ಕಾಂಗ್ರೆಸ್ ಹುತ್ತದೊಳಗೆ ಎಂತೆಂಥಾ ಘಟ ಸರ್ಪಗಳಿವೆ ಗೊತ್ತೆ; JDS ನಿಂದ ಒಬ್ಬರನ್ನು ಎಳೆಯಲಿ ನೋಡೋಣ: ಯೋಗೇಶ್ವರ್ ಗೆ ಪುಟ್ಟರಾಜು ಸವಾಲು
ನಿಜವಾದ ರಣಹೇಡಿ ಎಂದರೆ ಯೋಗೇಶ್ವರ್. ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಲಾರದೆ ಓಡಿಹೋಗಿ ವಿರೋಧಿಗಳ ಜೊತೆ ಸೇರಿಕೊಂಡು ಕೊನೇ ಘಳಿಗೆಯಲ್ಲಿ ನಾಮಪತ್ರ ಸಲ್ಲಿಸಿದಿರಿ. ಮೊದಲು ನಿಮ್ಮ ನಡವಳಿಕೆ ಸರಿಪಡಿಸಿಕೊಳ್ಳಿ.

ಮಂಡ್ಯ: ಶಾಸಕ ಸಿ.ಪಿ.ಯೋಗೇಶ್ವರ್‌ಗೆ ತಾಕತ್ತಿದ್ದರೆ ಜೆಡಿಎಸ್‌ನಿಂದ ಒಬ್ಬನೇ ಒಬ್ಬ ಮುಖಂಡ ಅಥವಾ ಶಾಸಕರನ್ನು ತಮ್ಮ ಕಡೆಗೆ ಸೆಳೆಯಲಿ ನೋಡೋಣ ಎಂದು ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಸವಾಲು ಹಾಕಿದ್ದಾರೆ.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವು, ಜೆಡಿಎಸ್‌ನ ಶಾಸಕರು, ಮುಖಂಡರನ್ನು ಎಳೆಯುವುದು ಅಷ್ಟು ಸುಲಭದ ಮಾತಲ್ಲ. ಹಣದಿಂದ ಎಲ್ಲರನ್ನೂ ಖರೀದಿಸಲಾಗುವುದಿಲ್ಲ. ಎಲ್ಲರಿಗೂ ಅವರದ್ದೇ ಆದ ಸ್ವಾಭಿಮಾನವಿದೆ. ನಿಮ್ಮ ಹಣದ ಗಾಳಕ್ಕೆ ಎಲ್ಲರೂ ಬೀಳುತ್ತಾರೆ ಎಂದು ಭ್ರಮಿಸಿದ್ದರೆ ಅದು ನಿಮ್ಮ ಮೂರ್ಖತನ. ಈಗಷ್ಟೇ ಗೆದ್ದಿದ್ದೀರಿ. ಅಭಿವೃದ್ಧಿ ಕೆಲಸಗಳತ್ತ ಗಮನಹರಿಸಿ. ಅದನ್ನು ಬಿಟ್ಟು ಆಪರೇಷನ್ ಹಸ್ತದ ಮೂಲಕ ಜೆಡಿಎಸ್ ಮುಗಿಸಿ ಬಿಡುವೆನೆಂಬ ಮಾತುಗಳು ನಿಮ್ಮ ದುರಹಂಕಾರದ ಪರಮಾವಧಿಯನ್ನು ಸಾಕ್ಷೀಕರಿಸುತ್ತದೆ ಎಂದು ಕುಟುಕಿದರು.
ನಿಜವಾದ ರಣಹೇಡಿ ಎಂದರೆ ಯೋಗೇಶ್ವರ್. ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಲಾರದೆ ಓಡಿಹೋಗಿ ವಿರೋಧಿಗಳ ಜೊತೆ ಸೇರಿಕೊಂಡು ಕೊನೇ ಘಳಿಗೆಯಲ್ಲಿ ನಾಮಪತ್ರ ಸಲ್ಲಿಸಿದಿರಿ. ಮೊದಲು ನಿಮ್ಮ ನಡವಳಿಕೆ ಸರಿಪಡಿಸಿಕೊಳ್ಳಿ. ಡಿ.ಕೆ. ಶಿವಕುಮಾರ್ ನಿಮ್ಮ ಬಗ್ಗೆ ಮಾತನಾಡಿರುವ ರೆಕಾರ್ಡ್‌ಗಳು ನಮ್ಮ ಬಳಿ ಇದೆ. ಗೆಲುವಿನ ಮದದಲ್ಲಿ ಉದ್ಧಟತನ ಪ್ರದರ್ಶಿಸಿದರೆ ಮಂಡ್ಯದಿಂದ ರೈತರನ್ನು ಕರೆತಂದು ಚನ್ನಪಟ್ಟಣದ ಬೀದಿ ಬೀದಿಗಳಲ್ಲಿ ಪ್ರಚಾರ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಹಾವನ್ನು ತುಳಿದು ಅದು ಸೇರಿರುವ ಹುತ್ತಕ್ಕೇ ಯೋಗೇಶ್ವರ್ ಸೇರಿದ್ದಾರೆ, ಹೀಗಾಗಿ ಎಚ್ಚರದಿಂದ ಇರಬೇಕು. ಕಾಂಗ್ರೆಸ್ ಹುತ್ತ ಎಂತಹದ್ದು, ಅದರೊಳೊಗೆ ಎಂತೆಂಥಾ ಘಟ ಸರ್ಪಗಳಿವೆ ಎನ್ನುವುದು ನಿಮಗೆ ಗೊತ್ತಿಲ್ಲ. ನೀವಿರುವ ಕ್ಷೇತ್ರದಲ್ಲೇ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಇದ್ದಾರೆ. ಇಬ್ಬರನ್ನೂ ಎದುರಿಸಿ ರಾಜಕೀಯ ಬದುಕನ್ನು ಕಟ್ಟಿಕೊಂಡು ತೋರಿಸುವಂತೆ ಸವಾಲು ಹಾಕಿದರು.
ದೇವೇಗೌಡರು ಸ್ವಾರ್ಥಕ್ಕಾಗಿ ಎಂದಿಗೂ ರಾಜಕಾರಣ ಮಾಡಿದವರಲ್ಲ. ನೀರಾವರಿ ಯೋಜನೆಗಳ ಜಾರಿಗೆ, ರೈತರು ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲಾ ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ದೇವೇಗೌಡರು ರೈತಪರ ಕಾಳಜಿ ಇರುವ ರೈತನಾಯಕ. ಪ್ರಧಾನ ಮಂತ್ರಿ ಹುದ್ದೆಗೇರಿ ಇತಿಹಾಸ ಸೃಷ್ಟಿಸಿದವರು. ಅಂತಹವರನ್ನು ಮನೆಯಲ್ಲಿರಿ ಎನ್ನುವುದು ನಿಮ್ಮ ಸಣ್ಣತನದ ರಾಜಕಾರಣವನ್ನು ತೋರಿಸುತ್ತದೆ ಎಂದು ಟೀಕಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



