ಕಾಂಗ್ರೆಸ್‌ನಲ್ಲಿ 'ಪಿತೂರಿ' ನಡೆಯುತ್ತಿದೆ; ನಾವು ಹುಷಾರಾಗಿರಬೇಕು: ಸತೀಶ್ ಜಾರಕಿಹೊಳಿ
ರಾಜಣ್ಣ ಅವರು "ಪಿತೂರಿ"ಗೆ ಬಲಿಯಾಗಿದ್ದಾರೆ ಮತ್ತು ಅದರ ಹಿಂದೆ ಯಾರಿದ್ದಾರೆಂದು ಅವರಿಗೆ ತಿಳಿದಿದೆ ಎಂದು ಹೇಳಿದರು. ಇದನ್ನ ಸಮುದಾಯಕ್ಕೆ ಮಾಡಿದ ಮೋಸ ಅಂತ ಹೇಳಲಾಗೊಲ್ಲ. ಏನು ಅಂತ ರಾಜಣ್ಣ ಮುಂದೆ ಹೇಳ್ತೀನಿ ಅಂದಿದ್ದಾರೆ.

ಬೆಂಗಳೂರು: ರಾಜಕೀಯದಲ್ಲಿ ಯಾವಾಗಲೂ ಹಗೆ ಇದ್ದೇ ಇರುತ್ತದೆ. ನಾವು ಹುಷಾರಾಗಿ ಮತ್ತು ಬಿಗಿಯಾಗಿ ಇರಬೇಕಾಗುತ್ತದೆ. ನಮ್ಮ ಎಚ್ಚರಿಕೆಯಲ್ಲಿ ನಾವು ಇರಬೇಕು. ರಾಜಕೀಯದಲ್ಲಿ ಯಾವಾಗಲೂ ಹೀಗೇ ಇರುವುದಿಲ್ಲ. ವಾಪಸ್ ಆಗಲೂಬಹುದು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರನ್ನು ವಜಾಗೊಳಿಸಿರುವ ಸಂಬಂಧ ಸ್ವತಃ ಅವರೇ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುತ್ತಾರೆ. ರಾಜಣ್ಣ ಅವರು "ಪಿತೂರಿ"ಗೆ ಬಲಿಯಾಗಿದ್ದಾರೆ ಮತ್ತು ಅದರ ಹಿಂದೆ ಯಾರಿದ್ದಾರೆಂದು ಅವರಿಗೆ ತಿಳಿದಿದೆ ಎಂದು ಹೇಳಿದರು.
ಇದನ್ನ ಸಮುದಾಯಕ್ಕೆ ಮಾಡಿದ ಮೋಸ ಅಂತ ಹೇಳಲಾಗೊಲ್ಲ. ಏನು ಅಂತ ರಾಜಣ್ಣ ಮುಂದೆ ಹೇಳ್ತೀನಿ ಅಂದಿದ್ದಾರೆ. ರಾಜಕೀಯದಲ್ಲಿ ಒಬ್ಬರ ಮೇಲೆ ಒಬ್ಬರಿಗೆ ಹಗೆ ಇರುತ್ತದೆ. ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ದೆಹಲಿಗೆ ರಾಜಣ್ಣ ಹೋಗ್ತೀನಿ ಎಂದು ಹೇಳಿದ್ದಾರೆ. ಆಗ ಎಲ್ಲವೂ ಸರಿ ಹೋಗಬಹುದು ಎಂದು ತಿಳಿಸಿದ್ದಾರೆ.
ಪಕ್ಷದ ನಾಯಕರಿಗೆ ಸ್ಪಷ್ಟನೆ ನೀಡುತ್ತಾರೆ. ಮುಂದೆ ಇದನ್ನು ತಿಳಿ ಮಾಡೋಣ. ಸಮುದಾಯವನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಹೇಳಲಾಗುವುದಿಲ್ಲ. ಯಾಕೆಂದರೆ ಇದು ಉದ್ದೇಶಪೂರ್ವಕವಾಗಿ ಆಗಿದ್ದಲ್ಲ. ನಾಗೇಂದ್ರ ಘಟನೆಯೇ ಬೇರೆ ಈ ಘಟನೆಯೇ ಬೇರೆ. ಮುಂದಿನ ದಿನಗಳಲ್ಲಿ ರಾಜಣ್ಣ ಅವರೇ ಇದರ ಬಗ್ಗೆ ವಿವರಣೆ ನೀಡಲಿದ್ದಾರೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



