ ನಿರ್ಧಾರಕ್ಕಾಗಿ ಕಾಯುತ್ತೇವೆ. ನಂತರ ಮುಂದಿನ ಕ್ರಮದ ಬಗ್ಗೆ ನಿರ್ಧರಿಸುತ್ತೇವೆ ಎಂದು ಹೇಳಿದರು.
ಹಿಂದುಗಳಿಂದ ಶೇ.4ರಷ್ಟು ಮೀಸಲಾತಿಯನ್ನು ಕಿತ್ತುಕೊಳ್ಳುತ್ತಿರುವ ಸರ್ಕಾರ ಅದನ್ನು ಮುಸ್ಲಿಮರಿಗೆ ನೀಡುತ್ತಿದೆ. ಮಂಗಳೂರಿನಲ್ಲಿ ಮುಸ್ಲಿಮರು ಈಗಾಗಲೇ ಶೇ.50 ರಷ್ಟು ಗುತ್ತಿಗೆ ಕಾಮಗಾರಿಯಲ್ಲಿ ಮೀಸಲಾತಿ ಪಡೆಯುತ್ತಿದ್ದಾರೆ. ಸರ್ಕಾರದ ಪ್ರಸ್ತುತ ನಿರ್ಧಾರದಿಂದ ಈ ಮೀಸಲಾತಿ ಶೇ.75ರಷ್ಟಾಗಲಿದೆ. ಹೀಗಾಗಿ ಸರ್ಕಾರದ ವಿರುದ್ಧ ಸದನದ ಒಳಗೆ ಹಾಗೂ ಹೊರಗೆ ಬಿಜೆಪಿ ಹೋರಾಟ ಮುಂದುವರಯಲಿದೆ. ವಿಚಾರ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವವರೆಗೂ ಪ್ರತಿಭಟನೆ ನಿಲ್ಲುವುದಿಲ್ಲ. ಪಕ್ಷವು ರಾಜ್ಯವ್ಯಾಪಿ ಪ್ರತಿಭಟನೆಗಳನ್ನು ಆಯೋಜಿಸುತ್ತದೆ ಎಂದು ಹೇಳಿದರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



