'ಕಾಂಗ್ರೆಸ್‌ನಲ್ಲಿ ಡಿಕೆಶಿಗೆ ನಯಾಪೈಸೆ ಬೆಲೆ ಇಲ್ಲ; 135 ಸೀಟು ಕೊಟ್ಟರೂ ಸುಸ್ಥಿರ ಸರ್ಕಾರ ಕೊಡಲಾಗದ ರಾಹುಲ್ ಗಾಂಧಿಗೆ ನಾಚಿಕೆಯಾಗಬೇಕು'
ಸಿದ್ದರಾಮಯ್ಯ ಸಾವಿರ ಬಾರಿ ನಾನೇ 5 ವರ್ಷ ಮುಖ್ಯಮಂತ್ರಿ ಎಂದು ಹೇಳುತ್ತಿದ್ದಾರೆ. ಇದೇ ಅವರ ದೌರ್ಬಲ್ಯ. ಡಿಕೆ ಶಿವಕುಮಾರ್ ಸರ್ಕಾರವನ್ನು ನಾನೇ ಅಧಿಕಾರಕ್ಕೆ ತಂದೆ ಎಂದಿದ್ದಾರೆ. ಇನ್ನೂ ಸ್ವಾಮೀಜಿ ಸಹ ಡಿಕೆಶಿ ಸಿಎಂ ಆಗಲಿ ಎಂದು ಹೇಳಿದ್ದಾರೆ.

ಬೆಂಗಳೂರು: ಸಿದ್ದರಾಮಯ್ಯ ಐದು ವರ್ಷ ನಾನೇ ಸಿಎಂ ಎಂದಿದ್ದಾರೆ ಅಂದಮೇಲೆ ಕಾಂಗ್ರೆಸ್‌ನಲ್ಲಿ ಡಿಕೆಶಿಗೆ ನಯಾಪೈಸೆ ಬೆಲೆ ಇಲ್ಲ ಎಂದು ಆರ್.ಅಶೋಕ್ ಲೇವಡಿ ಮಾಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸಾವಿರ ಬಾರಿ ನಾನೇ 5 ವರ್ಷ ಮುಖ್ಯಮಂತ್ರಿ ಎಂದು ಹೇಳುತ್ತಿದ್ದಾರೆ. ಇದೇ ಅವರ ದೌರ್ಬಲ್ಯ. ಡಿಕೆ ಶಿವಕುಮಾರ್ ಸರ್ಕಾರವನ್ನು ನಾನೇ ಅಧಿಕಾರಕ್ಕೆ ತಂದೆ ಎಂದಿದ್ದಾರೆ. ಇನ್ನೂ ಸ್ವಾಮೀಜಿ ಸಹ ಡಿಕೆಶಿ ಸಿಎಂ ಆಗಲಿ ಎಂದು ಹೇಳಿದ್ದಾರೆ. ಆದರೆ ಸಿದ್ದರಾಮಯ್ಯ ಐದು ವರ್ಷ ನಾನೇ ಸಿಎಂ ಎಂದಿದ್ದಾರೆ. ಇದರರ್ಥ ಕಾಂಗ್ರೆಸ್‌ನಲ್ಲಿ ಡಿಕೆಶಿಗೆ ನಯಾ ಪೈಸೆ ಬೆಲೆ ಇಲ್ಲ ಎಂದಿದ್ದಾರೆ
ಡಿಕೆ ಶಿವಕುಮಾರ್ ಗೆ ಶಾಸಕರ ಬೆಂಬಲ ಇಲ್ಲ ಎಂದು ಸಿದ್ದರಾಮಯ್ಯ ಸಂದೇಶ ನೀಡಿದ್ದಾರೆ. ಸಿದ್ದರಾಮಯ್ಯ ತಾವೇ ಐದು ವರ್ಷ ಸಿಎಂ ಅಂತಾರೆ, ಆದರೆ ಇದನ್ನು ಮಲ್ಲಿಕಾರ್ಜುನ ಖರ್ಗೆಯವರು ಘೋಷಣೆ ಮಾಡಬೇಕು. ಖರ್ಗೆಯವರು ಒಂದು ದಿನ ಆದರೂ ಸಿದ್ದರಾಮಯ್ಯ ಐದು ವರ್ಷ ಸಿಎಂ ಎಂದಿದ್ದಾರಾ? ಅಥವಾ ಡಿಕೆಶಿ ಹೇಳಿದ್ದಾರಾ? ಯಾರೂ ಹೇಳಿಲ್ಲ. ಖರ್ಗೆ ಮತ್ತು ಡಿಕೆಶಿಯವರಿಂದ ಒಂದೇ ಒಂದು ಹೇಳಿಕೆ ಕೊಡಿಸಿ ನೋಡೋಣ ಎಂದು ಹೇಳಿದ್ದಾರೆ.
ಕನ್ನಡಿಗರು 135 ಸೀಟು ಕೊಟ್ಟು ಗೆಲ್ಲಿಸಿದರೂ ಕರ್ನಾಟಕ್ಕೆ ಒಂದು ಸುಸ್ಥಿರ, ಸುಭದ್ರ ಕೊಡಲಾಗದ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ನಿಜಕ್ಕೂ ನಾಚಿಕೆಯಾಗಬೇಕು. ಕನ್ನಡಿಗರು ಕರ್ನಾಟಕವನ್ನು ಕಾಂಗ್ರೆಸ್ ಮುಕ್ತ ಮಾಡುವ ದಿನ ಬಹಳ ದೂರವಿಲ್ಲ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



