ಸಿದ್ದರಾಮಯ್ಯ ಅಹಿಂದ ನಾಯಕ ಅಲ್ಲ; ಕೇವಲ ಕುರುಬರ ನಾಯಕ ಅಷ್ಟೇ: ಅರವಿಂದ ಬೆಲ್ಲದ
ಓಬಿಸಿಯಲ್ಲಿ ಈಡಿಗ, ಮಡಿವಾಳ, ಸವಿತಾ ಸಮಾಜ, ಮರಾಠ, ಕಂಬಾರ, ಕುಂಬಾರರು, ವಿಶ್ವಕರ್ಮ ಸೇರಿದಂತೆ ಬಹಳಷ್ಟು ಸಮುದಾಯ ಇದೆ. ಆ ಸಮಾಜಗಳು ನಮ್ಮ ನಾಯಕ ಸಿದ್ದರಾಮಯ್ಯ ಎಂದು ಎಲ್ಲಿ ಒಪ್ಪಿಕೊಂಡಿದ್ದಾರೆ?

ನವದೆಹಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅಹಿಂದ ನಾಯಕ ಅಲ್ಲ. ಅವರು ಕುರುಬರ ನಾಯಕರು ಅಷ್ಟೇ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.
ನವದೆಹಲಿಯಲ್ಲಿ ಮಾತನಾಡಿದ ಅವರು, 'ಅಹಿಂದದಲ್ಲಿ ಹತ್ತಾರು ಜಾತಿಗಳಿವೆ. ಆ ಜಾತಿಯವರು ಯಾರೂ ಸಿದ್ದರಾಮಯ್ಯ ಅವರನ್ನು ನಾಯಕನೆಂದು ಒಪ್ಪಿಕೊಂಡಿಲ್ಲ. ಅವರು ಯಾವ ರೀತಿಯ ಒಬಿಸಿ ನಾಯಕ ಎಂದು ಪ್ರಶ್ನಿಸಿದರು. ಓಬಿಸಿಯಲ್ಲಿ ಈಡಿಗ, ಮಡಿವಾಳ, ಸವಿತಾ ಸಮಾಜ, ಮರಾಠ, ಕಂಬಾರ, ಕುಂಬಾರರು, ವಿಶ್ವಕರ್ಮ ಸೇರಿದಂತೆ ಬಹಳಷ್ಟು ಸಮುದಾಯ ಇದೆ. ಆ ಸಮಾಜಗಳು ನಮ್ಮ ನಾಯಕ ಸಿದ್ದರಾಮಯ್ಯ ಎಂದು ಎಲ್ಲಿ ಒಪ್ಪಿಕೊಂಡಿದ್ದಾರೆ? ಅವರು ಯಾವ ರೀತಿಯ ಓಬಿಸಿ ನಾಯಕ? ಅಲ್ಪಸಂಖ್ಯಾತರ ಮತ ಕಾಂಗ್ರೆಸ್ ಜೊತೆಗಿದೆ, ಅದು ಸಿದ್ದರಾಮಯ್ಯ ವೋಟ್ ಅಲ್ಲ, ಸಿದ್ದರಾಮಯ್ಯ ಅಹಿಂದಾ ನಾಯಕ ಅಲ್ಲ ಎಂದರು.
ಅಲ್ಪಸಂಖ್ಯಾತರ ಮತ ಕಾಂಗ್ರೆಸ್ ಜತೆಗೆ ಇದೆ. ಅದು ಸಿದ್ದರಾಮಯ್ಯ ಅವರ ಮತ ಬ್ಯಾಂಕ್ ಅಲ್ಲ. ಅಹಿಂದ ನಾಯಕನೆಂದು ಬಿಂಬಿಸಿಕೊಂಡು ಹೈಕಮಾಂಡ್ ಅನ್ನು ಬೆದರಿಸುವ ಕೆಲಸವನ್ನು ಸಿದ್ದರಾಮಯ್ಯ ಮಾಡುತ್ತಿದ್ದಾರೆಎಂದರು. ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಬಗ್ಗೆ ಪಕ್ಷದಲ್ಲಿ ಇನ್ನೂ ತೀರ್ಮಾನ ಆಗಿಲ್ಲ ಎಂದು ಸ್ಪಷ್ಟಪಡಿಸಿದರು ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗುವುದು ನಿಶ್ಚಿತ, ಹೊಸ ಸಿಎಂ ಯಾರು ಎನ್ನುವುದು ಗೊತ್ತಿಲ್ಲ. ಆದರೆ ಯಾರೇ ಸಿಎಂ ಆದರೂ ಕಾಂಗ್ರೆಸ್ ಪಕ್ಷದಿಂದ ರಾಜ್ಯಕ್ಕೆ ಒಳ್ಳೆಯದಾಗುವುದಿಲ್ಲ
ರಾಜ್ಯದಲ್ಲಿ ಆಡಳಿತ ಕುಸಿದು ಬಿದ್ದಿದೆ. ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆಯುತ್ತಿದೆ. ಸೂಟ್‌ಕೇಸ್ ತಲುಪಿಸುವ ಸ್ಪರ್ಧೆಯಲ್ಲಿ ಭ್ರಷ್ಟಾಚಾರ ಆಕಾಶಕ್ಕೆ ಮುಟ್ಟಿದೆ. ಸಿಎಂ ಯಾರು ಆಗಬೇಕು ಅದು ಅವರ ಪಕ್ಷದ ತಿರ್ಮಾನ. ಆದರೆ ಮುಖ್ಯಮಂತ್ರಿ ಬದಲಾವಣೆ ನಿಶ್ಚಿತ ಎಂದರು.

ಬಿಜೆಪಿ ನಾಯಕರು 'ಬುರುಡೆ ಗ್ಯಾಂಗ್'; ಏನೂ ಕೆಲಸ ಮಾಡದಿದ್ದರೂ ಜನ 'ಮೋದಿ, ಮೋದಿ' ಎಂದು ಜಪಿಸುತ್ತಾರೆ: ಸಿದ್ದರಾಮಯ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


